ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ದೇಶದ ಮೊತ್ತ ಮೊದಲ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಉಜಿರೆ, ಸಂಸ್ಥೆಯು ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ 2022-23ನೇ ಸಾಲಿನಲ್ಲಿ ನಡೆಸಿದ ಬಿ.ಎನ್. ವೈ.ಎಸ್ ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು, ಈ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ 12 ಕಾಲೇಜುಗಳಲ್ಲಿ ನಡೆಸಿದ ಸರಾಸರಿ ಪರೀಕ್ಷೆಗಳಲ್ಲಿ ಘೋಷಿಸಿದ 10 ರ್‍ಯಾಂಕುಗಳಲ್ಲಿ 9 ರ್‍ಯಾಂಕುಗಳನ್ನು ಗಳಿಸಿ ಕಾಲೇಜಿಗೆ ಹಾಗೂ ಆಡಳಿತ ಮಂಡಳಿಗೆ ಸಂತೋಷವನ್ನು ಉಂಟುಮಾಡಿದೆ.
ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ನಿರಂತರ ಶ್ರಮ ಹಾಗೂ ಮಾರ್ಗದರ್ಶನ ನೀಡಿರುವುದರಿಂದ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ದೇಶದಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಅದೇ ರೀತಿ ಕಾಲೇಜು ಭಾರತ ಸರಕಾರದ ಆಯುಷ್ ಮಂತ್ರಾಲಯದಿಂದ ಶ್ರೇಷ್ಠತಾ ಸಂಶೋಧನ ಕೇಂದ್ರ ಎಂದು ಮಾನ್ಯತೆ ಪಡೆದು ಮಾದರಿ ವಿದ್ಯಾಲಯ ಎಂದು ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದೆ. ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ರ್‍ಯಾಂಕ್ ಲಿಸ್ಟ್ ನಿನ್ನೆ ಪ್ರಕಟಣೆಗೊಂಡಿರುತ್ತದೆ. ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಶಾಂತ ಶೆಟ್ಟಿಯವರು ತಿಳಿಸಿರುತ್ತಾರೆ.
ಡಾ| ವಿವೇಕ್ ಶೆಣೈ 8ನೇ ರ್‍ಯಾಂಕ್, ಡಾ| ಹರ್ಷಿತಾ 7ನೇ ರ್‍ಯಾಂಕ್, ಡಾ| ಮುನೋಟ್ ಸಿಮ್ರನ್ 9ನೇ ರ್‍ಯಾಂಕ್, ಡಾ| ಯಧುಶ್ರೀ 10ನೇ ರ್‍ಯಾಂಕ್, ಡಾ| ಪಲ್ಕಿನ್ 4ನೇ ರ್‍ಯಾಂಕ್, ಡಾ| ಗೋವಿಂದನ್ 1ನೇ ರ್‍ಯಾಂಕ್, ಡಾ| ವರ್ಷಾ 5ನೇ ರ್‍ಯಾಂಕ್, ಡಾ| ರಿಟಾ ಆರೋರಾ2 ನೇ ರ್‍ಯಾಂಕ್, ಡಾ| ಶಿಥಲ್ ಪಿ 3ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.