ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹಿಂದೂ ಸಂಗಮ ಆಯೋಜನಾ ಸಮಿತಿ ಬಳಂಜ ಮಂಡಲದಿಂದ “ಹಿಂದೂ ಸಂಗಮ” ಕಾರ್ಯಕ್ರಮ

ಕಾಪಿನಡ್ಕ: ಹಿಂದೂ ಸಂಗಮ ಆಯೋಜನಾ ಸಮಿತಿ ವೇಣೂರು ತಾಲೂಕು ಬಳಂಜ ಮಂಡಲದಿಂದ ಹಿಂದೂ ಸಂಗಮ ಕಾರ್ಯಕ್ರಮವು ತೆಂಕಕಾರಂದೂರು ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಜ 25ರಂದು ನಡೆಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಪ್ರಚಾರಕ ಸುಧೀಶ್ ದಿಕ್ಸೂಚಿ ಭಾಷಣ ಮಾಡಿದರು.

ಹಿಂದೂ ಸಂಗಮದ ಅಧ್ಯಕ್ಷತೆಯನ್ನು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರಾದ ಕೆ.ಕೃಷ್ಣ ಸಂಪಿಗೆತ್ತಾಯ ವಹಿಸಿದ್ದರು.

ವೇದಿಕೆಯಲ್ಲಿ ಹಿಂದೂ ಸಂಗಮ ಸಮಿತಿ ಉಪಾಧ್ಯಕ್ಷರಾದ ಪಿ.ಎನ್ ಪುರುಷೋತ್ತಮ, ಹಿಂದೂ ಸಂಗಮ ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯ ಗೌಡ,ಹಿಂದೂ ಸಂಗಮ ಆಯೋಜನ ಸಮಿತಿ ಬಳಂಜ ಮಂಡಲದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಉಪಸ್ಥಿತರಿದ್ದರು.

ಗುಂಡೇರಿಯಿಂದ ಸಾವಿರಾರು ಹಿಂದೂ ಬಂಧುಗಳು ಬ್ರಹತ್ ಮೆರವಣಿಗೆಯ ಮೂಲಕ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಾಗಿ ಬಂದು ದೇವರಿಗೆ ಪೂಜೆ ಸಲ್ಲಿಸಿದರು. ಶೋಭಾಯಾತ್ರೆಯಲ್ಲಿ ಕುಣಿತಾ ಭಜನೆ, ರಾಮ- ಸೀತೆ, ಭಾರತ ಮಾತೆ ಚಿತ್ರಗಳು ಎಲ್ಲರ ಗಮನ ಸೆಳೆಯಿತು. ಯುವಕರು,ಮಹಿಳೆಯರು,ಮಕ್ಕಳು ಅತ್ಯಂತ ಖುಷಿಯಿಂದ ಪಾಲ್ಗೊಂಡರು. ಬಳಿಕ ಗೋ ಪೂಜೆ ನೇರವೇರಿಸಲಾಯಿತು. ಸಣ್ಣ ಸಣ್ಣ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪ್ರಮುಖರಾದ ಸಂತೋಷ್ ಕುಮಾರ್ ಕಾಪಿನಡ್ಕ,ಸದಾನಂದ ಪೂಜಾರಿ ಉಂಗಿಲಬೈಲು, ಸಂತೋಷ್ ಹೆಗ್ಡೆ, ಅನಿಲ್ ಕುಮಾರ್ ಮಾಳಿಗೆ ಮನೆ,ಪ್ರಕಾಶ್ ಪುರೂಹಿತ್, ಪ್ರತೀಶ್ ಪೆರಿಂಜೆ, ಸುಧೀರ್ ಆರ್ ಸುವರ್ಣ, ಶ್ರೀನಿವಾಸ್ ರೈ ಕಾರಂದೂರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಭಾಗಿಯಾಗಿದ್ದರು.

ಹಿಂದೂ ಸಂಗಮ ಆಯೋಜನ ಸಮಿತಿ ಬಳಂಜ ಮಂಡಲದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಸ್ವಾಗತಿಸಿದರು. ಆರ್ಯನ್ ಇವರಿಂದ ಅಮೃತ ವಚನ, ನಾರಾಯಣ್ ಕಲಿಕ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಕಲಿಕ ವೈಯಕ್ತಿಕ ಗೀತೆ ಹಾಡಿದರು. ಎಂ.ಪಿ ಶೇಖರ್ ವಂದಿಸಿದರು.

Related posts

ಶ್ರೀ ಕ್ಷೇ.ಧ.ಗ್ರಾ. ಯೋಜನೆ ನಾರಾವಿ ವಲಯದ ದೇಜಮ್ಮರಿಗೆ ವೀಲ್ ಚೇರ್ ವಿತರಣೆ

Suddi Udaya

ಲಾಯಿಲ ಬಲಮುರಿ ವಿಘ್ನೇಶ್ವರನ ಸನ್ನಿಧಿಯಲ್ಲಿ ಶಾಸಕ ಹರೀಶ್ ಪೂಂಜಾರ ನೇತೃತ್ವದಲ್ಲಿ 108 ಕಾಯಿ ಗಣಹೋಮ

Suddi Udaya

ಬೆಳ್ತಂಗಡಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಲೋಕಾಯುಕ್ತ ಅಧಿಕಾರಿಗಳ ಭೇಟಿ: ವಿವಿಧ ವಿಭಾಗಗಳ ಪರಿಶೀಲನೆ

Suddi Udaya

ಬೆಳ್ತಂಗಡಿ: ಪೋಲಿಸರ ಸೂಚನೆ ನಿರ್ಲಕ್ಷಿಸಿ ಅಕ್ರಮಕೂಟ ಸೇರಿದ ಹಿನ್ನೆಲೆ ಅನಿಲ್ ಕುಮಾರ್ ಅಂತರ, ಪ್ರಸನ್ನರವಿ, ಕುಸುಮಾವತಿ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣ ದಾಖಲು

Suddi Udaya

ಬಂದಾರು: ಪಾಣೆಕಲ್ಲು ಶಿರಾಡಿ ಗ್ರಾಮ ದೈವ ಸಪರಿವಾರ ದೈವಸ್ಥಾನ ಕಾಲಾವಧಿ ನೇಮೋತ್ಸವದ ಸಮಾಲೋಚನಾ ಸಭೆ

Suddi Udaya

ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ

Suddi Udaya
error: Content is protected !!