September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಫೆ.18: ಕೊಕ್ಕಡ ಕೇಸರಿ ಗೆಳೆಯರ ಬಳಗದ ಆಶ್ರಯದಲ್ಲಿ ಕ್ರಿಕೆಟ್ ಪಂದ್ಯಾಟ ಹಾಗೂ ಅಯೋಧ್ಯ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ

ಕೊಕ್ಕಡ: ಕೇಸರಿ ಗೆಳೆಯರ ಬಳಗ ಕೊಕ್ಕಡ ಇದರ ಆಶ್ರಯದಲ್ಲಿ ಹಿಂದೂ ಭಾಂದವರ ಅಯೋಧ್ಯ ಟ್ರೋಫಿ -2024 8 ಜನರ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಹಾಗೂ ಶ್ರೀ ರಾಮ ಜನ್ಮ ಭೂಮಿ ಅಯೋಧ್ಯ ಹೋರಾಟದ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ ಫೆ.18 ರಂದು ಕೊಕ್ಕಡ ಕೋರಿ ಗದ್ದೆ ಮೈದಾನದಲ್ಲಿ ನಡೆಯಲಿದೆ.

ಬೆಳಿಗ್ಗೆ ಉದ್ಘಾಟನೆಯನ್ನು ಈಶ್ವರ್ ಭಟ್ ಹಿತ್ತಿಲು, ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ನಿಕಟಪೂರ್ವಾಧ್ಯಕ್ಷರು ವೇದಮೂರ್ತಿ ಬಾಲಕೃಷ್ಣ ಕೆದಿಲಾಯ ವಹಿಸಲಿದ್ದಾರೆ.

ಮುಖ್ಯಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ರಾಜ್ಯ ಬಿಜೆಪಿ ಕಾರ್ಯದರ್ಶಿ ಬ್ರಿಜೇಶ್ ಚೌಟ, ಕೊಕ್ಕಡ ಗ್ರಾ.,ಪಂ. ಅಧ್ಯಕ್ಷೆ ಬೇಬಿ ಶಬರಾಡಿ, ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ.

ಸಂಜೆ ನಡೆಯುವ ಸಮಾರೋಪ ಸಮಾರಂಭದ ಮುಖ್ಯಅತಿಥಿಗಳಾಗಿ ಸೌತಡ್ಕ ಕ್ಷೇತ್ರದ ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲೂರಾಯ, ಹಾಗೂ ವಿವಿಧ ಸಂಘ ಸಂಸ್ಥೆಯ ಗಣ್ಯರು ಭಾಗವಹಿಸಲಿದ್ದಾರೆ.

ಬಹುಮಾನಗಳು: ಪ್ರಥಮ ರೂ. 8024 ಮತ್ತು ಟ್ರೋಫಿ, ದ್ವಿತೀಯ ರೂ. 5024 ಮತ್ತು ಟ್ರೋಪಿ, ತೃತೀಯ ರೂ. 3024 ಮತ್ತು ಟ್ರೋಫಿ, ಚತುರ್ಥ ರೂ. 2024 ಮತ್ತು ಟ್ರೋಫಿ , ಹಾಗೂ ಉತ್ತಮ ಬೌಲರ್, ಉತ್ತಮ ಬ್ಯಾಟ್ಸ್ ಮೆನ್, ಸರಣಿ ಶ್ರೇಷ್ಠ ಪ್ರಶಸ್ತಿ ಸಿಗಲಿದೆ.

Related posts

ಚಾರ್ಮಾಡಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಗಣೇಶ್ ಕೋಟ್ಯಾನ್ ಆಯ್ಕೆ

Suddi Udaya

ನೆರಿಯ, ಕೊಕ್ಕಡದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ನಾಯಕರು

Suddi Udaya

ದಕ್ಷಿಣ ಕನ್ನಡ ಜಿಲ್ಲಾ ರಬ್ಬರ್ ಟ್ಯಾಪರ್ ಕಾರ್ಮಿಕರ ಸಂಘದ ಅಧ್ಯಕ್ಷ ಕಾಂಗ್ರೆಸ್ ಸೇರ್ಪಡೆ

Suddi Udaya

ಅ.28-29 ರಂದು ನಡೆಯಲಿರುವ “ವಿಶ್ವ ಬಂಟರ ಸಮ್ಮೇಳನದ” ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗೇರುಕಟ್ಟೆ ಮನೆಯೊಂದರ ಮೇಲೆ ಅರಣ್ಯಾಧಿಕಾರಿಗಳ ದಾಳಿ: ಕಾಡು ಪ್ರಾಣಿ ಮಾಂಸ ಸೇರಿದಂತೆ ಪರಿಕರಗಳು ವಶಕ್ಕೆ

Suddi Udaya

ತಾಲೂಕಿನ ಹಲವು ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ಆಗಿ ಉನ್ನತೀಕರಿಸುವಂತೆ ಶಾಸಕ ಹರೀಶ್ ಪೂಂಜರಿಂದ ಮನವಿ

Suddi Udaya
error: Content is protected !!