23.9 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಜ.25: ಕೊಕ್ಕಡ ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ “ಶ್ರೀ ಲಲಿತಾ ಸಹಸ್ರನಾಮ ಯಾಗ

ಕೊಕ್ಕಡ: ಯುವ ಕೇಸರಿ, ಕಾವು ಇವರ ಆಶ್ರಯದೊಂದಿಗೆ ಮೋದಿ ಮತ್ತೊಮ್ಮೆ ಎಂಬ ಮಹಾ ಸಂಕಲ್ಪದೊಂದಿಗೆ, ವೇ.ಮೂ. ಕಶೆಕೋಡಿ ಸೂರ್ಯನಾರಾಯಣ ಭಟ್ ಇವರ ಪೌರೋಹಿತ್ಯದಲ್ಲಿ “ಶ್ರೀ ಲಲಿತಾ ಸಹಸ್ರನಾಮ ಯಾಗ”ವು ಜ.25ರಂದು ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಲಿದೆ.


ಬೆಳಿಗ್ಗೆ ಗಂಟೆ 7.30ಕ್ಕೆ ಯಾಗ ಪ್ರಾರಂಭ, ಬೆಳಿಗ್ಗೆ10.30 ಕ್ಕೆ ಯಾಗ ಪೂರ್ಣಾಹುತಿ ನಂತರ ಧಾರ್ಮಿಕ ಸಭಾ ನಡೆಯಲಿದ್ದು, ಶ್ರೀ ಕ್ಷೇತ್ರ ಸೌತಡ್ಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.

ದಿಕ್ಸೂಚಿ ಭಾಷಣವನ್ನು ಬಾಲವಾಗ್ಮಿ ಕು| ಹಾರಿಕಾ ಮಂಜುನಾಥ್ ರವರು ನೆರವೇರಿಸಲಿದ್ದಾರೆ. ತ್ರಿಗುಣಾತ್ಮಿಕ, ಶ್ರೀ ದುರ್ಗಾಪರಮೇಶ್ವರೀ ಆಡಳಿತ ಟ್ರಸ್ಟ್‌ನ ಅಧ್ಯಕ್ಷ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ಕ್ಷೇತ್ರ ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಭಾಗವಹಿಸಲಿದ್ದಾರೆ.
ನಿವೃತ್ತ ಯೋಧರಾದ ಕೆ. ಮಹಾಬಲ ಮತ್ತು ಜಿ. ದೇವಪ್ಪ ಗೌಡ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

Related posts

ಬೆಳ್ತಂಗಡಿ : ಸಿಎಎ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

Suddi Udaya

ಎಸ್.ಡಿ.ಎಂ. ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಸ್ಪಟಿಕ ಸಂಘದ ವತಿಯಿಂದ ಕಾಲೇಜು ಮಟ್ಟದ ಸ್ಪರ್ಧೆ ‘ಕ್ರೆಸಿಟಾ’ ಫೆಸ್ಟ್

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ದೀಪ ಪ್ರದಾನ ಕಾರ್ಯಕ್ರಮ

Suddi Udaya

ಉಜಿರೆ  ಅತ್ತಾಜೆ ಕೇಶವ ಭಟ್ ಅವಿಭಕ್ತ ಕುಟುಂಬಕ್ಕೆ ಉಂಡೆಮನೆ ಪ್ರಶಸ್ತಿ   

Suddi Udaya

ಉಜಿರೆ ಹಳೆಪೇಟೆ ಬಳಿ ಮತ್ತೆ ರಸ್ತೆಗುರುಳಿದ ಮರ: ತಪ್ಪಿದ ಭಾರಿ ಅಪಾಯ

Suddi Udaya

ಕಡಿರುದ್ಯಾವರ ಹೇಡ್ಯ ನಿವಾಸಿ ಎಸ್.ಪಿ ಮ್ಯಾಥ್ಯೂ ನಿಧನ

Suddi Udaya
error: Content is protected !!