ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ರಾಷ್ಟ್ರೀಯ ಪ್ರತಿಷ್ಠಿತ ಸ್ಕಾಚ್ ಪ್ರಶಸ್ತಿ

ಬೆಳ್ತಂಗಡಿ: ಬ್ಯಾಂಕ್‌ಗಳ ಬಿ.ಸಿ.(ವ್ಯವಹಾರ ಪ್ರತಿನಿಧಿ)ಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿ, ಅವುಗಳನ್ನು ಆರ್ಥಿಕ ಸೇರ್ಪಡೆಗೊಳಿಸುವ ಮೂಲಕ ಬಡವರ ಸಬಲೀಕರಣಕ್ಕಾಗಿ ವೈವಿಧ್ಯಮಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಿಸುವಲ್ಲಿ ಶ್ರೇಷ್ಠ ಸಾಧನೆಗೈದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸ್ಕಾಚ್ ಗ್ರೂಫ್ಸ್ನಿಂದ ಕೊಡಮಾಡುವ 2025ನೇ ಸಾಲಿನ ರಾಷ್ಟ್ರದ ಪ್ರತಿಷ್ಠಿತ ‘ಸ್ಕಾಚ್ ಆರ್ಥಿಕ ಸೇರ್ಪಡೆ ಪ್ರಶಸ್ತಿ’ ದೊರೆತಿರುತ್ತದೆ.

ದೆಹಲಿಯ ಹೆಬಿಟೆಟ್ ಸೆಂಟರ್ ಸಭಾಭವನದಲ್ಲಿ ಜ.10, ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್. ಮತ್ತು ಯೋಜನೆಯ ಮುಖ್ಯ ಹಣಕಾಸು ಅಧಿಕಾರಿಗಳಾದ ಶಾಂತರಾಮ್ ಆರ್. ಪೈಯವರು ಸ್ಕಾಚ್ ಗ್ರೂಫ್ಸ್ನ ಮುಖ್ಯಸ್ಥರಾದ ಸಮೀರ್ ಕೋಚ್ಚಾರ್‌ರವರಿಂದ ಪ್ರ‍್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ.ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿತ್ವದ ಫಲವಾಗಿ ಇಂದು ರಾಜ್ಯದ 53 ಲಕ್ಷಕ್ಕೂ ಅಧಿಕ ಕುಟುಂಬಗಳು ಆರ್ಥಿಕ ಕ್ಷೇತ್ರದ ಮುಖ್ಯವಾಹಿನಿಗೆ ಬಂದಿವೆ. ಈ ಪ್ರಶಸ್ತಿಯು ಸಂಸ್ಥೆಯ ಸಂಸ್ಥಾಪಕರಾದ ಡಾ|| ಡಿ.ವೀರೇಂದ್ರ ಹೆಗ್ಗಡೆಯವರಿಗೆ ಮತ್ತು ಶ್ರೀಮತಿ ಹೇಮಾವತಿ ವೀ.ಹೆಗ್ಗಡೆಯವರಿಗೆ ಸಲ್ಲುತ್ತದೆ ಎಂದರು.

