ಉಜಿರೆ: ಅಲ್ ಬುಖಾರಿ ಮಸ್ಜಿದ್ ಆಡಳಿತ ಸಮಿತಿ ಹಾಗೂ ಮುಹಿಯುದ್ದೀನ್ ಅರಬಿಕ್ ಮದ್ರಸ ಕುಂಟಿನಿ ಇದರ ಸಹಭಾಗಿತ್ವದಲ್ಲಿ ಇಂದು ಮದ್ರಸ ಮೈದಾನದಲ್ಲಿ 75 ವರ್ಷದ ಗಣರಾಜ್ಯೋತ್ಸವ ನಡೆಸಲಾಯಿತು.
ಇಬ್ರಾಹಿಂ ಉಸ್ತಾದ್ ದುವಾ ನೇತ್ರತ್ವ ನೀಡಿದರು. ಉದ್ಘಾಟನೆಯನ್ನು ಸ್ಥಳೀಯ ಖತೀಬ್ ಇಸ್ಮಾಯಿಲ್ ಹನೀಫಿ ಉಸ್ತಾದ್ ನಡೆಸಿ ಸಂವಿಧಾನದ ಮಹತ್ವ ಹಾಗೂ ಗೌರವವನ್ನು ವಿವರಿಸಿದರು.
ಆಡಳಿತ ಸಮೀತಿಯ ರಹೀಂ ಪೈಂಟರ್,ಝಕರಿಯ್ಯಾ ಎಸ್.ಎಲ್.ಬಿ, ಯೂಸುಫ್ ಹಲೇಜಿಜಿ., ಅಬೂಬಕ್ಕರ್ ಪಂಡಿತ್, ಅಶ್ರಫ್ ಮೇಸ್ತ್ರಿ, ಮುಹಮ್ಮದ್ ದಿಡುಪೆ, ನವಾಝ್ ಬರ್ನ, ಹಾರೀಸ್ ಕೃಷ್ಣಾಪುರ ಉಪಸ್ಥಿತಿ ಇದ್ದರು.
ಧ್ವಜಾರೋಹಣ ನೇರವೇರಿಸಿ ಸಿಹಿ ತಿಂಡಿ ವಿತರಿಸಲಾಯಿತು. ಮುಖ್ಯೋಪಾಧ್ಯಾಯರಾದ ಉಮರುಲ್ ಫಾರೂಖ್ ಸಅದಿ ಪದ್ಮುಂಜ ಸ್ವಾಗತಿಸಿದರು.