25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರೋಟರಿ ಕ್ಲಬ್ ನಿಂದ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ರೂ.42 ಲಕ್ಷ ವೆಚ್ಚದ 4 ಡಯಾಲಿಸಿಸ್ ಯಂತ್ರಗಳು: 7 ಸಾವಿರ ಲೀಟರ್ ಸಾಮರ್ಥ್ಯದ ಆರ್.ಒ ಪ್ಲಾಂಟ್ ಹಸ್ತಾಂತರ

ಬೆಳ್ತಂಗಡಿ: ಕ್ಯಾನ್ ಫಿನ್ ಹೋಮ್ಸ್ ಲಿ. ಮತ್ತು ಇಂಟೆಲ್ ಫೌಂಡೇಶನ್, ರೋಟರಿ ಬೆಂಗಳೂರು ಇಂದಿರಾನಗರ, ರೋಟರಿ ಕ್ಲಬ್ ಬೆಳ್ತಂಗಡಿ ಸಹಕಾರದೊಂದಿಗೆ ಸಾಮಾಜಿಕ ಹೊಣೆಗಾರಿಕಾ ನಿಧಿಯಿಂದ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಸುಮಾರು 42 ಲಕ್ಷ ವೆಚ್ಚದ 4 ಡಯಾಲಿಸಿಸ್ ಯಂತ್ರಗಳು ಮತ್ತು ಏಳು ಸಾವಿರ ಲೀಟರ್ ಸಾಮರ್ಥ್ಯದ ಆರ್.ಒ ಪ್ಲಾಂಟನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಜ.25ರಂದು ಹಸ್ತಾಂತರಿಸಲಾಯಿತು.


ಮುಖ್ಯ ಅತಿಥಿಗಳಾಗಿ ರೋ. ಮೇಜ‌ರ್ ಡೋನರ್ ಹೆಚ್ ಆರ್ ಕೇಶವ್, ಬೆಳ್ತಂಗಡಿ ರೋಟರಿ ಕ್ಲಬ್‌ ಅಧ್ಯಕ್ಷರಾದ ರೋ. ಪಿ ಎಚ್ ಎಫ್ ಅನಂತ ಭಟ್ ಮಚ್ಚಿಮಲೆ, ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜ, ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್, ನ.ಪಂ. ನಿಕಟ ಪೂರ್ವ ಉಪಾಧ್ಯಕ್ಷ ಜಯಾನಂದ ಗೌಡ, ಹಿರಿಯ ವಕೀಲರಾದ ರೋ.ಧನಂಜಯ ರಾವ್ , ರಾಜೇಶ್ ಪೈ ಉಜಿರೆ, ಮೆ|ಜ (ನಿವೃತ್ತ) ಎಂ.ವಿ.ಭಟ್, ಕಾರ್ಯದರ್ಶಿ ರೋ. ಪಿ ಎಚ್ ಎಫ್ ವಿದ್ಯಾ ಕುಮಾ‌ರ್
ಕಾಂಚೋಡು, ಹಾಗೂ ರೋಟರಿಗಳಾದ ಪೂರಣ್ ವಮ೯, ಯಶವಂತ ಪಟವಧ೯ನ್, ಡಾ. ಶಶಿಧರ ಡೊಂಗ್ರೆ, ಮನೋರಮ ಭಟ್ , ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರಕಾಂತ್ ಮೊದಲಾದವರು ಉಪಸ್ಥಿತರಿದ್ದರು.

Related posts

ಭಾರೀ ಮಳೆಗೆ ಕಳೆಂಜ ಕುಕ್ಕಾಜೆಯಲ್ಲಿ ಮನೆಯ ಹಿಂಬದಿಯ ಗೋಡೆ ಕುಸಿತ

Suddi Udaya

ಎ.14 ರವರೆಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಹಬ್ಬ

Suddi Udaya

ಕಿರುತೆರೆ ನಿರ್ದೇಶಕ ಸುಭಾಷ್ ಅರ್ವರವರಿಗೆ ಉತ್ತಮ ನಿರ್ದೇಶಕ ಅನುಬಂಧ ಆವಾರ್ಡ್-2023: ಮಂಗಳ ಗೌರಿ, ರಂಗನಾಯಕಿ, ಗೀತಾ, ಕೆಂಡಸಂಪಿಗೆ ಧಾರಾವಾಹಿ ನಿರ್ದೇಶನ

Suddi Udaya

ಗಣೇಶ ಚತುರ್ಥಿಯ ರಜೆಯನ್ನು ಬದಲಾಯಿಸುವಂತೆ ಮನವಿ

Suddi Udaya

ಪುದುವೆಟ್ಟು: ನಡ್ಯೇಲು ಕಾಡಾನೆ ದಾಳಿ : ಅಪಾರ ಕೃಷಿ ಹಾನಿ

Suddi Udaya

ಸೇವಾಭಾರತಿಯಿಂದ ಶಾಲಾ ಮಕ್ಕಳಿಗೆ ಕಿಟ್ ವಿತರಣೆ

Suddi Udaya
error: Content is protected !!