29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮರೋಡಿ: ಪಾಣಾಲು-ಉಚ್ಚೂರು ಸಂಪರ್ಕ ರಸ್ತೆಗೆ ದಾನಿಗಳಿಂದ ವೃತ್ತ ನಿರ್ಮಾಣ

ಮರೋಡಿ: ಪಾಣಾಲು-ಉಚ್ಚೂರು ಕೂಡುರಸ್ತೆಯು ಮರೋಡಿ-ಬಜಿಲಪಾದೆ ಮತ್ತು ಮರೋಡಿ-ನಾರಾವಿ ಎಂಬ ಎರಡು ರಸ್ತೆಗಳನ್ನು ಸಂಪರ್ಕಿಸುವ ಏಕೈಕ ಪ್ರಮುಖವಾದ ರಸ್ತೆಯಾಗಿದೆ. ಈ ಕೂಡು ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಸುಮಾರು ಒಂದು ಎಕರೆಗಳಷ್ಟು ಬೆಲೆಬಾಳುವ ಜಮೀನನ್ನು ಪದ್ಮಕ್ಕ ಹೆಗ್ಗಡ್ತಿ ಮತ್ತು ಮಕ್ಕಳು, ಉಚ್ಚೂರು ಇವರು ಉದಾರವಾಗಿ ನೀಡಿರುತ್ತಾರೆ. ಅಲ್ಲದೇ ಪಾಣಾಲು ಎಂಬಲ್ಲಿ ಸುಮಾರು 30000/- ಅಂದಾಜು ವೆಚ್ಚದಲ್ಲಿ ಆಕರ್ಷಕವಾದ ವೃತ್ತ ನಿರ್ಮಾಣ ಮಾಡಿ, ರಸ್ತೆಯ ಮಾಹಿತಿಗಳುಳ್ಳ ನಾಮಫಲಕವನ್ನು ಪದ್ಮಕ್ಕ ಹೆಗ್ಗಡ್ತಿಯವರ ಪುತ್ರ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ದಿವಾಕರ ಹೆಗ್ಡೆ, ಮಯೂರ ಇವರು ಅಳವಡಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಪದ್ಮಕ್ಕ ಹೆಗ್ಗಡ್ತಿ ಕುಟುಂಬವು ಸಮಾಜಮುಖಿ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡು, ಸಮಾಜಕ್ಕೆ ಮಾದರಿಯಾಗಿ, ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.

Related posts

ಕಾಶಿಪಟ್ಣ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಪದ್ಮುಂಜ ಸರಕಾರಿ ಪ. ಪೂ. ಕಾಲೇಜಿಗೆ ಶೇ. 86.04 ಫಲಿತಾಂಶ

Suddi Udaya

ಫೆ.11 : ಬೆಳ್ತಂಗಡಿ ಧರ್ಮಪ್ರಾಂತ್ಯ ಸ್ಥಾಪನೆಯ ಬೆಳ್ಳಿ ಹಬ್ಬದ ಸಂಭ್ರಮ : 25 ಮನೆಗಳ ಕೀಲಿ ಕೈ ಹಸ್ತಾಂತರ ಹಾಗೂ ವಿದ್ಯಾನಿಧಿ ಕಾರ್ಯಕ್ರಮ

Suddi Udaya

ಎಸ್.ಡಿ.ಎಂ ಪ.ಪೂ. ಕಾಲೇಜಿನಲ್ಲಿ ಭಿತ್ತಿಪತ್ರಿಕೆ ಸ್ಪರ್ಧೆ

Suddi Udaya

ಪಡಂಗಡಿ: ಮಲ್ಲಿಪ್ಪಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸಾಮೂಹಿಕ ಶನಿ ಪೂಜೆ

Suddi Udaya

ಎಸ್.ಡಿ.ಎಮ್. ಪ.ಪೂ. ಕಾಲೇಜಿನಲ್ಲಿ, ಸ್ಪರ್ಧಾತ್ಮಕ ತರಗತಿಗಳ ಉದ್ಘಾಟನೆ

Suddi Udaya
error: Content is protected !!