29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸಿಯೋನ್ ಆಶ್ರಮದ ಸ್ಥಾಪಕ ಡಾ. ಯು.ಸಿ. ಪೌಲೋಸ್‌ರಿಗೆ ಮಂಜುಶ್ರೀ ಸೀನಿಯರ್ ಛೇಂಬರ್‌ನಿಂದ ಅಭಿನಂದನಾ ಸಮಾರಂಭ

ಬೆಳ್ತಂಗಡಿ: ಮಂಜುಶ್ರೀ ಸೀನಿಯರ್ ಛೇಂಬರ್‌ನಿಂದ ಅಂತರಾಷ್ಟ್ರೀಯ ಸೀನಿಯರ್ ಛೇಂಬರ್‌ನ ರಾಷ್ಟ್ರದ ಜವಾಬ್ದಾರಿಯುತ ಹಾಗೂ ಕ್ರಿಯಾಶೀಲ ನಾಗರಿಕ ಪ್ರಶಸ್ತಿಗೆ ನಿಯೋಜಿಸಲ್ಪಟ್ಟ ಗಂಡಿಬಾಗಿಲಿನ ಸಿಯೋನ್ ಆಶ್ರಮದ ಸ್ಥಾಪಕ ಡಾ. ಯು.ಸಿ ಪೌಲೋಸ್‌ರವರನ್ನು ಅವರ ಆಶ್ರಮದಲ್ಲಿ ಸೀನಿಯರ್ ಛೇಂಬರ್‌ನ ಸದಸ್ಯರು ಫಲ ಪುಷ್ಪ ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಸೀನಿಯರ್ ಛೇಂಬರ್ ಅಧ್ಯಕ್ಷ ಪೃಥ್ವಿರಂಜನ್ ರಾವ್, ಸ್ಥಾಪಕಾಧ್ಯಕ್ಷ ಪ್ರಮೋದ್ ಆರ್. ನಾಯಕ್, ಪೂರ್ವಾಧ್ಯಕ್ಷ ಪಿ.ಪಿ. ಜೋಯ್, ಉಪಾಧ್ಯಕ್ಷ ಹರೀಶ್ ಶೆಟ್ಟಿ, ಮೋಲ್ಸಿ ಜೋಯ್, ಸಿಯೋನ್ ಆಶ್ರಮದ ನಿರ್ದೇಶಕ ಮೇರಿ ಯು.ಪಿ., ಶೋಭಾ ಯು.ಪಿ. ಹಾಗೂ ಆಶ್ರಮದ ಎಲ್ಲಾ ನಿವಾಸಿಗಳು, ಕಾರ್ಯಕರ್ತರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಆಶ್ರಮದ ಕಾರ್ಯಕ್ರಮಗಳಿಗೆ ಮಂಜುಶ್ರೀ ಸೀನಿಯರ್ ಛೇಂಬರ್‌ನಿಂದ ರೂ.20 ಸಾವಿರ ಸಹಾಯಧನವನ್ನು ಅಧ್ಯಕ್ಷ ಪೃಥ್ವಿರಂಜನ್ ರಾವ್ ರವರು ಹಸ್ತಾಂತರಿಸಿದರು.

Related posts

ದೈವ ನರ್ತಕ ಡಾ.ರವೀಶ್ ಪಡುಮಲೆಯವರಿಗೆ ಬಂಬ್ರಾಣ‌ ಮುಗೇರ್ ತರವಾಡು ಮನೆಯಲ್ಲಿ ಗೌರವ ಸನ್ಮಾನ

Suddi Udaya

ನಾವರ: ಯುವಶಕ್ತಿ ನಾವರ ವತಿಯಿಂದ ಅಂಡರ್ ಆರ್ಮ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

Suddi Udaya

ಲಾಯಿಲ : ಡಿಸೇಲ್ ಇಲ್ಲದೆ ಕೈಕೊಟ್ಟ ಕೆಎಸ್ಸಾರ್ಟಿಸಿ ಬಸ್: ಸಂದಿಗ್ಧ ಸ್ಥಿತಿಯಲ್ಲಿ ಪ್ರಯಾಣಿಕರು

Suddi Udaya

ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಗಣಕ ವಿಜ್ಞಾನ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರ

Suddi Udaya

ಕೊಡಗು ವಿಶ್ವವಿದ್ಯಾನಿಲಯ ಉಪಕುಲಪತಿ ಡಾ ಅಶೋಕ್ ಆಲೂರ್ ಸಿರಿ ಸಂಸ್ಥೆಗೆ ಭೇಟಿ

Suddi Udaya

ನಿಡ್ಲೆ: ಕಳೆಂಜ ಶೌರ್ಯ ಘಟಕದಿಂದ ಮನೆಯ ಮೇಲೆ ಬಿದ್ದ ಮರ ತೆರವು

Suddi Udaya
error: Content is protected !!