26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಾರತಮ್ಯವಿಲ್ಲದೆ ಎಲ್ಲಾ ಅರ್ಹರಿಗೂ ಸರಕಾರದ ಸೌಲಭ್ಯ ತಲುಪಬೇಕು ಎಂಬುದು ಕೇಂದ್ರದ ಬಜೆಟ್‌ನಲ್ಲಿರುವುದು ಸುಸ್ಪಷ್ಟ: ಪ್ರತಾಪಸಿಂಹ ನಾಯಕ್

ಬೆಳ್ತಂಗಡಿ: ತಾರತಮ್ಯವಿಲ್ಲದೆ ಎಲ್ಲಾ ಅರ್ಹರಿಗೂ ಸರಕಾರದ ಸೌಲಭ್ಯ ತಲುಪಬೇಕು ಎಂಬ ಮಹಾನ್ ಉದ್ದೇಶ ಕೇಂದ್ರದ ಬಜೆಟ್‌ನಲ್ಲಿರುವುದು ಸುಸ್ಪಷ್ಟ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ತಿಳಿಸಿದ್ದಾರೆ.


ಬಡವರು, ಮಹಿಳೆಯರು, ಯುವಜನರು ಮತ್ತು ಅನ್ನದಾತರೆಂಬ ನಾಲ್ಕು ದೇಶದ ಆಧಾರಸ್ತಂಭಗಳ ಬಗ್ಗೆ ಬಜೆಟ್ ಸಂಪೂರ್ಣ ಕೇಂದ್ರೀಕರಿಸಿದ್ದು, ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಧ್ಯೇಯದಡಿ 2047 ರವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡುವ ಸಂಕಲ್ಪವನ್ನು ಬಜೆಟ್ ಪುನರುಚ್ಚರಿಸಿದೆ.
ಮುಂದಿನ ಪೀಳಿಗೆಯನ್ನು ಗುರಿಯನ್ನಾಗಿರಿಸಿಕೊಂಡು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ವಿಕಸಿತ ಭಾರತವಾಗಲಿದೆ.


ರೈತರ ಆದಾಯ ಹೆಚ್ಚಿಸಲು ಅವರಿಗೆ ಅಗತ್ಯವಾದ ನೆರವು ನೀಡುವ, ಒಂದು ಕೋಟಿ ಮನೆಯ ಮೇಲೆ ಸೋಲಾರ್ ಫಲಕಗಳನ್ನು ಅಳವಡಿಸುವ, ಆಯುಷ್ಮಾನ್ ಯೋಜನೆಯನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೂ ವಿಸ್ತರಿಸುವ ಯೋಜನೆಯು ಸ್ವಾಗತಾರ್ಹವಾಗಿದೆ. ಒಟ್ಟಿನಲ್ಲಿ ದೇಶದ ಸರ್ವರೀತಿಯ ಉನ್ನತಿಗೆ ಬಜೆಟ್ ಪೂರಕವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

Related posts

ಮಾ.14-19: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ

Suddi Udaya

ಎಸ್ಐಟಿ ವಿಚಾರಣೆಗೆ ಜಯಂತ್ ಟಿ., ಗಿರೀಶ್ ಮಟ್ಟಣ್ಣವರ್, ಯ್ಯೂಟ್ಯೂಬರ್ ಗಳಾದ ಮನಾಫ್, ಅಭಿಷೇಕ್ ಹಾಜರು

Suddi Udaya

ಗುರುವಾಯನಕೆರೆ ವಿದ್ವತ್ ಪ.ಪೂ. ಕಾಲೇಜಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

Suddi Udaya

ಅಳದಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಅಧ್ಯಯನ ಪ್ರವಾಸ

Suddi Udaya

ಬಂಗ್ಲೆಗುಡ್ಡೆಯಲ್ಲಿ ಸಿಕ್ಕ ಏಳು ಅಸ್ಥಿಪಂಜರ ಎಫ್ಎಸ್ಎಲ್ ಗೆ ರವಾನೆ

Suddi Udaya

ಮುಂಡಾಜೆ: ರಾಷ್ಟ್ರೀಯ ಹೆದ್ದಾರಿ ಬದಿ ತ್ಯಾಜ್ಯ ರಾಶಿ

Suddi Udaya
error: Content is protected !!