24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ ಕೆರೆ ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ: ತಪ್ಪಿದ ಅನಾಹುತ

ಬೆಳ್ತಂಗಡಿ:ಗುರುವಾಯನಕೆರೆಯ ಕೆರೆ ಬಳಿ ಲಾರಿಯೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಫೆ 9 ರಂದು ಮುಂಜಾನೆ ನಡೆದಿದೆ.

ಗುರುವಾಯನಕೆರೆ ಕಾರ್ಕಳ ಹೆದ್ದಾರಿಯ ಕೆರೆಯ ಬಳಿ ಇರುವ ದೊಡ್ಡ ತಿರುವಿನಲ್ಲಿ ರಸ್ತೆ ಬದಿ ಇದ್ದ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ವಿದ್ಯುತ್ ಕಂಬ ರಸ್ತೆಗೆ ಮುರಿದು ಬಿದ್ದ ಪರಿಣಾಮ ಕೆಲವು ತಾಸು ವಾಹನ ಸಂಚಾರಕ್ಕೆ ತಡೆಯುಂಟಾಯಿತು. ತಕ್ಷಣ ಸ್ಥಳೀಯರು ಮೆಸ್ಕಾಂ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು ಅವರು ಬಂದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಡಿಕ್ಕಿ ಹೊಡೆದ ಬಳಿಕ ಚಾಲಕ ಲಾರಿ‌ ಸಹಿತ ಪರಾರಿಯಾಗಿದ್ದಾನೆ. ಒಂದು ವೇಳೆ ಡಿಕ್ಕಿಯ ವೇಳೆ ಬೇರೆ ವಾಹನ ಸಂಚಾರಿಸುತಿದ್ದಲ್ಲಿ ಅಥವಾ ಸಾರ್ವಜನಿಕರು ನಡೆದುಕೊಂಡು
ಹೋಗುತಿದ್ದಲ್ಲಿ ದೊಡ್ಡ ಅನಾಹುತ ಸಂಭವಿಸುತಿತ್ತು ಅದೃಷ್ಟವಶಾತ್ ವಾಹನ ಹಾಗೂ ಜನ ಸಂಚಾರ ಇಲ್ಲದ ಕಾರಣ ದೊಡ್ಡ ಅಪಾಯ ತಪ್ಪಿದಂತಿದೆ. ವಿದ್ಯುತ್ ಕಂಬ ಹಾಕಲು ಮೆಸ್ಕಾಂ ಸಿಬ್ಬಂದಿಗಳು ಕ್ರಮ ಕೈಗೊಂಡಿದ್ದಾರೆ.

Related posts

ಮೈರೋಳ್ತಡ್ಕ ಸ.ಉ.ಪ್ರಾ. ಶಾಲೆಯಲ್ಲಿ ಪೋಷಕರಿಂದ ಶ್ರಮದಾನ 

Suddi Udaya

ನಿರಂತರ ಮಳೆ: ಪೆರಾಡಿ ಕನ್ಯಾನ ಎಂಬಲ್ಲಿ ಮನೆ ಕುಸಿತ

Suddi Udaya

ಅಂತರಾಷ್ಟ್ರೀಯ ಫೋಟೋಗ್ರಾಫಿ, ವೀಡಿಯೋಗ್ರಾಫಿ ಕಾರ್ಯಾಗಾರ

Suddi Udaya

ರಾಜ್ಯಮಟ್ಟದ ಹ್ಯಾಕಥಾನ್ ಸ್ಪರ್ಧೆ: ಶ್ರೀ ಧ.ಮಂ. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ

Suddi Udaya

ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಜಯದಶಮಿಯ ವಿಶೇಷ ಪೂಜೆ ಹಾಗೂ ಆಡಳಿತ ಟ್ರಸ್ಟ್ ವತಿಯಿಂದ ಊರವರ ಭಕ್ತರ ಸಭೆ

Suddi Udaya

ಉಜಿರೆಯ ಎಸ್.ಡಿ.ಎಂ ಪ.ಪೂ ಕಾಲೇಜಿನ ಐವತ್ತು ವಿದ್ಯಾರ್ಥಿಗಳಿಗೆ ಸಂಸ್ಕೃತಭಾಷಾ ವಿದ್ಯಾರ್ಥಿವೇತನ

Suddi Udaya
error: Content is protected !!