September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಡಾಮರೀಕರಣ ಭಾಗ್ಯಕ್ಕಾಗಿ ಕಾಯುತ್ತಿರುವ ಬಂಗೇರಕಟ್ಟೆ- ನೆತ್ತರ ರಸ್ತೆ

ಮಚ್ಚಿನ ಗ್ರಾಮ ಹಾಗೂ ಮಡಂತ್ಯಾರು ಗ್ರಾಮ ಪಂಚಾಯತ್‌ಗೆ ಸೇರಿದ ಜಂಟಿ ರಸ್ತೆ ಬಂಗೇರಕಟ್ಟೆ, ನೆತ್ತರ ರಸ್ತೆ ಡಾಮರೀಕರಣ ಎದ್ದು ಮಣ್ಣಿನ ರಸ್ತೆಯಾಗಿರುವ ಈ ರಸ್ತೆಗೆ ಡಾಮರೀಕರಣದ ಭಾಗ್ಯ ಎಂದು ಸ್ವಾಮಿ ಈ ಭಾಗದ ಜನರು ಚುನಾವಣೆಯ ಸಂದರ್ಭದಲ್ಲಿ ಭರವಸೆಯನ್ನು ನಂಬಿ ಕಾದು ಕಾಲ ಕಳೆದು ಪಡುವ ಕಷ್ಟ ಇಷ್ಟಲ್ಲ. ಇತ್ತೀಚೆಗೆ ನೆತ್ತರ ಶಾಲೆಯು ಬೆಳ್ಳಿಹಬ್ಬ ಆಚರಿಸಿಕೊಂಡು ಸಂಭ್ರಮ ಪಟ್ಟರು. ಈ ಶಾಲೆಗೆ ಮಾತ್ರ ತೆರಳಲು ಹೊರಲಾಡಿಕೊಂಡೆ ತೆರಳುವಂತಾಯಿತು. ನೆತ್ತರದಿಂದ ಬಂಗೇರ ಕಟ್ಟೆಯವರೆಗೆ ರಸ್ತೆಯ ಚರಂಡಿ, ಪೊದೆಗಳ ಸ್ವಚ್ಛತೆಯನ್ನು ಪ್ರತಿ ವರ್ಷ ಭಾಗ್ಯಶ್ರೀ ಮಿತ್ರಮಂಡಳಿ ಹಾಗೂ ಸ್ಥಳೀಯರ ಸಹಕಾರದಿಂದ ಶ್ರಮಾದಾನದಿಂದ ಮಾಡುತ್ತಿರುವುದು ಸಂತೋಷಕರ ಆದರೆ ಈ ರಸ್ತೆಯ ಸ್ಥಿತಿ ನೋಡುವವರಿಲ್ಲದಂತಾಗಿದೆ.

ಈ ರಸ್ತೆಯು ಬಂಗೇರಕಟ್ಟದಿಂದ ನೆತ್ತರ, ಮಾಣ್ಯ, ಮುಂದಿಲ, ತಣ್ಣೀರುಪಂಥ, ಬಿಜಿಲ, ಪಾಲೆದು, ಪಾಂಡವರಕಲ್ಲು ಪರಿಸರಗಳಿಗೆ ಸಂಪರ್ಕಕೊಂಡಿಯಂತಿರುವ ಈ ರಸ್ತೆ ಇನ್ನೂ ಡಾಮರೀಕರಣ ನಡೆಯದೆ ಇರುವುದು ಶೋಚನಿಯ. ಈ ಭಾಗದ ಜನರಿಗೆ ತುರ್ತು ಆರೋಗ್ಯದ ಸಮಸ್ಯೆಗಳು ಬಂದಾಗ ವಾಹನಗಳು ಬರಲು ಹಿಂದೇಟು ಹಾಕುವಂತ ಸ್ಥಿತಿ ನಿರ್ಮಾಣಗೊಂಡಿದೆ. ದಿನ ನಿತ್ಯ ಕೂಲಿ ಕೆಲಸಗಳಿಗೆ ಶಾಲಾ ಮಕ್ಕಳು ಶಾಲೆಗೆ ತೆರಳಲು ಸಮಯಕ್ಕಿಂತ ಮುಂಚಿತವಾಗಿ ಸಿದ್ದರಾಗಬೇಕಾಗಿದೆ. ಎಷ್ಟೆ ಅಪಘಾತಗಳು ಈ ರಸ್ತೆಯಲ್ಲಿ ನಡೆದರು ಕಣ್ಣ ಮುಂದೆ ಕೂತಿರುವ ಈ ರಸ್ತೆಯ ಜಂಟಿ ಪಂಚಾಯತ್‌ಗಳು ಸಂಬಂಧ ಪಟ್ಟ ಇಲಾಖೆಗಳು, ಜನಪ್ರತಿನಿಧಿಗಳು, ಇನ್ನಾದರು ತಾವು ಈ ಮಕ್ಕಳ, ವೃದ್ಧರ, ಜನರ ಕಷ್ಟಗಳನ್ನು ಪರಿಹರಿಸಿ ಶೀಘ್ರದಲ್ಲಿ ಡಾಮರೀಕರಣ ನಡೆಸಿ ಈ ಭಾಗದ ಜನರು, ಶಾಲಾ ಮಕ್ಕಳು ಪಡುವಂತಾ ಕಷ್ಟಗಳಿಗೆ ಮುಕ್ತಿ ದೊರೆಯಲಿ ಎಂದು ಗ್ರಾಮಸ್ಥರ ಆಗ್ರಹ.
ವರದಿ- ಹರ್ಷ ಬಳ್ಳಮಂಜ

Related posts

ಅಂತಾರಾಷ್ಟ್ರೀಯ ಕಾರ್ಯಾಗಾರಕ್ಕೆ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿಯರು

Suddi Udaya

ಲಾಯಿಲ ಗ್ರಾ.ಪಂ.ನಲ್ಲಿ ಸ್ವಚ್ಛತಾ ಸಿಬ್ಬಂದಿಗಳಿಗೆ ರೈನ್ ಕೋಟ್ ಹಾಗೂ ಕೊಡೆ ವಿತರಣೆ

Suddi Udaya

ಕೊಕ್ರಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಸರಕಾರ ಆದೇಶ

Suddi Udaya

ಶಾಲೆತ್ತಡ್ಕ ಸರಕಾರಿ ಪ್ರೌಢಶಾಲೆಗೆ ಸತತ 6ನೇ ಬಾರಿ ಶೇ.100 ಫಲಿತಾಂಶ

Suddi Udaya

ಧರ್ಮಸ್ಥಳ: ಬಿಜೆಪಿ ಮಂಡಲದ ನೂತನ ಅಧ್ಯಕ್ಷ ಶ್ರೀನಿವಾಸ್ ರಾವ್ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya
error: Content is protected !!