ಬಡವರಿಗೆ ದಾನದ ಬದಲಿಗೆ ಸ್ವಾವಲಂಬನೆಯ ಬೀಜಮಂತ್ರವನ್ನು ಬಿತ್ತಿ, ಆರ್ಥಿಕ ವ್ಯವಸ್ಥೆಯ ಮುಖ್ಯವಾಹಿನಿಗೆ ಬಡವರನ್ನು ತರಲು ಪ್ರಯತ್ನಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅತ್ಯಪೂರ್ವ ಕಾರ್ಯದಲ್ಲಿ ತೊಡಗಿಕೊಂಡಿದ್ದು 6,20,000ಕ್ಕೂ ಹೆಚ್ಚು ಸ್ವಸಹಾಯ ಸಂಘಗಳನ್ನು ರಚಿಸಿದೆ. ಕಳೆದ ವರ್ಷಾಂತ್ಯದಲ್ಲಿ ಸ್ವಸಹಾಯ ಸಂಘಗಳ ಹೊರಬಾಕಿ ಮೊತ್ತ ರೂ. ೨೬,೩೦೪ ಕೋಟಿ ಚಾಲ್ತಿ ಇರುತ್ತದೆ. ದೇಶದ ಆರು ಪ್ರಮುಖ ಬ್ಯಾಂಕ್‌ಗಳಿಗೆ ಬಿ.ಸಿ. (ವ್ಯವಹಾರ ಪ್ರತಿನಿಧಿ) ಸಂಸ್ಥೆಯಾಗಿ ಅತೀ ಕಡಿಮೆ ಬಡ್ಡಿದರ ಅಂದರೆ ಬ್ಯಾಂಕಿನಿಂದ ಶೇ. 14 ರಿಂದ ಶೇ. 15 ವಾರ್ಷಿಕ ಬಡ್ಡಿದರದಲ್ಲಿ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಾಲ ಸೌಲಭ್ಯ ದೊರೆಯುತ್ತಿದ್ದು ಇಲ್ಲಿ ಕಡಿತ ಬಡ್ಡಿದರದ ವ್ಯವಸ್ಥೆ ಇರುವುದರಿಂದ ಮತ್ತು ವಾರದ ಮರುಪಾವತಿಯಿಂದಾಗಿ ಅತೀ ಕಡಿಮೆ ಬಡ್ಡಿ ವಿಧಿಸಿದಂತಾಗುವುದು. ರೂ. 1 ಲಕ್ಷ ಸಾಲಕ್ಕೆ 50 ವಾರ(ಒಂದು ವರ್ಷದ ಅವಧಿಗೆ)ಗಳಿಗೆ ರೂ. 2,146 ವಾರದ ಕಂತು ಆಗಿದ್ದು ಇದರನ್ವಯ ರೂ. 1 ಲಕ್ಷಕ್ಕೆ ಒಂದು ವರ್ಷಕ್ಕೆ ಒಟ್ಟು ಪಾವತಿಸುವ ಬಡ್ಡಿ ಕೇವಲ ರೂ. 7,246 ಆಗಿರುತ್ತದೆ. ಇದು ಅತ್ಯಂತ ಕಡಿಮೆ ಬಡ್ಡಿದರದ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಲ್ಲಿ ಸ್ವಸಹಾಯ ಸಂಘದ ಸದಸ್ಯರು ಯಾವುದೇ ಆಸ್ತಿಗಳನ್ನು ಆಡಮಾನವಾಗಿ ಇಡಬೇಕಾಗಿಲ್ಲ. ಮೂರನೇ ವ್ಯಕ್ತಿಯ ಗ್ಯಾರೆಂಟಿ ಬೇಕಾಗಿಲ್ಲ. ಅದ್ಯಾವುದರ ಅಗತ್ಯವಿಲ್ಲದೆ ಸುಲಭವಾಗಿ ತಮ್ಮ ಗ್ರಾಮದ ಪ್ರದೇಶದಲ್ಲೆ ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದು ಆರ್ಥಿಕ ಸೇರ್ಪಡೆಯ ಅತಿ ದೊಡ್ಡ ವರದಾನವಾಗಿದೆ. ಇದೊಂದು ಹಳ್ಳಿ ಹಳ್ಳಿಗೂ ಬ್ಯಾಂಕಿನಿAದ ನೇರ ಸಾಲ ಸೌಲಭ್ಯಗಳನ್ನು ಸ್ವಸಹಾಯ ಸಂಘದ ಮೂಲಕ ದೊರಕಿಸಿಕೊಡುವ ದೇಶದ ಅತ್ಯುತ್ತಮವಾದ ವ್ಯವಸ್ಥೆಯಾಗಿರುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ರಾಜ್ಯದ ಹಳ್ಳಿ ಹಳ್ಳಿಗಳಿಗೂ ಸ್ವಸಹಾಯ ಸಂಘದ ಮಾದರಿ ಆಯಾಮದಲ್ಲಿ ಬ್ಯಾಂಕ್‌ಗಳಿAದ ಆರ್ಥಿಕ ಸಾಲ ಸೌಲಭ್ಯವನ್ನು ಇಷ್ಟೊಂದು ತಳಮಟ್ಟದ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದಲ್ಲಿ ದೊರಕಿಸಿಕೊಟ್ಟಿರುವುದು ಆರ್ಥಿಕ ಸೇರ್ಪಡೆಯ ಬಹುದೊಡ್ಡ ಸಾಧನೆಯಾಗಿರುತ್ತದೆ.

ಇದೇ ಸಂದರ್ಭ ಆರ್ಥಿಕ ಸೇರ್ಪಡೆಯಲ್ಲಿ ವಿಶಿಷ್ಟ ಸಾಧನೆಗೈದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್, ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ, ತಮಿಳುನಾಡು ಸರಕಾರ ಮತ್ತು ಇತರ ಇಲಾಖೆ ಮತ್ತು ಸಂಸ್ಥೆಗಳನ್ನು ಗೌರವಿಸಲಾಯಿತು.

Related posts

ಉಜಿರೆ ಸಿದ್ದವನ ಗುರುಕುಲದಲ್ಲಿ ಗುರುವಂದನಾ ವ್ಯಾಸಪೂರ್ಣಿಮೆ ಮತ್ತು ‘ವಂದೇ -ಗುರುಪರಂಪರಾಮ್’ ಕಾರ್ಯಕ್ರಮ

Suddi Udaya

ನಾವೂರು ಗ್ರಾಮ ಪಂಚಾಯತ್ ನ ವಿಶೇಷ ಗ್ರಾಮ ಸಭೆ

Suddi Udaya

ಹೊಸಂಗಡಿ ಇಂದಿರಾ ವಸತಿ ಶಾಲೆಯಲ್ಲಿ ವನಮಹೋತ್ಸವ

Suddi Udaya

ಕನ್ಯಾಡಿ 2 ಸ.ಉ.ಹಿ. ಪ್ರಾ. ಶಾಲಾ ಮಂತ್ರಿಮಂಡಲದ ಪ್ರಮಾಣವಚನ ಸ್ವೀಕಾರ ಸಮಾರಂಭ

Suddi Udaya

ಬೆಳ್ತಂಗಡಿ ಖಾಸಗಿ ಬಸ್ ನಿಲ್ದಾಣದ ಸಮೀಪ ಮರಣಬಾವಿಯನ್ನು ನಾಚಿಸುವಂತೆ ಗುಂಡಿಗಳ ನಿರ್ಮಾಣ

Suddi Udaya

ಬೆಳ್ತಂಗಡಿ ನಿವಾಸಿ ಪದ್ಮಲತಾ ನಿಧನ

Suddi Udaya
error: Content is protected !!