ಮಚ್ಚಿನ ಗ್ರಾಮ ಹಾಗೂ ಮಡಂತ್ಯಾರು ಗ್ರಾಮ ಪಂಚಾಯತ್‌ಗೆ ಸೇರಿದ ಜಂಟಿ ರಸ್ತೆ ಬಂಗೇರಕಟ್ಟೆ, ನೆತ್ತರ ರಸ್ತೆ ಡಾಮರೀಕರಣ ಎದ್ದು ಮಣ್ಣಿನ ರಸ್ತೆಯಾಗಿರುವ ಈ ರಸ್ತೆಗೆ ಡಾಮರೀಕರಣದ ಭಾಗ್ಯ ಎಂದು ಸ್ವಾಮಿ ಈ ಭಾಗದ ಜನರು ಚುನಾವಣೆಯ ಸಂದರ್ಭದಲ್ಲಿ ಭರವಸೆಯನ್ನು ನಂಬಿ ಕಾದು ಕಾಲ ಕಳೆದು ಪಡುವ ಕಷ್ಟ ಇಷ್ಟಲ್ಲ. ಇತ್ತೀಚೆಗೆ ನೆತ್ತರ ಶಾಲೆಯು ಬೆಳ್ಳಿಹಬ್ಬ ಆಚರಿಸಿಕೊಂಡು ಸಂಭ್ರಮ ಪಟ್ಟರು. ಈ ಶಾಲೆಗೆ ಮಾತ್ರ ತೆರಳಲು ಹೊರಲಾಡಿಕೊಂಡೆ ತೆರಳುವಂತಾಯಿತು. ನೆತ್ತರದಿಂದ ಬಂಗೇರ ಕಟ್ಟೆಯವರೆಗೆ ರಸ್ತೆಯ ಚರಂಡಿ, ಪೊದೆಗಳ ಸ್ವಚ್ಛತೆಯನ್ನು ಪ್ರತಿ ವರ್ಷ ಭಾಗ್ಯಶ್ರೀ ಮಿತ್ರಮಂಡಳಿ ಹಾಗೂ ಸ್ಥಳೀಯರ ಸಹಕಾರದಿಂದ ಶ್ರಮಾದಾನದಿಂದ ಮಾಡುತ್ತಿರುವುದು ಸಂತೋಷಕರ ಆದರೆ ಈ ರಸ್ತೆಯ ಸ್ಥಿತಿ ನೋಡುವವರಿಲ್ಲದಂತಾಗಿದೆ.
ಈ ರಸ್ತೆಯು ಬಂಗೇರಕಟ್ಟದಿಂದ ನೆತ್ತರ, ಮಾಣ್ಯ, ಮುಂದಿಲ, ತಣ್ಣೀರುಪಂಥ, ಬಿಜಿಲ, ಪಾಲೆದು, ಪಾಂಡವರಕಲ್ಲು ಪರಿಸರಗಳಿಗೆ ಸಂಪರ್ಕಕೊಂಡಿಯಂತಿರುವ ಈ ರಸ್ತೆ ಇನ್ನೂ ಡಾಮರೀಕರಣ ನಡೆಯದೆ ಇರುವುದು ಶೋಚನಿಯ. ಈ ಭಾಗದ ಜನರಿಗೆ ತುರ್ತು ಆರೋಗ್ಯದ ಸಮಸ್ಯೆಗಳು ಬಂದಾಗ ವಾಹನಗಳು ಬರಲು ಹಿಂದೇಟು ಹಾಕುವಂತ ಸ್ಥಿತಿ ನಿರ್ಮಾಣಗೊಂಡಿದೆ. ದಿನ ನಿತ್ಯ ಕೂಲಿ ಕೆಲಸಗಳಿಗೆ ಶಾಲಾ ಮಕ್ಕಳು ಶಾಲೆಗೆ ತೆರಳಲು ಸಮಯಕ್ಕಿಂತ ಮುಂಚಿತವಾಗಿ ಸಿದ್ದರಾಗಬೇಕಾಗಿದೆ. ಎಷ್ಟೆ ಅಪಘಾತಗಳು ಈ ರಸ್ತೆಯಲ್ಲಿ ನಡೆದರು ಕಣ್ಣ ಮುಂದೆ ಕೂತಿರುವ ಈ ರಸ್ತೆಯ ಜಂಟಿ ಪಂಚಾಯತ್‌ಗಳು ಸಂಬಂಧ ಪಟ್ಟ ಇಲಾಖೆಗಳು, ಜನಪ್ರತಿನಿಧಿಗಳು, ಇನ್ನಾದರು ತಾವು ಈ ಮಕ್ಕಳ, ವೃದ್ಧರ, ಜನರ ಕಷ್ಟಗಳನ್ನು ಪರಿಹರಿಸಿ ಶೀಘ್ರದಲ್ಲಿ ಡಾಮರೀಕರಣ ನಡೆಸಿ ಈ ಭಾಗದ ಜನರು, ಶಾಲಾ ಮಕ್ಕಳು ಪಡುವಂತಾ ಕಷ್ಟಗಳಿಗೆ ಮುಕ್ತಿ ದೊರೆಯಲಿ ಎಂದು ಗ್ರಾಮಸ್ಥರ ಆಗ್ರಹ.
ವರದಿ- ಹರ್ಷ ಬಳ್ಳಮಂಜ