September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಇದರ ವಾರ್ಷಿಕ ಮಹಾಸಭೆ

ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಇದರ 4ನೇ ವಾರ್ಷಿಕ ಸಭೆ ನ.21 ರಂದು ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಲೋಬೊ ಟವರ್ಸ್ ನಲ್ಲಿ ಜರಗಿತು.

ಅಧ್ಯಕ್ಷ ರೊನಾಲ್ಡ್ ಲೋಬೊರವರು ಪ್ರಾರ್ಥನೆ ಮೂಲಕ ಸಭೆಯನ್ನು ಪ್ರಾರಂಭಿಸಿ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಲ್ಯಾನ್ಸಿ ಪಿರೇರಾ ಒಂದು ವರ್ಷದಲ್ಲಿ ಸಂಘವು ನಡೆಸಿದಂತಹ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು. ಖಜಾಂಚಿ ಸುನಿಲ್ ಶೆಣೈರವರು ಕಳೆದ ವರ್ಷದ ಖರ್ಚು ವೆಚ್ಚಗಳನ್ನು ಸಭೆಯ ಮುಂದಿಟ್ಟು, ಅನುಮೋದನೆ ಪಡೆದರು. ಸಂಘವನ್ನು ಇನ್ನಷ್ಟು ಬಲಪಡಿಸುವುದು, ಹೊಸ ಸದಸ್ಯರ ಸೇರ್ಪಡೆ, ತುರ್ತು ನಿಧಿ ಸ್ಥಾಪನೆ ಇವುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸ್ಥಾಪಕ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಜತೆ ಕಾರ್ಯದರ್ಶಿ ಯಶವಂತ ಪಟವರ್ಧನ್, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಶಶಿಧರ ಪೈಯವರ ಧನ್ಯವಾದವಿತ್ತರು.

Related posts

ಬೆಳ್ತಂಗಡಿ ಮಂಜುಶ್ರೀ ಜೆಸಿಐ ವತಿಯಿಂದ ಜೂನಿಯರ್ ಜೇಸಿ ಪದಗ್ರಹಣ ಹಾಗೂ ಯೂತ್ ಡೇ ಕಾರ್ಯಕ್ರಮ

Suddi Udaya

ಅಳದಂಗಡಿ ನೂರುಲ್ ಇಸ್ಲಾಂ ಮದರಸದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಏಳು ವರ್ಷದ ಎಕ್ಸೆಲ್ ವಿದ್ಯಾರ್ಥಿ ಬೆನಕಗೆ ಕಂಚಿನ ಪದಕ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬ ಆಚರಣೆ

Suddi Udaya

ಉಜಿರೆ: ನವೀಕೃತ ಉದಯ ಚಿಕನ್ ಸೆಂಟರ್ ಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ

Suddi Udaya

ಪಡಂಗಡಿ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮದ್ದಡ್ಕ ಒಕ್ಕೂಟ ಹಾಗೂ ಶೌರ್ಯ ವಿಪತ್ತು ಘಟಕದಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya
error: Content is protected !!