27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾಜಿ ಅಧ್ಯಕ್ಷ ಹಾಲಿ ಗ್ರಾ.ಪಂ ಸದಸ್ಯ ಅಬ್ದುಲ್ ರಝಾಕ್ ಸತತ ಹೋರಾಟದಿಂದ ತೆಕ್ಕಾರು ಗ್ರಾಮಕ್ಕೆ ಉಪ ಆರೋಗ್ಯ ಕೇಂದ್ರ ಮಂಜೂರು ಕಟ್ಟಡ ನಿರ್ಮಿಸಲು ಅನುದಾನ ಮಂಜೂರುಗೊಳಿಸುವಂತೆ ಆರೋಗ್ಯ ಸಚಿವರಿಗೆ ಮತ್ತೊಂದು ಮನವಿ

ತೆಕ್ಕಾರು: ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಉಪ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಿಸಲು ಅನುದಾನ ಮಂಜೂರುಗೊಳಿಸುವಂತೆ ತೆಕ್ಕಾರು ಗ್ರಾಮ ಪಂಚಾಯತ್ ಸದಸ್ಯಬಿ.ಅಬ್ದುಲ್ ರಝಾಕ್‌ ಅವರು‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಅಧ್ಯಕ್ಷತೆಯಲ್ಲಿ ಕಳೆದ ಸೆ.25 ರಂದು ಜರಗಿದ ಜಿಲ್ಲಾ ಜನತಾ ದರ್ಶನ ಕಾರ್ಯಕ್ರಮದಲ್ಲಿ ತೆಕ್ಕಾರು ಗ್ರಾಮಕ್ಕೆ ಉಪ ಆರೋಗ್ಯ ಕೇಂದ್ರ ತೆರೆಯುವಂತೆ ಅಬ್ದುಲ್ ರಝಾಕ್ ಮನವಿಯನ್ನು ಸಲ್ಲಿಸಿದ್ದರು.

ಈ ಮನವಿಗೆ ಸಚಿವರು ಮತ್ತು ಆರೋಗ್ಯ ಇಲಾಖೆಯವರು ಸ್ಪಂದಿಸಿ ಉಪ ಆರೋಗ್ಯ ಕೇಂದ್ರವನ್ನು ಮಂಜೂರು ಗೊಳಿಸಿದ್ದಾರೆ. ಆದರೆ ಉಪ ಆರೋಗ್ಯ ಕೇಂದ್ರವನ್ನು ತೆರೆಯಲು ಸ್ವಂತ ಕಟ್ಟಡ ಇರುವುದಿಲ್ಲ ಈಗ ಬಾಡಿಗೆ ಕಟ್ಟಡದಲ್ಲಿ ಉಪ ಆರೋಗ್ಯ ಕೇಂದ್ರವನ್ನು ತೆರೆದಿರುತ್ತೇವೆ. ಕಳೆದ ಏಳು ವರ್ಷಗಳಿಂದ ಅಬ್ದುಲ್ ರಝಾಕ್ ಅವರು ತೆಕ್ಕಾರಿನಲ್ಲಿ ಉಪ ಆರೋಗ್ಯ ಕೇಂದ್ರ ಮಂಜೂರಾತಿಗೆ ಹೋರಾಟ ನಡೆಸುತ್ತಿದ್ದು, ಅದರಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 63/1ಪಿ1 ರಲ್ಲಿ 0.10 ಸೆಂಟ್ಸ್ ವಿಸ್ತೀರ್ಣ ಈಗಾಗಲೇ ಉಪ ಆರೋಗ್ಯ ಕೇಂದ್ರಕ್ಕೆ ಮಂಜೂರಾತಿಗೊಂಡು ದಾಖಲೆ ಪತ್ರಗಳು ಇರುತ್ತದೆ. ಆದ್ದರಿಂದ ಉಪ ಆರೋಗ್ಯ ಕೇಂದ್ರದ ಸ್ವಂತ ಕಟ್ಟಡ ನಿರ್ಮಿಸಲು ಅನುದಾನವನ್ನು ಮಂಜೂರುಗೊಳಿಸಬೇಕಾಗಿ ತೆಕ್ಕಾರು ಗ್ರಾಮದ ಸಮಸ್ತ ನಾಗರಿಕರ ಪರವಾಗಿ ಅಬ್ದುಲ್ ರಝಾಕ್ ಅವರು ಸಚಿವರಲ್ಲಿ ವಿನಂತಿಸಿಕೊಂಡಿದ್ದಾರೆ.

Related posts

ಅರಸಿನಮಕ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳದ  ವಾತ್ಸಲ್ಯ ಮನೆ ಹಸ್ತಾಂತರ

Suddi Udaya

ಇಂದಬೆಟ್ಟು ವಲಯದ ಭಜನಾ ಮಂಡಳಿಗಳ ಪದಾಧಿಕಾರಿಗಳ ಸಭೆ

Suddi Udaya

ಉಜಿರೆ ಎಸ್ ಡಿ ಎಂ ಪಿ.ಯು ಕಾಲೇಜಿನಲ್ಲಿ ಯೋಗ ಶಿಬಿರ ಸಮಾರೋಪ 

Suddi Udaya

ಜೆಸಿಐ ಮಡಂತ್ಯಾರಿನ ಪದಗ್ರಹಣ ಸಮಾರಂಭ

Suddi Udaya

ವಸಂತ ಬಂಗೇರರ ಉತ್ತರಕ್ರಿಯೆ ಅಂಗವಾಗಿ ಅಭಿಮಾನಿಗಳ ಸಮಾಲೋಚನಾ ಸಭೆ

Suddi Udaya

ಕೊಕ್ಕಡ ವಿಶ್ವ ಹಿಂದೂ ಪರಿಷದ್ , ಕೊಕ್ಕಡ ಶ್ರೀ ರಾಮ ಸೇವಾ ಟ್ರಸ್ಟ್, ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya
error: Content is protected !!