ಬೆಳ್ತಂಗಡಿ: ನಾವೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀರಾಮೋತ್ಸವವು ವಿಜೃಂಭಣೆಯಿಂದ ಜ.22 ರಂದು ನಡೆಯಿತು.
ಬೆಳಗ್ಗೆ ವಿಷ್ಣು ಸಹಸ್ರನಾಮ ಪಠಣದೊಂದಿಗೆ ಆರಂಭಗೊಂಡು ಪೂಜಾ ವಿಧಿ ವಿಧಾನಗಳೊಂದಿಗೆ ನಡೆಯಿತು. ವಿಶೇಷವಾಗಿ ಸಾರ್ವಜನಿಕರಿಗೆ ಗೂಡು ದೀಪ ಸ್ಪರ್ಧೆ ಹಾಗೂ ಮಕ್ಕಳಿಗೆ ಪ್ರಭು ಶ್ರೀ ರಾಮ, ಸೀತಾಮಾತೆ ಹಾಗೂ ಹನುಮಂತನ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು, ಇದರೊಂದಿಗೆ ಅಯೋಧ್ಯೆಯಲ್ಲಿನ ಶ್ರೀರಾಮದೇವರ ಪ್ರತಿಷ್ಠಾಪನೆಯ ನೇರ ವೀಕ್ಷಣೆಯು ಟ್ರಸ್ಟ್ ವತಿಯಿಂದ ಆಯೋಜನೆ ಮಾಡಲಾಗಿತ್ತು. ಊರ ಹಾಗೂ ಪರ ಊರ ಭಕ್ತರು ಇದರ ಸದುಪಯೋಗವನ್ನು ಪಡೆದರು.
ನಂತರ ಭಜನೆ ಹಾಗೂ ರಾಮ ತಾರಕ ಮಂತ್ರದೊಂದಿಗೆ ಧಾರ್ಮಿಕ ಸಭೆಯು ಆರಂಭಗೊಂಡು ಗ್ರಾಮದ ಕರಸೇವಕರಿಗೆ ಗೌರವಾರ್ಪಣೆ ಮಾಡಲಾಯಿತು. ಡಾ। ಪ್ರದೀಪ್ ಆಟಿಕುಕ್ಕೆ ಅವರು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಗೋಪಾಲಕೃಷ್ಣ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಹರೀಶ್ ಸಾಲ್ಯಾನ್, ನಿಕಟ ಪೂರ್ವಾಧ್ಯಕ್ಷರಾದ ಎ ಬಿ ಉಮೇಶ್ ,ಉಪಾಧ್ಯಕ್ಷರಾದ ತನುಜ ಶೇಖರ್, ವಿಶ್ವ ಹಿಂದು ಪರಿಷತ್ ಅಧ್ಯಕ್ಷರಾದ ವಿಜಯ ಕೆ ಹೊಡಿಕಾರ್ ವೇದಿಕೆಯಲ್ಲಿದ್ದರು, ಪ್ರಧಾನ ಕಾರ್ಯದರ್ಶಿಗಳಾದ ಧರ್ಣಪ್ಪಮೂಲ್ಯ ಸ್ವಾಗತಿಸಿ, ಗಣೇಶ್ ನೆಲ್ಲಿಪಲ್ಕೆ ವಂದಿಸಿದರು. ಸುರೇಶ್ ಕಾರ್ಯಕ್ರಮ ನಿರೂಪಿಸಿದರು.