April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತೆಗೆದುಕೊಂಡ ಒಡವೆಗಳನ್ನು ಯಾಕೆ ಇನ್ನು ಕೊಟ್ಟಿಲ್ಲ ಎಂದು ಪ್ರಶ್ನಿಸಿದ ಮಹಿಳೆಗೆ ಕೈಯಿಂದ ಹೊಡೆದು ಕುತ್ತಿಗೆಯನ್ನು ಹಿಚುಕಿ ಜೀವಬೆದರಿಕೆ

ಬೆಳ್ತಂಗಡಿ: ತೆಗೆದುಕೊಂಡ ತನ್ನ ಒಡವೆಗಳನ್ನು ಯಾಕೆ ಇನ್ನು ಕೊಟ್ಟಿಲ್ಲ ಎಂದು ಕೇಳಿದ ಮಹಿಳೆಗೆ ವ್ಯಕ್ತಿಯೋರ್ವ ಕೈಯಿಂದ ಹೊಡೆದು ಕುತ್ತಿಗೆಯನ್ನು ಹಿಚುಕಿ ಉರುಡಾಟ ನಡೆಸಿ ಮಾನಕ್ಕೆ ಕುಂದುಂಟು ಮಾಡಿ ಜೀವ ಬೆದರಿಕೆ ಒಡ್ಡಿದ ಘಟನೆ ಜ.19ರಂದು ನಡೆದಿದೆ.

ಮೂಡುಬಿದಿರೆ ಮಹಾವೀರ ಕಾಲೇಜ್ ಬಳಿ,ಸುವರ್ಣ ನಗರ, ನಿವಾಸಿ  ಶ್ರೀಮತಿ ಜುಬೈದಾ ತಾಜುದ್ದೀನ್ ಶೇಕ್ ಎಂಬವರು ವೇಣೂರು ಪೊಲೀಸರಿಗೆ ನೀಡಿದ ದೂರಿನಂತೆ  ಜ.19ರಂದು ಪೆರಾಡಿ ಗ್ರಾಮದ ದುಗ್ಗನ ಬೆಟ್ಟು ಮನೆ ನಿವಾಸಿ ಸಲ್ಮಾನ್ ಫಾರೀಸ್  ಎಂಬಾತನು ಕಾಣಸಿಕ್ಕಿದಾಗ ಆತನಲ್ಲಿ ನನ್ನ ಒಡವೆಗಳನ್ನು ಯಾಕೆ ಇನ್ನು ಕೊಟ್ಟಿಲ್ಲ ಎಂದು ಹೇಳಿದಾಗ ಆತ ಏಕಾಏಕಿ ಕೋಪಗೊಂಡು ನಿನಗೆ ಚಿನ್ನ ವಾಪಾಸು ಕೊಡುವುದಿಲ್ಲ, ನೀನು ಏನು ಮಾಡುತ್ತಿಯಾ ಮಾಡಿಕೋ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕೆನ್ನೆಗೆ ಹೊಡೆದು ಕುತ್ತಿಗೆಯನ್ನು ಹಿಚುಕಿ ಉರುಡಾಟ ನಡೆಸಿ ಮಾನಕ್ಕೆ ಕುಂದುಂಟು ಮಾಡಿ ಜೀವ ಬೆದರಿಕೆ ಒಡ್ಡಿರುತ್ತಾನೆ ಎಂದು ಆರೋಪಿಸಿದ್ದಾರೆ. ವೇಣೂರು ಪೊಲೀಸ್ ಠಾಣಾ ಅ.ಕ್ರ: 08/2024 ಕಲಂ: 504 ,323, 354, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Related posts

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲಾ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಬೆಳ್ತಂಗಡಿ ಮುಖ್ಯ ಪಶು ವೈದ್ಯಾಧಿಕಾರಿ ಮಂಜ ನಾಯ್ಕ ಸೇವಾ ನಿವೃತ್ತಿ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಇಳಂತಿಲ ಗ್ರಾ. ಪಂ. ನ ಪ್ರಭಾರ ಅಧ್ಯಕ್ಷರಾಗಿ ಸವಿತಾ ಹೆಚ್. ಅಧಿಕಾರ ಸ್ವೀಕಾರ

Suddi Udaya

ದಿ| ಬಾಬು ಕುಡ್ತಡ್ಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ವೇಣೂರು ಸದಾಶಿವ ಕುಲಾಲ್ ಆಯ್ಕೆ

Suddi Udaya

ಕರಾಟೆ ಸ್ಪರ್ಧೆ : ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗೆ ಚಿನ್ನದ ಪದಕ

Suddi Udaya
error: Content is protected !!