April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೆ.12-13: ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

ಮುಂಡೂರು: ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿಯಲ್ಲಿ ಶ್ರೀ ದೇವಿ ನಾಗಾಂಬಿಕಾ ಅಮ್ಮನವರ ಉತ್ಸವ ಬಲಿ ಮತ್ತು ಶ್ರೀ ವರಾಹಿ, ಮಂತ್ರಮೂರ್ತಿ, ನಾಗಕಲ್ಲುರ್ಟಿ ಶಕ್ತಿದೇವತೆ, ಕೊರಗಜ್ಜ ಮತ್ತು ಶ್ರೀ ಗುಳಿಗರಾಜ ದೈವಗಳ ಕಾಲಾವಧಿ ನೇಮೋತ್ಸವವು ಫೆ.12 ಮತ್ತು ಫೆ.13 ರಂದು ಜರುಗಲಿದೆ ಎಂದು ಆಡಳಿತ ಮೊಕ್ತೇಸರ ರಾಜೀವ ಅವರು ತಿಳಿಸಿದ್ದಾರೆ.


ಫೆ.12 ರಂದು ಬೆಳಿಗ್ಗೆ ಗಣಹೋಮ, ನಾಗಬ್ರಹ್ಮ ದೇವರಿಗೆ ತನುತಂಬಿಲ, ಆಶ್ಲೇಷಬಲಿ, ದೈವಗಳಿಗೆ ಪಂಚಪರ್ವ, ರಾತ್ರಿ ಶ್ರೀ ನಾಗಾಂಬಿಕಾ ಭಜನಾ ಮಂಡಳಿಯವರಿಂದ ಕುಣಿತ ಭಜನೆ. ಬಳಿಕ ಉದ್ಭವ ಗಣಪತಿ ದೇವರಿಗೆ ಹಾಗೂ ಶ್ರೀನಾಗಾಂಬಿಕಾ ಅಮ್ಮನವರಿಗೆ ಜೋಡುರಂಗಪೂಜೆ ನಡೆಯಲಿದೆ. ಫೆ.೧೩ರಂದು ಬೆಳಿಗ್ಗೆ ರುದ್ರಯಾಗ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಶ್ರೀ ದೇವಿ ನಾಗಾಂಬಿಕಾ ಅಮ್ಮನವರ ಉತ್ಸವ ಬಲಿ. ಶ್ರೀ ನಾಗಾಂಬಿಕಾ ಭಜನಾ ಮಂಡಳಿಯವರಿಂದ ಕುಣಿತ ಭಜನೆ ರಾತ್ರಿ ಭಂಡಾರ ಇಳಿಯುವುದು, ದೈವಗಳ ಶ್ರೀ ನಾಗಾಂಬಿಕಾ ಅಮ್ಮನವರ ಭೇಟಿ, ನಂತರ ದೈವಗಳ ನೇಮೋತ್ಸವ, ಕೊರಗಜ್ಜ ಕೋಲ, ಮರುದಿನ ಬೆಳಿಗ್ಗೆ ಗುಳಿಗ ದೈವದ ಕೋಲ ಜರುಗಲಿದೆ ಎಂದು ತಿಳಿಸಿದ್ದಾರೆ.

Related posts

ಉರುವಾಲು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ

Suddi Udaya

ಕೊಕ್ಕಡ: ಶ್ರೀ ಪಿಲಿಚಾಮುಂಡಿ ಹಾಗೂ ಸಹ ಪರಿವಾರ ದೈವಗಳ ನೇಮೋತ್ಸವ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ಕಲ್ಲೇರಿ: ನಿಸರ್ಗ ರಿಕ್ಷಾ ಚಾಲಕ – ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಹಳೆಕೋಟೆ ವಾಣಿ ಕಾಲೇಜು ಮುಂಭಾಗ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ತೆಗೆಯಲಾದ ಹೋಂಡಕ್ಕೆ ಕಾರು ಉರುಳಿ ಬಿದ್ದು ಬೆಂಗಳೂರಿನ ತಂದೆ- ಮಗಳು ಅಪಾಯದಿಂದ ಪಾರು

Suddi Udaya

ಬೆಳಾಲು: ಕೊಲ್ಪಾಡಿ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ. ಸದಸ್ಯೆ ಶ್ರೀಮತಿ ಟಾಕಮ್ಮ ನಿಧನ

Suddi Udaya
error: Content is protected !!