ಅರಸಿನಮಕ್ಕಿ: ಅರಿಕೆಗುಡ್ಡೆ ಶ್ರೀ ವನದುರ್ಗ ದೇವಸ್ಥಾನದ ಬ್ರಹ್ಮಕಲಶ: ಚಪ್ಪರ ಮುಹೂರ್ತ

Suddi Udaya

Updated on:

ಅರಸಿನಮಕ್ಕಿ : ಅರಿಕೆಗುಡ್ಡೆ ಶ್ರೀ ವನದುರ್ಗ ದೇವಸ್ಥಾನದಲ್ಲಿ ಫೆ.17ರಿಂದ 26ರ ವರೆಗೆ ಪ್ರತಿಷ್ಟ ಅಷ್ಟಬಂಧ ಬ್ರಹ್ಮಕಲಶ ಜರುಗಲಿದ್ದು, ಆ ಪ್ರಯುಕ್ತ ಚಪ್ಪರ ಮುಹೂರ್ತವು ಫೆ.21ರಂದು ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಜರುಗಿತು.

ಈ ಸಂಧರ್ಭ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಿಗೆ ಸಮರ್ಪಿಸಲಾಯಿತು.ನಂತರ ವಿವಿಧ ಸಮಿತಿಗಳ ಸಭೆ ಜರುಗಿತು.

ಪ್ರಹ್ಲಾದ್ ತಾಮ್ಹಣ್ಕರ್, ಬೆಂಗಳೂರು ಮಾತನಾಡಿ ಜೀರ್ಣೋದ್ದಾರ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀರಂಗ ದಾಮ್ಲೆ, ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಬಾರಿಗ, ಜಯರಾಮ ನೆಲ್ಲಿತ್ತಾಯ ಶಿಶಿಲ, ವಾಮನ ತಾಮ್ಹಣ್ಕರ್, ಅರಸಿನಮಕ್ಕಿ, ಸುಧೀರ್ ಕುಮಾರ್ ಎಂ.ಎಸ್., ಮುರಳೀಧರ ಶೆಟ್ಟಿಗಾರ್,ಅರವಿಂದ ಕುಡ್ವ, ಕೇಶವ ರಾವ್ ನೆಕ್ಕಿಲು, ಮಂಜುಳಾ ಕಾರಂತ್, ಶಕುಂತಳಾ ಆಚಾರ್ಯ, ಸರೋಜಿನಿ ನಾಯ್ಕ್, ಶ್ರೀಕರ ರಾವ್, ದಿನಕರ್ ಕುರುಪ್ ಉಪಸ್ಥಿತರಿದ್ದರು.ವಿವಿಧ ಸಮಿತಿಗಳ ಸಂಚಾಲಕರು ತಮ್ಮ ಸಮಿತಿಗಳಿಂದ ಆದ ಕೆಲಸಗಳ ಮಾಹಿತಿ ನೀಡಿದರು.

ಪ್ರಕಾಶ್ ಪಿಲಿಕ್ಕಬೆ, ಜಯರಾಮ ನೆಲ್ಲಿತ್ತಾಯ, ಶ್ರೀರಂಗ ದಾಮ್ಲೆ, ವಾಮನ ತಾಮ್ಹಣ್ಕರ್, ಸುಧೀರ್ ಕುಮಾರ್ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.

ಪ್ರಾರ್ಥನಾ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಕಾಶ್ ಪಿಲಿಕ್ಕಬೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೃಶಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Comment

error: Content is protected !!