April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅರಸಿನಮಕ್ಕಿ: ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಶ್ರೀರಾಮೋತ್ಸವ ಮತ್ತು ಹೋಳಿಗೆ ಹಬ್ಬ

ಅರಸಿನಮಕ್ಕಿ: ಅಯೋಧ್ಯ ಪ್ರಭು ಶ್ರೀರಾಮ ಮಂದಿರದ ಲೋಕಾರ್ಪಣೆ ಪ್ರಯುಕ್ತ ಕುಂಟಾಲಪಲ್ಕೆ ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ರಾಮೋತ್ಸವ ಮತ್ತು ಹೋಳಿಗೆ ಹಬ್ಬವನ್ನು ಜ.22ರಂದು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟೀಯ ಸ್ವಯಂ ಸೇವಾ ಸಂಘದ ಹಿರಿಯ ಕಾರ್ಯಕರ್ತರಾದ ಕೃಷ್ಣ ಭಟ್ ಕೊಕ್ಕಡ ಇವರು ಮಾತನಾಡಿ ಅಯೋಧ್ಯೆಯ ಹೋರಾಟದ ಬಗ್ಗೆ ಮಾತನಾಡಿ ಸಂಘ ಶಕ್ತಿಯ ಮಹತ್ವ ತಿಳಿಸಿದರು.

ಕಾರ್ಯಕ್ರಮದಲ್ಲಿ ಅರಿಕೆಗುಡ್ಡೆ ಬ್ರಹ್ಮ ಕಲಶದ ಅಧ್ಯಕ್ಷರು ಆಗಿರುವ ಪ್ರಕಾಶ್ ಪಿಲಿಕಬೆ ಮಾತನಾಡಿ ಶುಭ ಹಾರೈಸಿದರು. ಸಭಾ ಕಾರ್ಯಕ್ರಮದಲ್ಲಿ ಕಪಿಲ ಕೇಸರಿ ಹಿತೈಷಿಗಳಾದ ಅಶೋಕ್ ಭೀಡೆ, ಹತ್ಯಡ್ಕ ಸೇವಾ ಸಹಕಾರಿ ಸಂಘದ ಸದಸ್ಯರಾದ ಧರ್ಮರಾಜ ಗೌಡ ಅಡ್ಕಡಿ, ಹತ್ಯಡ್ಕ ಪಂಚಾಯತ್ ಸದಸ್ಯರಾದ ಪ್ರೇಮಚಂದ್ರ, ಕಪಿಲ ಕೇಸರಿ ಅಧ್ಯಕ್ಷರಾದ ರಾಜೇಶ್ ಗೌಡ ಬೊಳ್ಳೋಡಿ ಉಪಸ್ಥಿತರಿದ್ದರು.


ವ್ರಕ್ಷ ವರ್ಧನ್ ಗೋಖಲೆ ಪ್ರಸ್ತಾವಿಕ ನುಡಿಗಳಾಡಿದರು. ಸುಮಂತ್ ಗೌಡ ಅಳಕ್ಕೆ ಸ್ವಾಗತಿಸಿ ಅನ್ವಿತ್ ರೈ ವಂದಿಸಿದರು. ಶ್ರೀವತ್ಸ ಗೋಖಲೆ ಕಾರ್ಯಕ್ರಮ ನಿರೂಪಿಸಿದರು.
4 ತಂಡಗಳಿಂದ ಭಜನಾ ಕಾರ್ಯಕ್ರಮ ನಡೆದು ಹೋಳಿಗೆ ಹಬ್ಬ ಮತ್ತು ದೀಪಾವಳಿ ಹಬ್ಬ ಆಚರಿಸಲಾಯಿತು

Related posts

ಬೆದ್ರಬೆಟ್ಟು ಶ್ರೀ ಕ್ಷೇತ್ರ ಮಹಮ್ಮಾಯಿ ಮಾರಿಗುಡಿ ಜೀರ್ಣೋದ್ಧಾರದ “ವಿಜ್ಞಾಪನಾ ಪತ್ರ” ಬಿಡುಗಡೆ

Suddi Udaya

ಮಡಂತ್ಯಾರಿನಲ್ಲಿ ಭದ್ರಾ ಹೋಮ್ ಅಪ್ಲಾಯನ್ಸಸ್ ಮೂರನೇ ಶಾಖೆ ಶುಭಾರಂಭ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ

Suddi Udaya

ಪದ್ಮುಂಜ ಮುಗೇರಡಿ ನಿವಾಸಿ ಸುಶೀಲ ಶೆಟ್ಟಿ ನಿಧನ

Suddi Udaya

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ ಅದ್ವೈತ ರಥ ಯಾತ್ರೆಗೆ ಭವ್ಯ ಸ್ವಾಗತ

Suddi Udaya
error: Content is protected !!