ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಕೊಕ್ರಾಡಿ: ಅಕ್ರಮ ಮರಳು ಸಾಗಟ: ವೇಣೂರು ಪೊಲೀಸರಿಂದ ದಾಳಿ: ಆರೋಪಿ ಸಹಿತ ಟಿಪ್ಪರ್ ಲಾರಿ ವಶ

ಬೆಳ್ತಂಗಡಿ: ಕೊಕ್ರಾಡಿ ಗ್ರಾಮದ ಕಜಂಗೆ ದೇವದ ಗುಂಡಿ ಹೊಳೆಯ ಬಳಿ, ಅಕ್ರಮವಾಗಿ ಮರಳು ಕಳ್ಳತನ ಮಾಡಿ ಮಿನಿ ಟಿಪ್ಪರ್ ನಲ್ಲಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ವೇಣೂರು ಪೊಲೀಸರು ವಶಕ್ಕೆ ಪಡೆದ ಘಟನೆ ಫೆ.12ರಂದು ವರದಿಯಾಗಿದೆ.

ಫೆ. 12 ರಂದು ರಾತ್ರಿ, ಕೊಕ್ರಾಡಿ ಗ್ರಾಮದ ಕಜಂಗೆ ದೇವದ ಗುಂಡಿ ಹೊಳೆಯ ಬಳಿ, ಅಕ್ರಮವಾಗಿ ಮರಳು ಕಳ್ಳತನ ಮಾಡಿ ತನ್ನ ಬಾಬ್ತು ಕೆಎ 70-4468 ನೇ ಮಿನಿ ಟಿಪ್ಪರ್ ನಲ್ಲಿ ಸಾಗಾಟ ಮಾಡಲು ಯತ್ನಿಸುತ್ತಿದ್ದ, ಆರೋಪಿ ಕೊಕ್ರಾಡಿ ನಿವಾಸಿ ಧನಕೀರ್ತೀ (50) ಎಂಬಾತನನ್ನು ವಶಕ್ಕೆ ಪಡೆದ ಶ್ರೀಶೈಲ್‌ ಡಿ ಮುರಗೋಡ್‌ ಪಿಎಸ್‌ಐ (ಕಾ.ಸು) ವೇಣೂರು ಪೊಲೀಸ್ ಠಾಣೆರವರು ಹಾಗೂ ಠಾಣಾ ಸಿಬ್ಬಂದಿಗಳು, ಸ್ಥಳದಲ್ಲಿ ಅನಧಿಕೃತವಾಗಿ ಹೊಳೆಯಿಂದ ಮರಳನ್ನು ಕಳವು ಮಾಡಿ ಸುಮಾರು 1 ಯೂನಿಟ್ ನಷ್ಟು ಮರಳನ್ನು ತುಂಬಿಸಿದ್ದ ಟಿಪ್ಪರ್ ಲಾರಿಯನ್ನು, ಮರಳಿನೊಂದಿಗೆ ಮುಂದಿನ ಕಾನೂನುಕ್ರಮಕ್ಕಾಗಿ ಸ್ವಾಧೀನಪಡಿಸಿದ್ದಾರೆ.

ವೇಣೂರು ಪೊಲೀಸ್ ಠಾಣೆಯಲ್ಲಿ ಅಕ್ರ 15/2024 ಕಲಂ 379 IPC ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಮಲವಂತಿಗೆ : ಕಜಕ್ಕೆ ಸ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಬೆಳ್ತಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ವಾತ್ಸಲ್ಯ ನಿಧಿ ವಿತರಣೆ

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ‘ಕಾಮರ್ಸ್ ಕ್ಯಾಂಪಸ್’ ಅಸೋಸಿಯೇಷನ್ ಪದಗ್ರಹಣ ಸಮಾರಂಭ

Suddi Udaya

ಬೆಳ್ತಂಗಡಿ ಸಿವಿಎಲ್ ಇಂಜಿನಿಯರ್ಸ್ ಅಸೋಸಿಯೇಷನ್ 2025-27ನೇ ಸಾಲಿನ ಪದಪ್ರದಾನ ಸಮಾರಂಭ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಸಂಸ್ಕೃತೋತ್ಸವ

Suddi Udaya

ಕಲ್ಮಂಜ ನಿಡಿಗಲ್ ಮಜಲಿನಲ್ಲಿ ನಾಗದೇವರು ಹಾಗೂ ದೈವಗಳ ಪುನರ್ ಪ್ರತಿಷ್ಠೆ

Suddi Udaya
error: Content is protected !!