24.5 C
ಪುತ್ತೂರು, ಬೆಳ್ತಂಗಡಿ
April 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಆಟೋ ರಿಕ್ಷಾದಲ್ಲಿ ಬಾಡಿಗೆಗೆ ಬಂದ ಚಿಕ್ಕಮಗಳೂರು ನಿವಾಸಿಯ ಮೇಲೆ ಹಲ್ಲೆ , ದರೋಡೆ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ : ಚಿಕ್ಕಮಗಳೂರು ನಿವಾಸಿ ಈಶ್ವರ ರವರು ಬೆಳ್ತಂಗಡಿಯ ಗುತ್ಯಡ್ಕ ಎಂಬಲ್ಲಿಗೆ ಆಟೋ ರಿಕ್ಷಾದಲ್ಲಿ ಬಾಡಿಗೆಗೆ ಬಂದು ಕೆಲಸ ಮುಗಿಸಿ, ರಿಕ್ಷಾದಲ್ಲಿ ಹೋಗುತ್ತಿರುವಾಗ ಉಕ್ಕುಡ ಎಂಬಲ್ಲಿ ಪ್ರವೀಣ್‌ ಗೌಡ ಹಾಗೂ ಇತರ ಇಬ್ಬರೂ ಆಟೋವನ್ನು ಅಡ್ಡಗಟ್ಟಿ ಈಶ್ವರರವರಿಗೆ ಮಾರಕಾಯುಧ ತೋರಿಸಿ, ಕೈಯಿಂದ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ರೂ 1450/- ನ್ನು ದರೋಡೆ ಮಾಡಿರುವುದಾಗಿ ನೀಡಿದ ದೂರಿನಂತೆ ಜ.23 ರಂದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಸೆ ಗ್ರಾಮ ಅಂಚೆ ಕಳಸ ತಾಲೂಕು ಚಿಕ್ಕಮಗಳೂರು ನಿವಾಸಿ ಈಶ್ವರ (52) ಎಂಬವರ ದೂರಿನಂತೆ, ಜ.23 ರಂದು ರಾತ್ರಿ ಬೆಳ್ತಂಗಡಿ ತಾಲೂಕು ಗುತ್ಯಡ್ಕ ಎಂಬಲ್ಲಿಗೆ ಆಟೋ ರೀಕ್ಷಾದಲ್ಲಿ ಬಾಡಿಗೆಗೆ ಬಂದು ಕೆಲಸ ಮುಗಿಸಿ, ತನ್ನ ಬಾಬ್ತು ರೀಕ್ಷಾದಲ್ಲಿ ಹೋಗುತ್ತಿರುವಾಗ ಉಕ್ಕುಡ ಎಂಬಲ್ಲಿ ಪ್ರವೀಣ್‌ ಗೌಡ ಹಾಗೂ ಇತರ ಇಬ್ಬರೂ ಆಟೋವನ್ನು ಅಡ್ಡಗಟ್ಟಿ ಮಾರಕಾಯುಧ ತೋರಿಸಿ, ಕೈಯಿಂದ ಹಲ್ಲೆ ನಡೆಸಿದ್ದು, ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ರೂ 1450/- ನ್ನು ದರೋಡೆ ಮಾಡಿರುತ್ತಾರೆ ಹಾಗೂ ಪಿರ್ಯಾದಿರವರ ಬಳಿಯಿದ್ದ ಅಡುಗೆ ಸಾಮಾನುಗಳನ್ನು ಕದ್ದುಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ ನಂ 08/2024 ಕಲಂ: 341,323,504,392, 379,, ಐಪಿಸಿ ಕಲಂ: 3(1)(S) ,3(2)(va) SC/ST ACT 2015 ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಮಚ್ಚಿನ ಸರಕಾರಿ ಪ್ರೌಢ ಶಾಲಾ ಪ್ರಾರಂಭೋತ್ಸವ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ

Suddi Udaya

ವೇಣೂರು: ಡೀಕಯ್ಯ ಪೂಜಾರಿ ನಿಧನ

Suddi Udaya

ಮಚ್ಚಿನ ಸ.ಪ್ರೌ. ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಸವಣಾಲು : ನೊಣಯ್ಯ ನಾಯ್ಕರವರ ಮನೆ ಹಿಂಭಾಗ ಗುಡ್ಡ ಕುಸಿತ: ಗ್ರಾ.ಪಂ. ನಿಂದ ಅಪಾಯಕಾರಿ ಮರ ತೆರವು

Suddi Udaya

ನ.24: ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ, ಮಹಿಳಾ ಹಾಗೂ ಯುವ ಬಂಟರ ವಿಭಾಗದ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya
error: Content is protected !!