ಮದ್ದಡ್ಕದಲ್ಲಿ ನ್ಯಾಯಬೆಲೆ ಅಂಗಡಿ ಶುಭಾರಂಭ

Suddi Udaya

Updated on:

ಕುವೆಟ್ಟು: ಮದ್ದಡ್ಕ ಜನತೆಯ ನ್ಯಾಯಬೆಲೆ (ರೇಷನ್ )ಅಂಗಡಿಯ ಕಳೆದ 3 ವರ್ಷಗಳ ಹಿಂದಿನ ಬೇಡಿಕೆ ಈಡೇರಿದಂತಾಗಿದೆ ಕೆಲವು ವರ್ಷಗಳಲ್ಲಿ ಕುವೆಟ್ಟು, ಓಡಿಲ್ನಾಳ ಪರಿಸರದ ಜನರೀಗೆ ನ್ಯಾಯಬೆಲೆ ಅಂಗಡಿ ಮದ್ದಡ್ಕದಲ್ಲಿ ಕಾರ್ಯನಿರ್ವಸುತ್ತಿತ್ತು ಕಾರಣಾಂತರದಿಂದ ಪಿಲಿಚಾಮುಂಡಿಕಲ್ಲು ಇಲ್ಲಿಗೆ ವರ್ಗಾವಣೆಯಾಗಿ ಜನರು ರೇಷನ್ ತರಲು ಬಹಳ ಕಷ್ಟ ಪಡುತ್ತಿದ್ದರು ಇದೀಗ ಕುವೆಟ್ಟು ಗ್ರಾಮ ಪಂಚಾಯತ್ ಮತ್ತು ಆಹಾರ ಇಲಾಖೆಯ ಸಹಕಾರದಲ್ಲಿ ಮತ್ತೆ ಮದ್ದಡ್ಕದಲ್ಲಿ ಜ 18 ರಂದು ಪ್ರಾರಂಭವಾಗಿದೆ.

ಕುವೆಟ್ಟು ಗ್ರಾಮ ಪಂ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ ನ್ಯಾಯಬೆಲೆ ಅಂಗಡಿ ಉದ್ಘಾಟಿಸಿದರು. ಆಹಾರ ಇಲಾಖೆಯ ನಿರೀಕ್ಷಕ ವಿಶ್ವರವರು ಉಪಸ್ಥಿತರಿದ್ದು ನಿರ್ವಾಣೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾ ಪಂ ಉಪಾಧ್ಯಕ್ಷ ಗಣೇಶ್ ಕುಲಾಲ್, ಮಾಜಿ ಅಧ್ಯಕ್ಷೆ ಆಶಾಲತ, ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಗೀತಾ ಸಾಲಿಯನ್, ಗ್ರಾ ಪಂ ಸದಸ್ಯರಾದ ಸಿಲ್ವೆಸ್ಟರ್ ಮೋನಿಸ್, ಸುಮಂಗಲ ಪ್ರಭು, ಶಾಲಿನಿ, ರಿಯಾಝ್, ಆಮೀನ,ಆನಂದಿ , ಮುಸ್ತಾಫ, ಮಾಜಿ ತಾ. ಪಂ ಪ್ರಭಾಕರ ಶೆಟ್ಟಿ ಉಪ್ಪಡ್ಕ, ನ್ಯಾಯ ಬೆಲೆ ಅಂಗಡಿ ನಿರ್ವಾಹಕಿ ನಿಕ್ಷೀತಾ ಮತ್ತಿತರರು ಉಪಸ್ಥಿತರಿದ್ದರು.

Leave a Comment

error: Content is protected !!