28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿ

ಫೆ 27-ಮಾ 02: ಗುರುವಾಯನಕೆರೆ ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಕಾರ್ಯಕ್ರಮ

ಗುರುವಾಯನಕೆರೆ: ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ತುಳುನಾಡ ದೈವರಾಧಕರ ಮಹಾ ಸಮ್ಮೇಳನ “ಪರ್ವ”-2024 ವಿಶೇಷ ಕಾರ್ಯಕ್ರಮ ನಡೆಯಲಿದೆಯೆಂದು ಸನ್ಯಾಸಿ ಗಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ರಮದ ಅಧ್ಯಕ್ಷ ಸಂಪತ್ ಬಿ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇವರ ಆಶೀರ್ವಾದೊಂದಿಗೆ ದೈವದ ಅನುಗ್ರಹವಿರುವಂತಹ ಅತ್ಯಂತ ಶ್ರೇಷ್ಠವಾದ ಅಪರೂಪದ ಪರಂಪರೆ ನಮ್ಮ ಕರಾವಳಿಯ ತುಳುವರದು. ತುಳುನಾಡಿನ ದೈವರಾಧನೆಯ ಕುರಿತು ಅಧ್ಯಯನ ಮಾಡಿ ಮುಂದಿನ ತಲೆಮಾರಿಗೆ ತಿಳಿಸುವಂತ ವಿಶೇಷವಾದ ಪ್ರಯತ್ನ ಮಾಡುತ್ತಿದ್ದೇವೆ.

ತುಳುನಾಡಿನಲ್ಲಿ ಸುಮಾರು 1001 ದೈವಗಳಿವೆ. ಹಲವಾರು ಧಾರ್ಮಿಕ ಪಂಡಿತರು, ಪ್ರಸಿದ್ದ ವಿದ್ವಾಂಸರು, ಸಾಹಿತಿಗಳು ಅಧ್ಯಯನ ಮಾಡಿದ್ದಾರೆ.
ದೈವಗಳ ಪರಂಪಾರೀಕ ಹಿನ್ನಲೆ, ಕಾರಣಿಕ, ಮಹತ್ವ, ವಿಚಾರ ಮುಂದಿನ ಜನಾಂಗಕ್ಕೆ ಗೊತ್ತಾಗಬೇಕಾದರೆ ಅದನ್ನು ಯುವ ಮನಸ್ಸುಗಳಿಗೆ ತಿಳಿಸುವ ಪ್ರಯತ್ನವಾಗಬೇಕು.

ದೈವ ನರ್ತಕರ ಸಮಾವೇಶ, ದೈವದ ಪರಿಚಾರಕರ ಸಮಾವೇಶ, ದೈವಸ್ಥಾನದ ಆಡಳಿತ ಮುಖ್ಯಸ್ಥರ ಸಮಾವೇಶ ನಡೆಸಿ ಅವರ ವಿಚಾರಧಾರೆಯನ್ನು ಪಡೆದು ಸರಕಾರಕ್ಕೆ ನಿರ್ಣಯ ಒಪ್ಪಿಸುವಂತ ವಿನೂತನ ಪ್ರಯತ್ನ ಮಾಡಲಿದ್ದೇವೆ.
ತುಳುನಾಡಿನ ದೈವಾರಾಧನೆಯ ಸಮಗ್ರ ಅಧ್ಯಯನ ಮತ್ತು ದೈವಾರಾಧನೆಯಲ್ಲಿ ತೊಡಗಿಸಿಕೊಂಡವರಿಗೆ ಗೌರವಾರ್ಪಣೆ ಮಾಡುವ ನಿಟ್ಟಿನಲ್ಲಿ ವಿಚಾರಗೋಷ್ಠಿಗಳು, ಸಂವಾದ ಕಾರ್ಯಕ್ರಮ, ದೈವ ನರ್ತಕರಿಗೆ, ದೈವ ಪರಿಚಾರಕರಿಗೆ, ದೈವಸ್ಥಾನ ಮುಖ್ಯಸ್ಥರಿಗೆ ಗೌರವಾರ್ಪಣೆ ಮಾಡುವ ಆಶಯ ನಮ್ಮದಾಗಿದೆ.

ತುಳುನಾಡಿನ ದೈವರಾಧನೆಯನ್ನು ಜೀವನೋಪಾಯಕ್ಕಾಗಿ ಮಾಡಿದ ಅದೆಷ್ಟೋ ಕುಟುಂಬಗಳಿವೆ. ಅವರ ಬದುಕ ಅಗಿದೆ. ಅವರಿಗೆ ಮಾಸಶಾನ ಸಿಗುವಂತಬೇಕು.

ದೈವರಾಧನೆ ಬಗೆಗೆ ಶಾಲೆಯ ಪಠ್ಯ ಪುಸ್ತಕಕ್ಕೆ ಸೇರ್ಪಡಿಸಿದರೆ ತುಳುನಾಡಿನ ಇತಿಹಾಸ, ಪರಂಪರೆ, ಜನಪದ ಹಿನ್ನಲೆ ಮುಂದಿನ ಜನಾಂಗಕ್ಕೆ ತಿಳಿಯುತ್ತದೆ. ಈ ಕಾರ್ಯಕ್ರಮಕ್ಕೆ ‘ಪರ್ವ’ ಎಂಬ ಹೆಸರಿಟ್ಟಿದ್ದೇವೆ.
ಸನ್ಯಾಸಿ ಗುಳಿಗ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಫೆ. 27 ರಿಂದ ಮಾ 2 ವರೆಗೆ ನಡೆಯಲಿದೆಯೆಂದು ಸಂಪತ್ ಬಿ ಸುವರ್ಣ ತಿಳಿಸಿದ್ದಾರೆ.

Related posts

ಸೌಜನ್ಯಳ ಅತ್ಯಾಚಾರ ಕೊಲೆ ಪ್ರಕರಣವನ್ನು ಮರುತನಿಖೆ ನಡೆಸುವಂತೆ ತಾ| ಮಹಿಳಾ ಮಂಡಲ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Suddi Udaya

ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಶಿಶಿಲದ ಕಪಿಲಾ ನದಿಯಲ್ಲಿ ನಡೆದ ಮತ್ಸ್ಯ ದುರಂತಕ್ಕೆ 30 ವರ್ಷ

Suddi Udaya

ಉಜಿರೆ ಎಸ್.ಡಿ.ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪದವಿ ಪ್ರಧಾನ ಸಮಾರಂಭ

Suddi Udaya

ನಾರಾವಿ ಅರಸಕಟ್ಟೆ ಶ್ರೀ ಸೂರ್ಯ ಪ್ರೆಂಡ್ಸ್ ಮಂಚಕಲ್ಲು ನೂತನ ಸಮಿತಿ ರಚನೆ

Suddi Udaya

ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ‌’ಸುವರ್ಣ ಸಿರಿ 2025′: ಮುಂಡೂರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಪ್ರಶಸ್ತಿ.

Suddi Udaya
error: Content is protected !!