25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಗುರುವಾಯನಕೆರೆ ಯರ್ಡೂರು ರಾಮನಗರದ ಮನೆಯೊಂದಕ್ಕೆಹಾಡುಹಗಲೇ ನುಗ್ಗಿದ ಕಳ್ಳರು: ರೂ.15 ಸಾವಿರ ನಗದು, 50 ಸಾವಿರ ಮೌಲ್ಯದ ಚಿನ್ನದ ಸರ ಕಳವು

ಗುರುವಾಯನಕೆರೆ: ಕುವೆಟ್ಟು ಗ್ರಾಮದ ಗುರುವಾಯನಕೆರೆ ಅಯ್ಯಪ್ಪ ಗುಡಿ ಸಮೀಪದ ರಾಮನಗರ ಎಂಬಲ್ಲಿ ಹಾಡುಹಗಲೇ ಮನೆಯೊಂದರ ಬೀಗದ ಚಿಲಕವನ್ನು ಮುರಿದು ಒಳಗನುಗ್ಗಿದ್ದ ಕಳ್ಳರು ನಗದು, ಚಿನ್ನದ ಸರ ಸೇರಿದಂತೆ ಸುಮಾರು 70 ಸಾವಿರ ಮೌಲ್ಯದ ಸೊತ್ತುಗಳನ್ನು ಕಳವುಗೈದ ಘಟನೆ ಜ.31ರಂದು ಮಧ್ಯಾಹ್ನ ಸಂಭವಿಸಿದೆ.
ರಾಮನಗರ ಶ್ರೀ ದುರ್ಗಾ ನಿವಾಸಿ ರಾಘವೇಂದ್ರ ಆಚಾರ್ಯ ಇವರ ಮನೆಯಿಂದ ಈ ಕಳ್ಳತನ ನಡೆದಿದೆ. ರಾಘವೇಂದ್ರ ಆಚಾರ್ಯ ಅವರು ಬೆಳ್ತಂಗಡಿಯಲ್ಲಿ ಚಿನ್ನಾಭರಣ ತಯಾರಿ ಕೆಲಸವನ್ನು ಮಾಡುತ್ತಿದ್ದು ಬೆಳಿಗ್ಗೆ ಅಲ್ಲಿಗೆ ಹೋಗಿದ್ದರು. ಪತ್ನಿ ಖಾಸಗಿಯಾಗಿ ಕೆಲಸಕ್ಕೆ ಹೋಗಿದ್ದು, ಮಕ್ಕಳು ಶಾಲೆಗೆ

ಹೋಗಿರುವುದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಇದೇ ಸಂದರ್ಭವನ್ನು ನೋಡಿಕೊಂಡ ಕಳ್ಳರು ಮನೆಯ ಎದುರು ಬಾಗಿಲಿನ ಚಿಲಕವನ್ನು ಮುರಿದು ಒಳ ನುಗ್ಗಿ ಮೂರು ಗೋದ್ರೇಜ್‌ನ ಓಪನ್ ಮಾಡಿ ಬಟ್ಟೆ-ಬರೆಗಳನ್ನು ಹೊರಗೆ ಎಳೆದು ಹಾಕಿ ಚೆಲ್ಲಾಪಿಲ್ಲಿ ಗೊಳಿಸಿದ್ದಾರೆ. ಗೋದ್ರೇಜ್‌ನಲ್ಲಿದ್ದ ರೂ.15 ಸಾವಿರ ನಗದು ಹಾಗೂ ಸುಮಾರು 50 ಸಾವಿರ ಮೌಲ್ಯದ ಒಂದು ಪವನಿನ ಚಿನ್ನದ ಸರ ಹಾಗೂ ಬೆಳ್ಳಿಯ ಕೌಲಿಗೆಯನ್ನು ಕೊಂಡು ಹೋಗಿದ್ದಾರೆ ಎಂದು ಮನೆಯ

