22.2 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರೈಲಿನ ಬೋಗಿಯಲ್ಲಿ ಅನ್ನಪೂರ್ಣ ರಾನಡೆಯವರ ಕೊಲೆ ಪ್ರಕರಣ: ತನಿಖೆಗೆ ಒತ್ತಾಯಿಸಿ ಮನವಿ ಸಲ್ಲಿಕೆ

ಬೆಳ್ತಂಗಡಿ: ಶಿವಮೊಗ್ಗ-ಬೆಂಗಳೂರು ರೈಲಿನ ಮಹಿಳಾ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಜ. 30ರಂದು ಮಹಿಳೆಯೊಬ್ಬರನ್ನು ಕೊಲೆ ಮಾಡಿ ದರೋಡೆ ನಡೆಸಿದ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಹಾಗೂ ಕುಟುಂಬಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಿಕೊಡುವ ಕುರಿತು ಆಗ್ರಹಿಸಿ ಮುಖ್ಯಮಂತ್ರಿ ಅವರಿಗೆ ಬೆಳ್ತಂಗಡಿ ತಹಸೀಲ್ದಾರ್ ಮೂಲಕ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ವತಿಯಿಂದ pಫೆ.7ರಂದು ಮನವಿ ಸಲ್ಲಿಸಲಾಯಿತು.


ಅರಣ್ಯ ಇಲಾಖೆಯ ಬೆಂಗಳೂರು ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿದ್ದ ಸಮಾಜದ ಅನ್ನಪೂರ್ಣ ರಾನಡೆಯವರು ಶಿವಮೊಗ್ಗದಲ್ಲಿ ಇಲಾಖೆ ನಡೆಸಿದ ಸ್ಟೆನೋಗ್ರಾಫರ್ ಪರೀಕ್ಷೆ ಮೇಲ್ವಿಚಾರಕಿಯಾಗಿ ಆಗಮಿಸಿ ಬೆಂಗಳೂರಿಗೆ ಹಿಂದಿರುಗುವ ವೇಳೆ ಘಟನೆ ನಡೆದಿತ್ತು. ಘಟನೆ ನಡೆದು ಒಂದು ವಾರ ಕಳೆದರು ದುಷ್ಕರ್ಮಿಗಳನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಿಲ್ಲ.ರೈಲು ಪ್ರಯಾಣ ಮಹಿಳೆಯರಿಗೆ ಎಷ್ಟು ಸುರಕ್ಷಿತ?, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಿ ಮಹಿಳಾ ಪ್ರಯಾಣಿಕರಿಗೆ ವಿಶೇಷ ಭದ್ರತೆ ಒದಗಿಸಬೇಕಾದ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.


ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್, ಕಾರ್ಯದರ್ಶಿ ನಾರಾಯಣ ಫಡಕೆ, ಪದಾಧಿಕಾರಿಗಳಾದ ವಿವೇಕ್ ಕೇಳ್ಕರ್, ಯಶವಂತ ಪಟವರ್ಧನ್,ಯೋಗೀಶ್ ಭಿಡೆ,ಗಣೇಶ ಶೆಂಡ್ಯೆ,ಲಾಯಿಲ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಸೂರ್ಯನಾರಾಯಣ ಪಾಳಂದೆ, ಮುಂಡಾಜೆ ಗ್ರಾ.ಪಂ.ಮಾಜಿ ಸದಸ್ಯೆ
ಅಶ್ವಿನಿ ಹೆಬ್ಬಾರ್, ಲತಾ ಭಟ್ ಅರೆಕಲ್ಲು, ರಶ್ಮಿ ಪಟವರ್ಧನ್,ಡಾ.ದೀಪಾಲಿ ಡೋಂಗ್ರೆ, ತಾ.ಪಂ. ಮಾಜಿ ಸದಸ್ಯ ವಿಷ್ಣು ಮರಾಠೆ,ನ್ಯಾಯವಾದಿ ಶೈಲೇಶ್ ಠೋಸರ್, ಪತ್ರಕರ್ತ ಅರವಿಂದ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಎಸ್‌ಡಿಪಿಐ ಕ್ಷೇತ್ರ ಸಮಿತಿ ವತಿಯಿಂದ ಪಕ್ಷ ಸಮಾವೇಶ ಕಾರ್ಯಕ್ರಮ

Suddi Udaya

ಮರೋಡಿ ಗ್ರಾಮ‌ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ‌ ಸುತ್ತಿನ ಗ್ರಾಮಸಭೆ

Suddi Udaya

ನಾಲ್ಕೂರು :ಇನಾಸ್ ಪಿಂಟೋ ನಿಧನ

Suddi Udaya

ಸ್ವಾತಿ ಸೂರಜ್ ನೆಲ್ಲಿತ್ತಾಯ ಶಿಶಿಲ ಇವರ ಚೊಚ್ಚಲ ಕವನ ಸಂಕಲನ “ಮಂಜರಿ” ಬಿಡುಗಡೆ

Suddi Udaya

ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮ

Suddi Udaya

ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವದ ಪಡೆದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ

Suddi Udaya
error: Content is protected !!