23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಡಂತ್ಯಾರು: ‘ನೇತ್ರ ವೈದ್ಯರ ನಡೆ ಗ್ರಾಮ ಪಂಚಾಯತ್ ಕಡೆ’ ಯೋಜನಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ಮಡಂತ್ಯಾರು: ಗ್ರಾಮ ಪಂಚಾಯತ್ ಮಡಂತ್ಯಾರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ವಿಭಾಗ ಮಂಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ತಂಗಡಿ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ದ.ಕ. ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ದ.ಕ. ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘ (ನಿ.) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಪಾರೆಂಕಿ ಮಡಂತ್ಯಾರು ಕಾರ್ಯಕ್ಷೇತ್ರ ರೋಟರಿ ಕ್ಲಬ್ ಮಡಂತ್ಯಾರು, ಜೇಸಿಐ ಮಡಂತ್ಯಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಗ್ರಾಮ ಪಂಚಾಯತ್ ಮಡಂತ್ಯಾರು ಮಂಗಳ ಕಲಾ ಸಾಹಿತ್ಯ ವೇದಿಕೆ ಪಟ್ಟಿ (ರಿ.) ಬಡಗನ್ನೂರು ಘಟಕ ಪುತ್ತೂರು ಯಶಸ್ವಿ ನಾಗರಿಕ ಸೇವಾ ಸಂಘ ವಾಸುದೇವನಗರ ಕಾರ್ಕಳ (ರಿ) ಇದರ ಸಂಯುಕ್ತಾಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ 32ನೇ ಕಾರ್ಯಕ್ರಮ ‘ನೇತ್ರ ವೈದ್ಯರ ನಡೆ ಗ್ರಾಮ ಪಂಚಾಯತ್ ಕಡೆ’ ಎಂಬ ಕಾರ್ಯಕ್ರಮ ಯೋಜನಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ಫೆ.3ರಂದು ಮಡಂತ್ಯಾರು ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಂಗಳೂರು ಪ್ರಸಾದ್ ನೇತ್ರಾಲಯ ಡಾ| ಕೃಷ್ಣ ಪ್ರಸಾದ್, ಬೆಳ್ತಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚಂದ್ರಕಾಂತ್, ಗ್ರಾ.ಪಂ ಅಧ್ಯಕ್ಷೆ ರೂಪಾ , ಉಪಾಧ್ಯಕ್ಷ ಗೋಪಾಲಕೃಷ್ಣ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದು ಶಿಬಿರದ ಪ್ರಯೋಜನ ಪಡೆದರು.

Related posts

ಕಬ್ಬಡಿ ಆಟಗಾರ ಪ್ರೀತಮ್ ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ರಾಜಕೇಸರಿ ಟ್ರಸ್ಟ್ ಸಂಸ್ಥಾಪಕ ದೀಪಕ್ ಜಿ ರವರಿಗೆ ಸ್ಪೂರ್ತಿ ಕುಮಾರ ಸೇವಾ ರತ್ನ ಪ್ರಶಸ್ತಿ

Suddi Udaya

ವಲಯ ಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಸ.ಪ್ರೌ.ಶಾಲೆ ಗೇರುಕಟ್ಟೆ ಪ್ರಥಮ

Suddi Udaya

ರಸ್ತೆ ಬದಿ ನಿಂತಿದ್ದ ಮಹಿಳೆಗೆ ವ್ಯಾಗನರ್ ಡಿಕ್ಕಿ: ತಾ.ಪಂ ಮಾಜಿ ಸದಸ್ಯ ಗೋಪಿನಾಥ ನಾಯಕ್ ಅವರ ಪತ್ನಿ ಅಂಜಲಿ ನಾಯಕ್ ಗಂಭೀರ ಗಾಯ : ಮಂಗಳೂರು ಆಸ್ಪತ್ರೆಗೆ ದಾಖಲು

Suddi Udaya

ಧರ್ಮಸ್ಥಳ ವ್ಯಾಪ್ತಿಯಲ್ಲಿ ಮೂರು ಬೈಕ್ ಮತ್ತು ಒಂದು ಕಾರು ಕಳ್ಳತನ ಪ್ರಕರಣ: ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಐದು ಜನ ಆರೋಪಿಗಳ ಬಂಧನ

Suddi Udaya

ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಹತ್ವದ ಸಭೆ

Suddi Udaya
error: Content is protected !!