24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗುರುವಾಯನಕೆರೆ ಶಕ್ತಿ ನಗರದ ಜಂಕ್ಷನ್ ನಲ್ಲಿ ನಾಮಫಲಕ ಅಳವಡಿಕೆ

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗುರುವಾಯನಕೆರೆಯ ಶಕ್ತಿ ನಗರದ ಜಂಕ್ಷನ್ ನಲ್ಲಿ ಬೇರೆ ಬೇರೆ ಊರಿಗೆ ತೆರಳುವ ಸಾರ್ವಜನಿಕರಿಗೆ ಪ್ರಾಯೋಜನವಾಗಬೇಕೆಂಬ ಉದ್ದೇಶದಿಂದ ನಾಮಫಲಕವನ್ನು ಅಳವಡಿಸಲಾಗಿದೆ.

ಈ ಫಲಕವನ್ನು ಪ್ರಾಂತ್ಯ-12ರ ಪ್ರಾಂತ್ಯಾಧ್ಯಕ್ಷರಾದ ಲ| ಹೆರಾಲ್ಡ್ ತಾವ್ರೊ ರವರು ಅನಾವರಣಗೊಳಿಸಿ ಇದೊಂದು ಮಾದರಿ ಕಾರ್ಯ. ಇಂತಹ ಸೇವಾಕಾರ್ಯ ನಿರಂತರವಾಗಿ ಮಾಡುತ್ತಿದ್ದರೆ ನಿಜವಾದ ಅರ್ಥದಲ್ಲಿ ಸೇವೆಯೊಂದಿಗೆ ಊರು ಅಭಿವೃದ್ಧಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ. ಉಮೇಶ್ ಶೆಟ್ಟಿ, ಕಾರ್ಯದರ್ಶಿ ಲ. ಅನಂತಕೃಷ್ಣ, ಪ್ರಾಂತೀಯ ಸಮ್ಮೇಳನದ ಅಧ್ಯಕ್ಷರಾದ ಲ| ಜೆರಾಲ್ಡ್ ಲೋಬೊ ಅಲಂಗಾರು, ಪೂರ್ವಪ್ರಾಂತ್ಯಾಧ್ಯಕ್ಷರಾದ ಲ| ಧರಣೇಂದ್ರ ಕೆ ಜೈನ್, ಪೂರ್ವಾಧ್ಯಕ್ಷರಾದ ಲ| ರವೀಂದ್ರ ಶೆಟ್ಟಿ ಬಳಂಜ ಉಪಸ್ಥಿತರಿದ್ದರು.

Related posts

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ರೈತಮೋರ್ಚಾದ ಸಭೆ

Suddi Udaya

ಆಪರೇಷನ್ ಸಿಂಧೂರ್” – ಪಹಲ್ಗಾಮ್ ದಾಳಿಗೆ ಪ್ರತೀಕಾರ

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಐಟಿಐ ಕಾಲೇಜಿನಲ್ಲಿ ಸ್ತ್ರೀ ಆರೋಗ್ಯ ಮಾಹಿತಿ ಕಾರ್ಯಾಗಾರ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಆಟಿಡೊಂಜಿ ದಿನ

Suddi Udaya

ಅರಸಿನಮಕ್ಕಿ ಹೊಸ್ತೋಟ ಶಾಲಾ ಬಳಿ ಮರ ಬಿದ್ದು ರಸ್ತೆ ತಡೆ : ಅರಸಿನಮಕ್ಕಿ ನವಶಕ್ತಿಯ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಿಂದ ತೆರವು

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಶ್ರೀ ಗುರು ಪೂಜೋತ್ಸವ: ಸರ್ವೇಶ್ವರೀ ದೇವಿಯ ಪೂಜೆಯಲ್ಲಿ ನೂರಾರು ಮಹಿಳಾ ವೃತಧಾರಿಗಳು ಭಾಗಿ, ಸಾಧಕರಿಗೆ ಸನ್ಮಾನ,

Suddi Udaya
error: Content is protected !!