25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ: ಅಮೃತವರ್ಷಿಣಿ ಸಭಾಭವನದಲ್ಲಿ ರಾಮನಾಮ ತಾರಕ ಮಂತ್ರ ಪಠಣ

ಧರ್ಮಸ್ಥಳ: ಮರ್ಯಾದಾ ಪುರುಷೋತ್ತಮನಾಗಿ ಮೆರೆದ ಶ್ರೀರಾಮ ಪಿತೃವಾಕ್ಯ ಪರಿಪಾಲನೆ, ಕುಟುಂಬದವರ ಮೇಲಿನ ಪ್ರೀತಿ-ವಿಶ್ವಾಸ, ಸತ್ಯ-ಧರ್ಮ, ನ್ಯಾಯ-ನೀತಿ ಪರಿಪಾಲನೆ, ತಾಳ್ಮೆ, ದೃಢಸಂಕಲ್ಪ ಮೊದಲಾದ ಮಾನವೀಯಮೌಲ್ಯ ಹಾಗೂ ನೈತಿಕಗುಣಗಳಿಂದಾಗಿ ಸಾವಿರಾರು ವರ್ಷಗಳಿಂದ ಲಕ್ಷಾಂತರ ಜನರ ಪ್ರತಿ ಮನದಲ್ಲಿಯೂ, ಮನೆಯಲ್ಲಿಯೂ ಸ್ಥಿರವಾಗಿ ನೆಲೆಸಿದ್ದಾನೆ. ರಾಮನ ಹೆಸರು ನಮ್ಮ ಉಸಿರಾಗಬೇಕು. ಎಲ್ಲರೂ ರಾಮನಾಗಲು ಅಸಾಧ್ಯ. ಆದರೆ ರಾಮನ ಆದರ್ಶ ಗುಣಗಳನ್ನಾದರೂ ಪಾಲಿಸಿ ರಾಮರಾಜ್ಯದ ಕನಸು ನನಸಾಗಬೇಕು ಎಂದು ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.

ಅವರು ಧರ್ಮಸ್ಥಳದಲ್ಲಿ ಜ.22ರಂದು ಅಮೃತವರ್ಷಿಣಿ ಸಭಾಭವನದಲ್ಲಿ ರಾಮನಾಮ ತಾರಕ ಮಂತ್ರ ಪಠಣಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಮನನ್ನು ಹಲವರು ದೇವರಾಗಿ ಆರಾಧಿಸಿದರೆ ಅನೇಕ ಮಂದಿ ಆತನ ಆದರ್ಶ, ಮಾನವೀಯ ಗುಣಗಳಿಗಾಗಿ ಗೌರವಿಸಿ ಅನುಸರಿಸುತ್ತಾರೆ. ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರಾಣಪ್ರತಿಷ್ಠೆಯೊಂದಿಗೆ ಅದು ಧರ್ಮಸ್ಥಳದಂತೆ ಸರ್ವಧರ್ಮೀಯರ ಶ್ರದ್ಧಾ-ಭಕ್ತಿಯ ಕೇಂದ್ರವಾಗಿ ಬೆಳೆಯಲಿದೆ, ಬೆಳಗಲಿದೆ. ಅಯೋಧ್ಯೆಯೂ ಹಲವು ಮಂದಿ ತೀರ್ಥಂಕರರ ಜನ್ಮಸ್ಥಳವಾಗಿದ್ದು ಜೈನರಿಗೂ ಪವಿತ್ರ ತೀರ್ಥಕ್ಷೇತ್ರವಾಗಿದೆ ಎಂದು ಅವರು ಹೇಳಿದರು.

