30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ಶ್ರೀ ಧ.ಮಂ. ಅ. ಹಿ. ಪ್ರಾ. ಶಾಲೆಯಲ್ಲಿ ಮಕ್ಕಳ ವ್ಯಾಪಾರ ಮೇಳ

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಮಕ್ಕಳಲ್ಲಿ ವ್ಯಾಪಾರ ಕೌಶಲವನ್ನು ಬೆಳೆಸುವ ಉದ್ದೇಶದಿಂದ ಮಕ್ಕಳ ವ್ಯಾಪಾರ ಮೇಳವನ್ನು ಆಯೋಜಿಸಲಾಗಿತ್ತು.


ಉಜಿರೆ ಸಿದ್ಧಾರ್ಥ ಪೆಟ್ರೋಲ್ ಬಂಕ್ ಮಾಲಕ ಪ್ರವೀಣ್ ಅವರು ದಂಪತಿ ಸಮೇತರಾಗಿ ಮೇಳ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಎಸ್. ಡಿ. ಎಂ. ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನ ಆಧಿಕಾರಿ ಬಿ ಸೋಮಶೇಖರ ಶೆಟ್ಟಿ ಆಗಮಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ನಾಯ್ಕ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಜಯ ಜಿ ಗೌಡ, ಉಪಾಧ್ಯಕ್ಷ ಅಬೂಬಕ್ಕರ್ ಉಪಸ್ಥಿತರಿದ್ದರು.


ಮೇಳ ಉದ್ಘಾಟಿಸಿ ಮಾತನಾಡಿದ ಪ್ರವೀಣ್ ವ್ಯಾಪಾರ ಎಂಬುವುದು ಒಂದು ಕೌಶಲ. ಅದನ್ನು ಬಾಲ್ಯದಲ್ಲೇ ಸಾಧಿತ ಮಾಡಿಕೊಳ್ಳಲು ಇಂತಹ ಮಕ್ಕಳ ವ್ಯಾಪಾರ ಮೇಳಗಳು ಸಹಕಾರಿ. ವಿದ್ಯಾರ್ಥಿಗಳು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುವ ಮುಖೇನ ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಸೋಮಶೇಖರ್ ಅವರು ಆಥಿತ್ಯ ನುಡಿಗಳನ್ನಾಡುತ್ತಾ”ಸಮಾಜದಲ್ಲಿ ಬದುಕಲು ಅಕ್ಷರ ಜ್ಞಾನಕ್ಕಿಂತಲೂ ವ್ಯಕ್ತಿತ್ವ ಮತ್ತು ವ್ಯವಹಾರ ಜ್ಞಾನ ತುಂಬ ಮುಖ್ಯ. ಮಾರುವವನೂ ಕೊಳ್ಳುವವನ ವಿಶ್ವಾಸಕ್ಕೆ ಭಾಜನನಾದಾಗ ಮಾತ್ರ ವ್ಯಾಪಾರ ವಹಿವಾಟುಗಳು ಯಶಸ್ವಿಯಾಗಲೂ ಸಾಧ್ಯ” ಎಂದು ಹೇಳಿದರು .
ಮಕ್ಕಳು ಇಲ್ಲಿ ತಾವೇ ಸಂಪಾದಿಸುವ ಹಣವನ್ನು ಹೆಚ್ಚು ಗೌರವಿಸುತ್ತಾರೆ.. ಮಕ್ಕಳಿಗೆ ಹಣದ ಮೌಲ್ಯ ಮತ್ತು ಸಂಪಾದನೆಯ ಔಚಿತ್ಯಾ ತಿಳಿಸುವಲ್ಲಿ ಮೆಟ್ರಿಕ್ ಮೇಳಗಳು ಸಹಕಾರಿ ಎಂದು ತಿಳಿಸಿ ಕಾರ್ಯಕ್ರಮವನ್ನು ಸಂಘಟಿಸಿದ ಸರ್ವರಿಗು ಅಭಿನಂದನೆ ತಿಳಿಸಿದರು.


ಕಾರ್ಯಕ್ರಮದ ಆಧ್ಯಕ್ಷರು, ಶಾಲಾ ಮುಖ್ಯಶಿಕ್ಷಕರು ಬಾಲಕೃಷ್ಣ ನಾಯ್ಕ್ ಅವರು ಮೇಳದ ನೀತಿ ನಿಯಮಗಳನ್ನು ವಿವರಿಸಿ, ಎಲ್ಲರಿಗೂ ಲಾಭವಾಗಲಿ ಎಂದು ಹಾರೈಸಿದರು.
ಮೇಳದಲ್ಲಿ ಸುಮಾರು 75 ಅಂಗಡಿ ಮುಂಗಟ್ಟುಗಳು ವ್ಯಾಪಾರ ನಡೆಸಿದವು. ಸಿನಿಮಾ ಟಾಕೀಸ್ ಮೇಳದ ವಿಶೇಷ ಆಕರ್ಷಣೆಯಾಗಿತ್ತು.


ಶಾಲಾ ವಿದ್ಯಾರ್ಥಿಗಳು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕವೃಂದ, ಸಿಬ್ಬಂದಿವೃಂದವರೆಲ್ಲರು ಗ್ರಾಹಕರಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಹ ಶಿಕ್ಷಕ ಕೂಸಪ್ಪ ಗೌಡರ ಮಾರ್ಗದರ್ಶನ, ಮುಖ್ಯಶಿಕ್ಷಕಿ, ಶಿಕ್ಷಕವೃಂದದ ಸಹಕರಿಸಿದರು. ಕಾರ್ಯಕ್ರಮವನ್ನು ಸಹಶಿಕ್ಷಕ ವಿರಾಜ್ ನಿರ್ವಹಿಸಿದರು.

Related posts

ಪತ್ರಕರ್ತ ರಂಜಿತ್ ಮಡಂತ್ಯಾರ್ ರಿಗೆ ರಾಜ್ಯ ಮಟ್ಟದ ಯುವ ಸಾಧಕ ಪ್ರಶಸ್ತಿ

Suddi Udaya

ಧರ್ಮಸ್ಥಳ: ನೇತ್ರಾವತಿ ಸೇತುವೆಯ ಕೆಳಗೆ ಅಪರಿಚಿತ ಶವ ಪತ್ತೆ

Suddi Udaya

ಮುಂಡಾಜೆ: ಮಂದಿರ ಮಹಾಸಂಘ ಮತ್ತು ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಆರತಿ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ “ಅಂತರಾಷ್ಟ್ರೀಯ ಯೋಗ ದಿನಾಚರಣೆ”

Suddi Udaya

ಧರ್ಮಸ್ಥಳ  ಶ್ರೀ ಮಂ.ಸ್ವಾ. ಅ.ಹಿ. ಪ್ರಾ. ಶಾಲೆಯಲ್ಲಿ ‘ಆಟಿಡೊಂಜಿ ದಿನ ‘

Suddi Udaya

ಉಭಯ ಜಿಲ್ಲಾ ಮೊಬೈಲ್ ರೀಟೇಲರ್ ಅಸೋಸಿಯೇಷನ್ ಇದರ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!