24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ

ಹೊಸಂಗಡಿ: ದ.ಕ ಜಿಲ್ಲಾ ಪಂಚಾಯತ್, ಕಂದಾಯ ಇಲಾಖೆ ಬೆಳ್ತಂಗಡಿ, ತಾಲೂಕು ಪಂಚಾಯತ್ ಬೆಳ್ತಂಗಡಿ, ಸಮಾಜ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್ ಹೊಸಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾವು ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮ ಪಂಚಾಯತ್ ಮೂಲಕ ತಾಲೂಕಿಗೆ ಆಗಮಿಸಿತು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಕ್ಷಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ತಾಲೂಕು ದಂಡಾಧಿಕಾರಿಗಳಾದ ಪೃಥ್ವಿ ಸಾನಿಕಂ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭವಾನಿ ಶಂಕರ್ ಎನ್ , ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಾದ ಹೇಮಚಂದ್ರ, ತಾಲೂಕು ಪಂಚಾಯತ್ ವ್ಯವಸ್ಥಾಪಕರಾದ ಪ್ರಶಾಂತ್ ಬಳಂಜ, ತಾಲೂಕು ಶಿಕ್ಷಣಾಧಿಕಾರಿಗಳಾದ ಶ್ರೀಮತಿ ತಾರಕೇಸರಿ, ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ, ಉಪಾಧ್ಯಕ್ಷೆ ಶ್ರೀಮತಿ ಶಾಂತ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಸಂಪನ್ಮೂಲ ವ್ಯಕ್ತಿ ಲೇಖಕರು ಅರವಿಂದ್ ಚೊಕ್ಕಾಡಿ, ಹೊಸಂಗಡಿ ಇಂದಿರಾ ವಸತಿ ಶಾಲೆಯ ಪ್ರಾಂಶುಪಾಲ ಶ್ರೀಧರ ಶೆಟ್ಟಿ, ಮುಂಡಾಜೆ ವಸತಿ ಶಾಲೆಯ ಪ್ರಾಂಶುಪಾಲರು, ಸಂಜೀವಿನಿ ಮಹಿಳಾ ಒಕ್ಕೂಟದ ತಾಲೂಕು ಸಂಯೋಜಕರಾದ ಶ್ರೀಮತಿ ಪ್ರತೀಮಾ , ಮಾಹಿಳಾ ಮತ್ತು ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಶ್ರೀಮತಿ ಗುಲಾಬಿ, ನರೆಗಾ ತಾಲೂಕು ಐಇಸಿ ಸಂಯೋಜಕರಾದ ಶ್ರೀ ಮತಿ ವಿನಿಷಾ ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಹೇಮಾವಸಂತ್, ಗ್ರಾಮ ಪಂಚಾಯತ್ ನಸದಸ್ಯರು, ತಾಲೂಕು ವಿವಿಧ ಸಂಘಟನೆಗಳ ಮುಖಂಡರು,ಎನ್ ಆರ್ ಎಲ್ ಎಂ ಸಂಘದ ಅಧ್ಯಕ್ಷ .ಎಲ್ ಸಿ ಆರ್ ಪಿ. ಎಮ್ ಬಿ ಕೆ. ಸದಸ್ಯರು, ಗ್ರಾಮದ ಗಣ್ಯರು, ವಿವಿಧ ಶಾಲೆಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಇಂದಿರಾ ವಸತಿ ಶಾಲೆಯ ವಿದ್ಯಾರ್ಥಿಗಳು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾದ ಅರವಿಂದ ಚೊಕ್ಕಾಡಿ ಸಂವಿಧಾನದ ಪ್ರಸ್ತಾವನೆಯ ಬಗ್ಗೆ ಮಾಹಿತಿ ನೀಡಿದರು. ತಾಲೂಕು ತಹಶೀಲ್ದಾರರು ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಿದರು. ಸಂವಿಧಾನ ಕುರಿತಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಕಾರ್ಯನಿರ್ವಹಣಾ ಅಧಿಕಾರಿಗಳು ಅಭಿನಂದಿಸಿದರು. ಮಂಗಳೂರಿನ ಕಲಾ ತಂಡದವರು ಜಾಗೃತಿ ಗೀತೆ ಮತ್ತು ನಾಟಕ ಪ್ರದರ್ಶಿಸಿದರು. ಡಾ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಪಂ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಯವರು ಸ್ವಾಗತಿಸಿ ವಂದಿಸಿದರು.

Related posts

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಭೇಟಿ

Suddi Udaya

ಬರೆಂಗಾಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಕೊಕ್ಕಡ : ಮಾಯಿಲಕೋಟೆ ಸೀಮೆ ದೈವಗಳ ಪ್ರಥಮ ವಾರ್ಷಿಕ ನೇಮೋತ್ಸವ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದಿಂದ ಪೋಪ್ ಫ್ರಾನ್ಸಿಸ್ ರ ನಿಧನಕ್ಕೆ ತೀವ್ರ ಸಂತಾಪ, 9 ದಿನಗಳ ಶೋಕಾಚರಣೆ

Suddi Udaya

ಮಡಂತ್ಯಾರು: ಪಾರೆಂಕಿ ನಿವಾಸಿ ಕೃಷಿಕ ಪಿ ಶಾಂತರಾಮ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ಪೃಥ್ವಿ ಜುವೆಲ್ಸ್ ವತಿಯಿಂದ ಭಾರತೀಯ ಸೇನೆಗೆ ನೇಮಕಗೊಂಡಿರುವ ಮನೋಹರ್ ಪೂಜಾರಿಯವರಿಗೆ ಗೌರವಾರ್ಪಣೆ

Suddi Udaya
error: Content is protected !!