24.1 C
ಪುತ್ತೂರು, ಬೆಳ್ತಂಗಡಿ
May 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆ: ಮನ್ ಶರ್ ವಿದ್ಯಾಸಂಸ್ಥೆಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆ

ಬೆಳ್ತಂಗಡಿ : “ಹೃದಯ ಹಾಗೂ ಮನಸ್ಸಿನಿಂದ ನಾವೆಲ್ಲ ಒಂದಾಗೋಣ, ಯಾರೂ ನಮ್ಮನ್ನು ಮುರಿಯಲು ಬಿಡದಿರೋಣ, ಆಗ ಮಾತ್ರ ನಾವು ಸ್ವಾತಂತ್ರ್ಯರು ಎಂದು ಅನಿಸಿಕೊಳ್ಳುವುದು”. ತತ್ವದ ಅಡಿಯಲ್ಲಿ ಮನ್ ಶರ್ ವಿದ್ಯಾ ಸಂಸ್ಥೆ ಗೇರುಕಟ್ಟೆ ಇಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ವಿದ್ಯಾರ್ಥಿಗಳ ಪರೇಡ್ ಮುಖೇನ ವಿದ್ಯಾಸಂಸ್ಥೆಯ ಜನರಲ್ ಮ್ಯಾನೇಜರ್ ಆದ ಹೈದರ್ ಮರ್ದಾಳ ಇವರು ಧ್ವಜಾರೋಹಣವನ್ನು ನೆರವೇರಿಸಿ, ಭಾರತ ಗಣರಾಜ್ಯದ ಸಂಪೂರ್ಣ ಸವಿವರವನ್ನು ವಿದ್ಯಾರ್ಥಿಗಳ ಮನಮುಟ್ಟುವಂತೆ ತಿಳಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೌಸರ್ ಪಲ್ಲಾದೆ ಇವರು ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಕಾರ್ಯವನ್ನು ನಿರ್ವಹಿಸಿದರು. ಹಾಗೆಯೇ ಪುಟಾಣಿ ಮಕ್ಕಳಿಂದ ಕಲರವಭರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.


ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಉಷಾ ಸ್ವಾಗತಿಸಿದರು, ಕೌಸರ್ ಪಲ್ಲಾದೆ ವಂದಿಸಿದರು. ಪಿಯುಸಿ ಉಪನ್ಯಾಸಕರಾದ ಹಂಸಶ್ರೀ ಬಿ.ಆರ್ ಕಾರ್ಯಕ್ರಮ ನಿರೂಪಿಸಿದರು.

Related posts

ತೋಟತ್ತಾಡಿ: ನದಿಗೆ ಸ್ನಾನಕ್ಕೆ ತೆರಳಿದ ಜೈಸನ್ ಪಿ.ಎಂ ರವರ ಶವ ಪತ್ತೆ

Suddi Udaya

ಸಾರ್ವಜನಿಕರಿಗೆ ಉಚಿತ ರಕ್ತದೂತ್ತಡ ಹಾಗೂ ಮಧುಮೇಹ ತಪಾಸಣೆ

Suddi Udaya

ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಒಂದು ಹಾಗೂ ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ “ಮಕ್ಕಳಿಗಾಗಿ ಕಥೆ” ಕಾರ್ಯಕ್ರಮ

Suddi Udaya

ಉಜಿರೆ: ಲಕ್ಷ್ಮಣ ಗೋರೆ ನಿಧನ

Suddi Udaya

ಆಕರ್ಷ ಗೆ ಪಿ. ಎಚ್. ಡಿ ಪ್ರದಾನ

Suddi Udaya

ಜ.14-23: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya
error: Content is protected !!