September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಯ್ಯೂರು ಪಂಚದುರ್ಗ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

ಕೊಯ್ಯೂರು ಗ್ರಾಮ ಪಂಚಾಯತ್ ಮಟ್ಟದ ಪಂಚದುರ್ಗ ಸಂಜೀವಿನಿ ಮಹಿಳಾ ಒಕ್ಕೂಟ ಇದರ ಮಹಾಸಭೆಯನ್ನು ಸೆ. 23ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆದೂರುಪೆರಾಲ್ ಕೊಯ್ಯೂರು ಇಲ್ಲಿ ಶ್ರೀಮತಿ ಅಶ್ವಿನಿರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಪಂಚಾಯತ್ ಅಧ್ಯಕ್ಷರು, ಒಕ್ಕೂಟದ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ವೇದಿಕೆಯಲ್ಲಿರುವ ಎಲ್ಲಾ ಗಣ್ಯರು ಸೇರಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀಮತಿ ಶುಭಲಕ್ಷ್ಮಿರವರು 2024-25 ರ ವಾರ್ಷಿಕ ವರದಿ ಮತ್ತು ಜಮಾ ಖರ್ಚು ಮಂಡಿಸಿದರು. ಪಂಚಾಯತ್ ಅಧ್ಯಕ್ಷರು ಈ ಸಭೆಯನ್ನು ಉದೇಶಿಸಿ ಎಲ್ಲರಿಗೂ ‌ಶುಭ ಹಾರೈಸಿದರು. ಸಂಜೀವಿನಿ ಒಕ್ಕೂಟ ಕೊಡಮಾಡುವ ಸಮುದಾಯ ಬಂಡವಾಳ ನಿಧಿಯಿಂದ ಸಂಜೀವಿನಿ ಮಹಿಳೆಯರು ವಿವಿಧ ಆಹಾರೋತ್ಪನ್ನ ಚಟುವಟಿಕೆ ನಡೆಸಬೇಕು. ಆರ್ಥಿಕ ಮಟ್ಟ‌ ಏರಿಕೆಯಾಗಬೇಕು‌ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಹಿತನುಡಿದರು. ನೂತನ ಪದಾದಿಕಾರಿ ಆಯ್ಕೆ ಮಾಡಲಾಯಿತು.

ತಾಲೂಕಿನ ಸಂಪನ್ಮೂಲ ವ್ಯಕ್ತಿ( BRP- PRI) ಯಾದ ಶ್ರೀಮತಿ ಶ್ರೀಕಲಾ ಹಾಗೂ ಮಾದಕ ಮುಕ್ತ ಕರ್ನಾಟಕ ಪ್ರತಿಜ್ಞಾ ವಿಧಿಯನ್ನು ಮಾಡಿಸಿದರು. ಸಿಹೆಚ್ ಒ ಗೀತಾ ಬಿ ಲಿಂಗತ್ವಾಧಾರಿತ ದೌರ್ಜನ್ಯ, ಬಾಲ್ಯ ವಿವಾಹ , ಹೀಗೆ ಹಲವಾರು ಮಾಹಿತಿ ನೀಡಿದರು.

ವಲಯ ಮೇಲ್ವಚಾರಕಾರಾದ ಜಯಾನಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM) ಬಗ್ಗೆ ಸಂಪೂರ್ಣ ಸಮಗ್ರವಾದ ಮಾಹಿತಿಯನ್ನು ನೀಡಿದರು.ಆರ್ಥಿಕ ಸಾಕ್ಷರತೆ ಕೇಂದ್ರದ ಸಮಾಲೋಚಕಿ‌ ಉಷಾ ಕಾಮತ್ ಇನ್ಸೂರೆನ್ಸ್ ಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು‌ ಹಾಗೂ‌ ಸದಸ್ಯರು ಬೆಳೆದಿರುವ ತರಕಾರಿಗಳು, ಆಹಾರೋತ್ಪನ್ನ‌ ವಸ್ತುಗಳು, ಕೈಯಲ್ಲಿ‌ ತಯಾರಿಸಿದ ಕರಕುಶಲ ವಸ್ತುಗಳಾದ ಹೂವು ಬ್ಯಾಗ್ ಗಳನ್ನು ಪ್ರದರ್ಶನ‌ ಮಾಡಿ ಮಾರಾಟ ಮಾಡಲಾಯಿತು. ಮಹಾಸಭೆಯ ಲಕ್ಕಿ ಮಹಿಳೆ ಆಯ್ಕೆ ಮಾಡಿ‌ ಬಹುಮಾನಿತರಿಗೆ ಬಹುಮಾನ‌ ನೀಡಿ ಗೌರವಿಸಲಾಯಿತು.

ಶ್ರೀಮತಿ ಪೂರ್ಣಿಮಾ ಸ್ವಾಗತಿಸಿದರು. ತುಳಸಿ ಸಂಜೀವಿನಿ ಸಂಘದ ಸದಸ್ಯೆ ಸುನಂದ ಧನ್ಯವಾದವಿತ್ತರು.

Related posts

ಉಜಿರೆ ಎಸ್‌ಡಿಎಂ ನ್ಯಾಚುರಪತಿ ಕಾಲೇಜಿಗೆ ವಿಶೇಷ ಶಾಶ್ವತ ದೀಪಾಲಂಕಾರ

Suddi Udaya

ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರಾಮ ತಾರಕ ಮಂತ್ರ ಜಪಯಜ್ಞ ಹಾಗೂ ದೀಪೋತ್ಸವ

Suddi Udaya

ಕಲ್ಮಂಜ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂಭ್ರಮ: ಗುರುನಮನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಪೌರ ಕಾರ್ಮಿಕರ ದ.ಕ ಜಿಲ್ಲಾ ಮಟ್ಟದ ಜಂಟಿ ಸಮಾವೇಶ

Suddi Udaya

ಅಂಡಿಂಜೆ ಗ್ರಾ.ಪಂ. ಮಕ್ಕಳ ಗ್ರಾಮಸಭೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ವಿಸ್ತೃತ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Suddi Udaya
error: Content is protected !!