ಉಜಿರೆ: 35 ನೇ ರಾಷ್ಟ್ರೀಯ ಸಬ್ ಜೂನಿಯರ್ ವಯೋಮಿತಿ 15 ರ ಬಾಲಕರ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾದ ಎಸ್.ಡಿ.ಎಂ ಶಾಲಾ ಕ್ರೀಡಾಪಟುಗಳಿಗೆ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆ ಉಜಿರೆಯ ವತಿಯಿಂದ ಉಚಿತ ಊಟ ವಸತಿ ನೀಡಿ, ಸುದೀನ ಪೂಜಾರಿ ಹ್ಯಾಂಡ್ ಬಾಲ್ ತರಬೇತುದಾರ ಇವರು 10ದಿನ ತರಬೇತಿ ನೀಡಿರುತ್ತಾರೆ. ಈ ರಾಷ್ಟ್ರೀಯ ಕ್ರೀಡಾಕೂಟವು ರಾಜಸ್ಥಾನದ ಗಾಂಗ್ರ ದಲ್ಲಿ ಫೆಬ್ರವರಿ 7 ರಿಂದ 12 ರವರೆಗೆ ನಡೆಯಲಿದೆ , ಈ ಆಯ್ಕೆ ಪಕ್ರಿಯೆಗೆ ರಾಜ್ಯ ವಿವಿಧ ಜಿಲ್ಲೆಯ ಒಟ್ಟು 36 ಕ್ರೀಡಾಪಟುಗಳು ಭಾಗವಸಿದ್ದರು, ಅಂತಿಮವಾಗಿ ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿಯೇಷನ್ ನ ಆಯ್ಕೆ ಸಮಿತಿಯ ಅಧಿಕಾರಿಗಳು 18 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ರಾಜ್ಯ ತಂಡವನ್ನು ಪ್ರಕಟ ಮಾಡಿದರು,
ಈ ಸಂದರ್ಭದಲ್ಲಿ ಶ್ರೀಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಕ್ರೀಡಾ ಕ್ಲಬ್ ಕಾರ್ಯದರ್ಶಿಯಾದ ರಮೇಶ್, ಉಪಸ್ಥಿತರಿದ್ದರು ಇವರೊಂದಿಗೆ ಆಯ್ಕೆ ಸಮಿತಿಯ ಸದಸ್ಯರು, ತರಬೇತಿಯ ಉಸ್ತುವಾರಿ ದಾರರು ಹೆಮೋಧರ ಹಾಗೂ ಹ್ಯಾಂಡ್ ಬಾಲ್ ತರಬೇತಿದಾರ ಸುದೀನ ಪೂಜಾರಿ ಇದ್ದರು.ಈ ಸಂದರ್ಭ ದಲ್ಲಿ ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಲೋಕೇಶ್, ಹಾಗೂ ಪ್ರಕಾಶ್ ನರಗಟ್ಟಿ ರಾಜ್ಯ ತಂಡ ಪ್ರಕಟಿಸಿದ್ದರು.
ರಾಜ್ಯ ತಂಡದಲ್ಲಿ ಮಿಹಿರ್ ಬಿ ಸುವರ್ಣ( ಬ್ರಹ್ಮವರ ) ಸುಮಿತ್ ದೇಸಾಯಿ (ಬೆಳಗಾವಿ) ಯದು ನಂದನ್ (SDM )
ಗೋಪಿಕೃಷ್ಣ (ಕೊಪ್ಪಳ) ಬಸವರಾಜ್ (ಬೆಳಗಾವಿ )ವೆಂಕಟೇಶ್ (ಹಾಸನ) ಪ್ರೀತಮ್ ಬೆಂಗಳೂರು ಪ್ರಶಾಂತ್ ಕಾಮತ್ (ಉಡುಪಿ) ಕಿಶನ್ (SDM) ರೋಷನ್ ರೋಷನ್ (ವಿಜಯಪುರ) ಅಬ್ದುಲ್ ಅಜೀಜ್ (ವಿಜಯಪುರ )ತರುಣ್ ಶೆಟ್ಟಿ (ಚಿಕ್ಕಮಗಳೂರು)ಸುಭಾಷ್ ಜೋಶಿ(ಗೋಕಾಕ್ )ಹರಿಪ್ರಕಾಶ್( ಬಳ್ಳಾರಿ )ನಿಶ್ಚಯ್ ಗೌಡ (ತುಮಕೂರು) ಶ್ರೇಯಸ್ ಗೌಡ ಸಂತೋಷ್ (ಚಿತ್ರದುರ್ಗ.) ಮಹಾಂತೇಶ್ (ದಾವಣಗೆರೆ )ತರಬೇತುದಾರ ಹೇಮೋದರ್, ತಂಡದ ವ್ಯವಸ್ಥಾಪಕರು ಪ್ರಶಾಂತ್ ನಾಯಕ್.