25.4 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳಿಯ ಗ್ರಾ.ಪಂ. ಗ್ರಾಮ ಸಭೆ : ಲೋಕೋಪಯೋಗಿ ಇಲಾಖೆಯವರು ಬರುವ ತನಕ ನಿಲ್ಲುತೇವೆ: ಕೇಶವ ಪೂಜಾರಿ

ಗೇರುಕಟ್ಟೆ :ಕಳಿಯ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷರಾದ ದಿವಾಕರ್ ಎಂ.ಇವರ ಅಧ್ಯಕ್ಷತೆಯಲ್ಲಿ ಕಳಿಯ ಸಹಕಾರಿ ಸಭಾಭವನದಲ್ಲಿ ಫೆ .3ರಂದು ನಡೆಯಿತು.
ನೋಡೆಲ್ ಅಧಿಕಾರಿಯಾಗಿ ವಲಯ ಅರಣ್ಯಧಿಕಾರಿ ಸಾಮಾಜಿಕ ಅರಣ್ಯ ಇಲಾಖೆಯ ವಿದ್ಯಾ ವಹಿಸಿದರು.

ವರದಿ ವನ್ನು ಕುಂಞ ಕೆ. ಸಭೆಗೆ ಮಂಡಿಸಿದರು. ಲೆಕ್ಕ ಪತ್ರ ವನ್ನು ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ್ ಸಭೆಗೆ ತಿಳಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯವರು ಗ್ರಾಮ ಸಭೆಗೆ ಬರುತ್ತಿಲ್ಲ, ಇವತ್ತಿನ ಗ್ರಾಮ ಸಭೆ ಬರುವಾಗ ತನಕ ನಿಲ್ಲುತೇವೆ ಎಂದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಪೂಜಾರಿ ಒತ್ತಾಯಿಸಿದರು

ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಮೆಸ್ಕಾಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಪಂಚಾಯತ್ ಇಂಜಿನಿಯರ್ ಉಪ ವಿಭಾಗ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಇಂದಿರಾ ಬಿ. ಮತ್ತು ಸದಸ್ಯರಾದ ಸುಭಾಷಿನಿ ಗೌಡ, ವಿಜಯ್ ಗೌಡ, ಸುಧಾಕರ್ ಮಜಲು, ಯಶೋದರ ಶೆಟ್ಟಿ ಮಾಣಿಕ್ಯ, ಕುಸುಮ, ಶ್ವೇತಾ ಶ್ರೀನಿವಾಸ್, ಪುಷ್ಪಲತ, ಮರಿಟ ಪಿಂಟೋ, ಲತೀಫ್, ಅಬ್ದುಲ್ ಕರಿಂ, ಹರೀಶ್ ಕುಮಾರ್ ಹಾಗೂ ಗ್ರಾಮಸ್ಥರು ಸಿಬ್ಬಂದಿ ವರ್ಗದರು ಉಪಸ್ಥಿತರಿದ್ದರು.

Related posts

ಜ.16: ಬೆಳ್ತಂಗಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಪ.ರಾ. ಶಾಸ್ತ್ರಿ ಅಭಿನಂದನಾ ಸಮಿತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಭೇಟಿ

Suddi Udaya

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನೂತನ ಕಟ್ಟಡದ ಶಿಲಾನ್ಯಾಸ

Suddi Udaya

ಶ್ರೀ ಕ್ಷೇತ್ರ ತೆಕ್ಕಾರಿಗೆ ಶಾಸಕ ಹರೀಶ್ ಪೂಂಜಾ ಭೇಟಿ : ಕ್ಷೇತ್ರದ ರಸ್ತೆಗೆ ಶಾಸಕರ ನಿಧಿಯಿಂದ ರೂ‌.10 ಲಕ್ಷ ಡಾಂಬರೀಕರಣ

Suddi Udaya

ಕೊಕ್ಕಡ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದ ಅಂಗವಾಗಿ ಅಶಕ್ತರಿಗೆ ನೆರವು

Suddi Udaya

ನಡ ಸ.ಹಿ.ಪ್ರಾ. ಶಾಲೆಗೆ ರೂ.1.17 ಕೋಟಿ ವೆಚ್ಚದ ನೂತನ ಕಟ್ಟಡ ಉದ್ಘಾಟನೆ

Suddi Udaya
error: Content is protected !!