ನೆಲ್ಯಾಡಿ : ಬೆಳ್ತಂಗಡಿ ಧರ್ಮ ಪ್ರಾಂತ್ಯದ ಏಕೈಕ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವವು ಜ.19 ಶುಕ್ರವಾರ ಸಂತ ಅಲ್ಫೋನ್ಸ ಸ್ವರೂಪ ಕ್ಕೆ ವಿಶೇಷ ದೂಪ ಪ್ರಾರ್ಥನೆ ಸಮರ್ಪಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯಿತು. ದೇಶ ವಿದೇಶ ಗಳಿಂದ ಸಂತ ಅಲ್ಫೋನ್ಸ ರಲ್ಲಿ ವಿಶೇಷ ಕೋರಿಕೆ ಗಳನ್ನಿಟ್ಟು ಒಂಬತ್ತು ದಿನಗಳ ನೋವೇನಾದಲ್ಲಿ ಭಾಗವಹಿಸಿ ಹರಕೆ ತೀರಿಸುವುದು ಇಲ್ಲಿನ ವಾಡಿಕೆ.
ನೂರಾರು ವಿದ್ಯಾರ್ಥಿಗಳು ಉತ್ತಮ ಫಲಿತಾಂಶಕ್ಕಾಗಿ ಸಂತ ಅಲ್ಫೋನ್ಸ ರಲ್ಲಿ ಹಬ್ಬದ ಮುಖ್ಯ ದಿನವಾದಜ.27ನೇ ಶನಿವಾರ ರಾತ್ರಿ ಪ್ರಾರ್ಥನೆಯನ್ನು ಸಲ್ಲಿಸುವರು. ಶನಿವಾರ ಸಂಜೆ 4.30ಕ್ಕೆ ಹಬ್ಬದ ಮುಖ್ಯ ಬಲಿಪೂಜೆ ನಡೆಯಲಿದೆ. ಬೆಂಗಳೂರಿನ ಸುಮನಹಳ್ಳಿ ಕ್ಲಾರಿಷನ್ ಸಭೆಯ ವಂದನಿಯ ಧ್ಯಾನ ಗುರು ಫಾ. ಟೋಮ್ ಸಿ ಎಂ ಎಫ್ ಅವರು ವಿಧಾನ ಪೂರ್ವಕ ದಿವ್ಯ ಬಲಿಪೂಜೆ ಮತ್ತು ಪೂಜಾ ವಿಧಿಗಳನ್ನು ನೆರವೇರಿಸಲಿರುವರು. ವಂದನಿಯ
ಫಾ. ವರ್ಗೀಸ್ ಕೈಪನಡ್ಕ ಫಾ. ಜೈಸನ್ ಬೆಥನಿ, ಫಾ. ಜೇಮ್ಸ್ ಬೆಥನಿ ವಿದ್ಯಾಲಯ ಇದರಲ್ಲಿ ಬಾಗವಹಿಸಲಿರುವರು. ನೆಲ್ಯಾಡಿ ಪೇಟೆ ಸುತ್ತಿ ಆಕರ್ಷಕ ಹಬ್ಬದ ಮೆರವಣಿಗೆ ನಡೆಯಲಿದೆ.
ಕೊನೆಯ ದಿನವಾದ 28ನೇ ಆದಿತ್ಯವಾರ ಅತಿವಿಧಾನ ಪೂರ್ವಕ ರಾಸ ಬಲಿಪೂಜೆ ವಂದನಿಯ ಫಾ. ಕ್ರಿಸ್ಟಿ ಸುಳ್ಯ,ಫಾ. ಜೋಸೆಫ್ ಓ ಸಿ ಡಿ ಫಾ. ಬಿಬಿನ್,ಫಾ. ಶಾಜಿ ಮಾತ್ಯು ಧರ್ಮ ಗುರುಗಳು ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿ ಭಾಗವಹಿಸಲಿದ್ದಾರೆ.
ಶನಿವಾರ ರಾತ್ರಿ ಏಶಿಯನೆಟ್ ಕೋಮೆಡಿ ಎಕ್ಸ್ ಪ್ರೆಸ್ ಪ್ರಸ್ತುತ ಪಡಿಸುವ ಹಾಸ್ಯ ಸಂಗೀತ, ರಸ ಸಂಜೆ ಅನ್ನ ಸಂತರ್ಪಣೆ ನಡೆಯಲಿದೆ.