ಸಾಹಿತಿಗಳು, ಕವಿಗಳು, ರಾಮಾಯಣ ಗ್ರಂಥ ರಚನೆ ಮೂಲಕ ಪದ್ಯ, ನಾಟಕ, ಹರಿಕಥೆ, ಯಕ್ಷಗಾನ ಮೂಲಕ ರಾಮನ ಜೀವನ-ಸಾಧನೆ ಚಿತ್ರಿಸಿದ್ದಾರೆ. ವೈವಿಧ್ಯಮಯ ರಾಮಾಯಣ ಕೃತಿಗಳು ಪ್ರಕಟವಾಗಿವೆ. ಟಿ.ವಿ.ಯಲ್ಲಿ ರಮಾನಂದ ಸಾಗರರ ನೇತೃತ್ವದಲ್ಲಿ ಪ್ರಸಾರವಾದ ರಾಮಾಯಣ ಕೋಟ್ಯಾಂತರ ಜನರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ. ಮಾನಸಿಕ ಸ್ಥಿರತೆ ಹಾಗೂ ಮಾನವೀಯ ಮೌಲ್ಯಗಳಿಗಾಗಿ ರಾಮ ಕೋಟ್ಯಾಂತರ ಜನರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ದೃಢಸಂಕಲ್ಪ ಹಾಗೂ ಲಕ್ಷಾಂತರ ಭಕ್ತರ ಕಠಿಣ ವ್ರತ-ನಿಯಮಗಳ ಪಾಲನೆ, ಶ್ರದ್ಧಾಭಕ್ತಿಯಿಂದ ರಾಮಮಂದಿರದ ಕನಸು ನನಸಾಗಿದೆ. ಸೇವೆ ಮಾಡುವುದಕ್ಕಿಂತಲೂ ಸೇವೆ ಮಾಡಬೇಕೆನ್ನುವ ಹಂಬಲ ಮುಖ್ಯವಾಗಿದೆ ಎಂದು ಹೇಳಿ ಹೇಮಾವತಿ ಹೆಗ್ಗಡೆಯವರು ರಾಮನಾಮತಾರಕ ಮಂತ್ರ ಪಠಣಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಬೆಳ್ತಂಗಡಿ ತಾಲೂಕಿನ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯೊಂದಿಗೆ ಸಾಮೂಹಿಕ ಭಜನೆ ಹಾಗೂ ರಾಮನಾಮತಾರಕ ಮಂತ್ರ ಪಠಿಸಲಾಯಿತು. ಇದೇ ಸಂದರ್ಭದಲ್ಲಿ ಆಯೋಧ್ಯೆಯ ರಾಮಜನ್ಮಭೂಮಿಯ ಕರಸೇವೆಯಲ್ಲಿ ಭಾಗಿಯಾದ ಕೆಲವರನ್ನು ಸನ್ಮಾನಿಸಲಾಯಿತು

Related posts

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶ್ರೀ ವಿಘ್ನೇಶ್ವರ ಭಜನಾ ಮಂದಿರದಿಂದ ಪಾದಯಾತ್ರೆ

Suddi Udaya

ಕೊಕ್ಕಡದ ಗೇರು ನಿಗಮದ ತೋಟದಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಕರ್ತವ್ಯದ ವೇಳೆ ಬೆಳ್ತಂಗಡಿ ತಹಶೀಲ್ದಾ‌ರ್ ಮೇಲೆ ಹಲ್ಲೆಗೆ ಯತ್ನ: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಶಿಬಾಜೆಯಲ್ಲಿ ವಿದ್ಯುತ್ ಸ್ಪರ್ಶವಾಗಿ ಮೃತಪಟ್ಟ ಪ್ರತೀಕ್ಷಾ ಪ್ರಕರಣ: ದ.ಕ. ಜಿಲ್ಲಾ ಮೆಸ್ಕಾಂ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿದ ಶಾಸಕ ಹರೀಶ್ ಪೂಂಜ: ಹೆಚ್ಚುವರಿ ಪರಿಹಾರ ನೀಡುವಂತೆ ಮನವಿ

Suddi Udaya

ಗೇರುಕಟ್ಟೆ: ಇರೋಲು ವ್ಯಾಪಾರಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಮಾ.1: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಪಿಂಕ್ ಮ್ಯಾರಥಾನ್ “ನಾರಿ ಇನ್ ಪಿಂಕ್ ಸಾರಿ”ಕ್ಯಾನ್ಸರ್ ಜಾಗೃತಿ ಜಾಥಾ ಕಾರ್ಯಕ್ರಮ

Suddi Udaya
error: Content is protected !!