ಮಾಲಕ ರಾಘವೇಂದ್ರ ಆಚಾರ್ಯ ತಿಳಿಸಿದ್ದಾರೆ. ನಗ-ನಗದು ಸೇರಿ ಸುಮಾರು 70 ಸಾವಿರ ಮೌಲ್ಯದ ಸೊತ್ತುಗಳು ಸೇರಿದೆ ಎಂದು ಅಂದಾಜಿಸಲಾಗಿದೆ.
ಮಧ್ಯಾಹ್ನ ಸುಮಾರು 11.3೦ರಿಂದ 12.30ರ ನಡುವೆ ಈ ಕಳ್ಳತನ ನಡೆದಿದೆ. ಮನೆಯ ಚಿಲಕವನ್ನು ಮುರಿದು ಒಳನುಗ್ಗಿ ಕಳ್ಳತನ ನಡೆಸಿ ಮರಳಿ ಹೋಗುವಾಗ ಎದುರಿನ ಬಾಗಿಲನ್ನು ಲಾಕ್ ಹಾಕಿಕೊಂಡು ಹೋಗಿದ್ದರು. ಮನೆಯ ದೇವರ ಕೋಣೆಯಲ್ಲಿದ್ದ ಬೆಳ್ಳಿಯ ದೀಪ ಫ್ರಿಜ್‌ನ ಮೇಲಿದ್ದು, ಕಳ್ಳರು ಅವಸರದಲ್ಲಿ ಇದನ್ನು ಬಿಟ್ಟುಹೋಗಿರಬಹುದೆಂದು ಅಂದಾಜಿಸಲಾಗಿದೆ.

ಮಧ್ಯಾಹ್ನ ರಾಘವೇಂದ್ರ ಆಚಾರ್ಯ ಅವರು ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಸ್ಥಳೀಯ ಪರಿಸರದಲ್ಲಿ ಬೆಳಗ್ಗೆ ಅಪರಿಚತ ವ್ಯಕ್ತಿಯೋರ್ವ ಓಡಾಟ ನಡೆಸಿದ್ದನ್ನು ಸ್ಥಳೀಯರು ವಿಚಾರಿಸಿದಾಗ ಆತ ತಾನು ಜ್ಯೋತಿಷ್ಯ ಹೇಳುವವ ಎಂದು ಹೇಳಿದ್ದೆನ್ನನಲಾಗಿದೆ. ಈತನೇ ಈ ಕಳ್ಳತನ ನಡೆಸಿದನೇ ಅಥವಾ ಬೇರೆಯಾದರೂ ಈ ಕೃತ್ಯ ಎಸಗಿದರೇ, ಎಂಬ ಅನುಮಾನ ವ್ಯಕ್ತವಾಗಿದೆ. ಸಂಜೆ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related posts

ಕೊಯ್ಯೂರು ಪಂಚದುರ್ಗ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಕಡಿರುದ್ಯಾವರ: ತೋಟಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು: ಅಪಾರ ಕೃಷಿ ನಾಶ

Suddi Udaya

ಬೆಳ್ತಂಗಡಿ ಡಿ. ಕೆ.ಆರ್.ಡಿ.ಎಸ್ ನಿಂದ ಕ್ರಿಸ್ಮಸ್ ಆಚರಣೆ

Suddi Udaya

ಅರಸಿನಮಕ್ಕಿ: ನೆಕ್ಕರಡ್ಕ ಶ್ರೀ ವಿಠೋಬಾ ರಕುಮಾಯಿ ದೇವಸ್ಥಾನಕ್ಕೆ ಶಾಸಕ ಹರೀಶ್ ಪೂಂಜರಿಂದ 5 ಲಕ್ಷ ರೂ. ಮಂಜೂರು

Suddi Udaya

ಉಜಿರೆ ಸಂಧ್ಯಾ ಪ್ರೆಶ್ ಉತ್ಪಾದನಾ ಮತ್ತು ಪ್ಯಾಕೇಜಿಂಗ್ ಘಟಕದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಅರ್ಚನಾ ರಾಜೇಶ್ ಪೈ ರವರಿಗೆ ಮಹಾತ್ಮ ಗಾಂಧಿ ಸದ್ಭಾವನಾ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನಕ್ಕೆ ಕಾರ್ಕಳದ ಶಾಸಕ ವಿ ಸುನೀಲ್ ಕುಮಾರ್ ಭೇಟಿ; ವಿಶೇಷ ಪೂಜೆ

Suddi Udaya
error: Content is protected !!