24.4 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ನಿರಂಜನ್ ಬಾವಂತಬೆಟ್ಟು ರವರ ನಿಧನಕ್ಕೆ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

ಬೆಳ್ತಂಗಡಿ: ಹಿರಿಯ ಸಹಕಾರಿ ಧುರೀಣ ಬಾವಂತಬೆಟ್ಟು ನಿರಂಜನ್ ಅವರ ನಿಧನದ ಸುದ್ದಿ ತಿಳಿದು ವಿಷಾದವಾಯಿತು.
ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ  ಸಹಕಾರಿ ರಂಗದಲ್ಲಿ ಅವರು ಉತ್ತಮ ಸೇವೆ-ಸಾಧನೆ ಮಾಡಿ ಚಿರಪರಿಚಿತರಾಗಿದ್ದರು. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಹಿಂದುಳಿದವರಿಗೆ ಸಹಕಾರಿ ಸಂಘಗಳ ಮೂಲಕ ಅವರು ಉತ್ತಮ ಸೇವೆ ನೀಡಿ ಆರ್ಥಿಕ ಪ್ರಗತಿಗೆ ಪ್ರೋತ್ಸಾಹ ನೀಡುತ್ತಿದ್ದರು.  ಅವರು ನಮ್ಮ ಕ್ಷೇತ್ರದ ಅಭಿಮಾನಿಯೂ, ಭಕ್ತರೂ ಆಗಿದ್ದು ಎಲ್ಲಾ ಕಾರ್ಯಕ್ರಮಗಳಿಗೆ ಸಕ್ರಿಯ ಸಹಕಾರ ನೀಡುತ್ತಿದ್ದರು.


ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ಸೂಚಿಸಿದರು.

Related posts

ಉಜಿರೆ: ಶ್ರೀ ಧ.ಮಂ. ಸ್ನಾತ್ತಕೋತ್ತರ ಕಾಲೇಜಿನ ಸಮಾಜ ಕಾರ್ಯ ವಿಭಾಗದ “ಫ್ಯೂಚರ್ ಹೆಚ್ ಆರ್ ಲೀಡರ್ಸ್” ವಿಶೇಷ ಕಾರ್ಯಾಗಾರ

Suddi Udaya

ಸೂಳಬೆಟ್ಟು ಬರಾಯ ಶ್ರೀಗೋಪಾಲಕೃಷ್ಣ ದೇವರ ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ಪೂರ್ವಭಾವಿ ಪ್ರಾರ್ಥನೆ

Suddi Udaya

ಅಥ್ಲೆಟಿಕ್ಸ್ ಕ್ರೀಡಾಕೂಟ: ಮೂಡಬಿದಿರೆ ದಿಗಂಬರ ಜೈನ ಆಂ.ಮಾ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮೋಹನ ಪೂಜಾರಿ ಮರೋಡಿ ರವರು ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಶಾಸಕ ಹರೀಶ್ ಪೂಂಜರ ವಿರುದ್ಧ ಪ್ರಕರಣ: ಎರಡೂ ಕೇಸುಗಳ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

Suddi Udaya

ನ್ಯಾಯ್ಯತರ್ಪು: ಮನೆಗಳಿಗೆ ಸಿಡಿಲು ಬಡಿದು ಹಾನಿ: ಸ್ಥಳಕ್ಕೆ ರಕ್ಷಿತ್ ಶಿವರಾಂ ಭೇಟಿ

Suddi Udaya

ಭಾರತೀಯ ಭೂಸೇನೆಯಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಧರ್ಮಸ್ಥಳದ ಅನೀಶ್ ಡಿ.ಎಲ್: ಜೂನ್ 3 ರಂದು ಬೆಳ್ತಂಗಡಿಯಲ್ಲಿ ಅದ್ದೂರಿಯ ಭವ್ಯ ಸ್ವಾಗತ

Suddi Udaya
error: Content is protected !!