23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸಂಜೀವಿನಿ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಸಿಬ್ಬಂದಿ ವೇತನ ಪರಿಷ್ಕರಣೆಗೆ ಸರಕಾರದಿಂದ ಸಮ್ಮತಿ

ಬೆಳ್ತಂಗಡಿ: ರಾಜ್ಯದ ಪಂಚಾಯತ್ ವ್ಯಾಪ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಜೀವಿನಿ ಸ್ವಸಹಾಯ ಸಂಘಗಳ ಮೇಲ್ವಿಚಾರಣೆ ಮಾಡುತ್ತಿರುವ ಸಿಬ್ಬಂದಿಯ ವೇತನ ಪರಿಷ್ಕರಣೆಗೆ ಸರಕಾರ ಒಪ್ಪಿಗೆ ನೀಡಿದೆ.


ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಹಾಗೂ ಫಲಾನುಭವಿಗಳ ಸಂಘ ಸಚಿವ ಶರಣಪ್ರಕಾಶ ಬಸಪ್ಪ ಪಾಟೀಲ್, ಹಿರಿಯ ಹೆಚ್ಚುವರಿ ಕಾರ್ಯದರ್ಶಿ ಉಮಾ ಮಹಾದೇವನ್, ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಇತರ ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ಮಾತುಕತೆ ಫಲಪ್ರದವಾಗಿದೆ.


ವೇತನ ಹೆಚ್ಚಳ ಕುರಿತಂತೆ ಎಂಬಿಕೆ ಗಳು ಮತ್ತು ಎಲ್ ಸಿ ಆರ್ ಪಿ ಗಳು ಅವರ ವ್ಯಾಪ್ತಿಯಲ್ಲಿ ಬರುವ ಸ್ವಸಹಾಯ ಸಂಘಗಳ ಸಂಖ್ಯೆಯ ಆಧಾರದಲ್ಲಿ 40 ಸ್ವಸಹಾಯ ಸಂಘಗಳಿದ್ದರೆ 6 ಸಾವಿರ ರೂ 90 ಸಂಘಗಳಿದ್ದರೆ 9 ಸಾವಿರ ರೂ ಗಳಂತೆ ಕನಿಷ್ಠ 5 ಸಾವಿರ ರೂ ಗಳಿಂದ ಗರಿಷ್ಠ 9 ಸಾವಿರ ರೂ ವರೆಗೆ ವೇತನ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಸಚಿವರು ಎಪ್ರಿಲ್ ನಿಂದ ವೇತನ ಏರಿಕೆ ಕ್ರಮ ಕೈಗೊಳ್ಳಲಾಗುವುದು ಈ ಬಜೆಟ್ ನಲ್ಲಿ ಅನುದಾನ ಮೀಸಲಿಡಲಾಗುವುದು ತಿಳಿಸಿದರು.


2021 ರಿಂದ 2023 ರವರೆಗೆ 6 ಬಾರಿ ಗಣತಿ ಕಾರ್ಯ ಮಾಡಿದ್ದು ಗಣತಿಯಲ್ಲಿ ಭಾಗಿಯಾದವರಿಗೆ ನೀಡಬೇಕಾದ ಬಾಕಿ ವೇತನವನ್ನು ಕೊಡಲು ಒಪ್ಪಿದರು. ಪಂಚಾಯತ್ ಗಳಲ್ಲಿ ಸಂಜೀವಿನಿ ಸಿಬ್ಬಂದಿಗೆ ವ್ಯವಸ್ಥೆ, ಪ್ರತ್ಯೇಕ ಕಚೇರಿಗೆ ಸ್ಥಳವಿದ್ದಲ್ಲಿ ನರೇಗಾ ಮೂಲಕ ಕಟ್ಟಡ, ನೌಕರರಿಗೆ ಐಡಿ ಕಾರ್ಡ್ ಮತ್ತು ನೇಮಕಾತಿ ಆದೇಶ ಪತ್ರ ಯುನಿಫಾರಂ ಹಾಗೂ ಸೇವಾ ನಿಯಮಾವಳಿಗಳಿಗೆ ಕ್ರಮ ಕೈಗೊಳ್ಳುವುದು ಎಂ ಬಿ ಕೆ ಗಳಿಗೆ ಚೆಕ್ ಸಹಿ ಮಾಡುವ ಅಧಿಕಾರ ನೀಡುವ ಅವಕಾಶವನ್ನು ಪರಿಶೀಲಿಸಿ ನಿರ್ಧಾರಿಸುವುದಾಗಿ ತಿಳಿಸಿದರು.

ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಂದರ್ಭ ರಾಜ್ಯ ಯೂನಿಯನ್ ಪ್ರತಿಭಟನೆ ನಡೆಸಿತ್ತು

ಈ ವೇಳೆ ರಾಜ್ಯಾಧ್ಯಕ್ಷೆ ರುದ್ರಮ್ಮ ಶಿವಮೊಗ್ಗ ಮತ್ತು ಉಪಾಧ್ಯಕ್ಷರು, ಕಾರ್ಯದರ್ಶಿ, ಸಹಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಎಲ್ಲಾ ಜಿಲ್ಲೆಯ ಯೂನಿಯನ್ ಪ್ರಮುಖರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ದ ಬೇರೆ ಬೇರೆ ತಾಲೂಕು ಯೂನಿಯನ್ ನ ಸದಸ್ಯರು ಬೆಳಗಾವಿಯಲ್ಲಿ ನಡೆದ ಹೋರಾಟಕ್ಕೆ ಬೆಂಬಲ ನೀಡಿದ್ದರು.

Related posts

ಕೊಯ್ಯೂರು: ಹುಟ್ಟುಹಬ್ಬ ಆಚರಣೆ ವೇಳೆ ಗೆಳೆಯರ ಹುಚ್ಚಾಟ: ಯುವಕನಿಗೆ ಬೆಂಕಿ ಹೊತ್ತಿಕೊಂಡು ಅವಘಡ

Suddi Udaya

ಅಮೇರಿಕಾದಲ್ಲಿ ನೆಲೆಸಿದರೂ ಭಾರತೀಯ ಸಂಸ್ಕಾರದ ಧಾರ್ಮಿಕ ವಿಧಿ ವಿಧಾನಗಳನ್ನು ಬಳಸಿ ಗೃಹ ಪ್ರವೇಶ

Suddi Udaya

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ “ಪರೋಪಕಾರ ಸಪ್ತಾಹ”

Suddi Udaya

ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಸ್ವಾತಿ ಫಡಕೆಯವರಿಗೆ ಡಾಕ್ಟರೇಟ್ ಪದವಿ

Suddi Udaya

ಲಾಯಿಲ: ಬಜಕ್ಕಿರೆಸಾಲು ಬಳಿ ಚಿರತೆ ಓಡಾಟ

Suddi Udaya

ವೇಣೂರು ಕಾಲೇಜು: ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya
error: Content is protected !!