ಉಜಿರೆ: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಬೆಳ್ತಂಗಡಿ ಆಶ್ರಯದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಜಿರೆ, ಲಯನ್ಸ್ ಕ್ಲಬ್ ಬೆಳ್ತಂಗಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಜಿರೆ, ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಉಜಿರೆ, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮ್ಹಾಲಕರ ಸಂಘ ಮಂಗಳೂರು (ದ.ಕ. ಮತ್ತು ಉಡುಪಿ ಜಿಲ್ಲೆ) ಬೆಳ್ತಂಗಡಿ ವಲಯ, ಎಸ್‌ಡಿಎಂ ಸ್ಪೋಟ್ಸ್ ಕ್ಲಬ್ ಉಜಿರೆ, ರಾಜಸ್ಥಾನ ವಿಷ್ಣು ಸಮಾಜ ಉಜಿರೆ, ಶ್ರೀ ಜನಾರ್ದನ ಸ್ವಾಮಿ ಸೇವಾ ಟ್ರಸ್ಟ್ ಉಜಿರೆ, ಶ್ರೀರಾಮ ಭಜನಾ ಮಂದಿರ ಟ್ರಸ್ಟ್ ಉಜಿರೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಶ್ರೀ ಧ.ಮಂ. ಕಾಲೇಜು, ಉಜಿರೆ, ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ನೇಕಾರಪೆಟೆ ಉಜಿರೆ, ಮಿತ್ರ ಯುವಕ ಮಂಡಲ ಅರಳಿ ಇದರ ಸಹಕಾರದೊಂದಿಗೆ ನಮ್ಮೂರ ಕನ್ನಡ ಶಾಲೆ ನಮ್ಮ ಹೆಮ್ಮೆ ಸೇವಾಯಜ್ಞ ಕಾರ್ಯಕ್ರಮವು ಫೆ.4ರಂದು ಉಜಿರೆ ಹಳೆಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್‌ಸಿಂಹ ನಾಯಕ್ ಸೇವಾಯಜ್ಞಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ಧನ್, ಉಜಿರೆ ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ,ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ,ವೆಂಕಟರಮಣ ಶರ್ಮ,ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ,ದಿಶಾ ಫುಡ್ ಮಾಲಕರು,ನ್ಯಾಯವಾದಿ ಧನಂಜಯ್ ಕುಮಾರ್,ಪ್ರಶಾಂತ್ ಜೈನ್ ಅಮೃತ ಟೆಕ್ಸ್ ಟೈಲ್ಸ್,ಪ್ರಭಾಕರ್ ಜೈನ್ ಮಹಾವೀರ ಟೆಕ್ಸ್ ಟೈಲ್ಸ್,ಯೋಜನೆ ಅಧಿಕಾರಿ ತಿಮ್ಮಯ್ಯ ನಾಯ್ಕ್,ರೋಟರಿ ಅಧ್ಯಕ್ಷರು ಅನಂತ್ ಭಟ್ ಮಚ್ಚಿಮಲೆ, ತಾ.ಪಂ ಮಾಜಿ ಸದಸ್ಯ ಶಶಿಧರ ಕಲ್ಮಂಜ,ಉದ್ಯಮಿ ಪ್ರಸಾದ್ ಬಿ.ಎಸ್,ಮೋಹನ್ ಚೌಧರಿ, ಕಲ್ಮಂಜ ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀಧರ್, ಉಜಿರೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಪುಷ್ಪಾ ಶೆಟ್ಟಿ, ಪತ್ರಕರ್ತರ ಸಂಘದ ಅಧ್ಯಕ್ಷರಾದ ಚೈತ್ರೇಶ್ ಕಾರ್ಯದರ್ಶಿ ಗಣೇಶ್ ಬಿ,ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ. ಜತೆ ಕಾರ್ಯದರ್ಶಿ ಮನೋಹರ್. ಪತ್ರಕರ್ತರಾದ ತುಕಾರಾಂ,ಸಂತೋಷ್ ಪಿ ಕೋಟ್ಯಾನ್,ಜಾರಪ್ಪ ಪೂಜಾರಿ, ಅರವಿಂದ ಹೆಬ್ಬಾರ್ ,ಶಾಲೆಯ ಶಿಕ್ಷಕ ವರ್ಗ, ಮೊದಲಾದವರು ಉಪಸ್ಥಿತರಿದ್ದರು.