ಬಳಂಜ: ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ವತಿಯಿಂದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ವಿದ್ಯಾರ್ಥಿಗಳ ವಿದ್ಯಾನಿಧಿಯ ಸಹಾಯಾರ್ಥವಾಗಿ 10 ತಂಡಗಳ ಬಿಡ್ಡಿಂಗ್ ಮಾದರಿಯ ಲೀಗ್ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವು ಫೆ.17 ರಂದು ಶನಿವಾರ ಸಂಜೆ ಗಂಟೆ 6.30 ರಿಂದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಲಿದೆಯೆಂದು ಸಮಿತಿ ಸಂಚಾಲಕ ಹರೀಶ್ ವೈ ಚಂದ್ರಮ ತಿಳಿಸಿದ್ದಾರೆ.
ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯು ಕಳೆದ ಎರಡು ವರ್ಷದಲ್ಲಿ ಇನ್ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ
ವಿಶೇಷವಾಗಿ ಕುಣಿತಾ ಭಜನಾ ತಂಡವು ರಾಷ್ಟ್ರವ್ಯಾಪ್ತಿ ಹಲವಾರು ಕಾರ್ಯಕ್ರಮಗಳನ್ನು ನೀಡಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ತಂಡದಲ್ಲಿ ಎಳೆ ಪ್ರಾಯದ ಮಕ್ಕಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳು ಕೂಡ ಹೆಜ್ಜೆ ಹಾಕುತ್ತಿದ್ದಾರೆ.
ವಿಶೇಷವಾಗಿ ಭಜನಾ ಮಂಡಳಿಯ ಭಜಕರ ವಿದ್ಯೆಗೆ ಸಹಕಾರ ನೀಡುವ ದೃಷ್ಟಿಯಿಂದ ಉತ್ತಮ ಸದುದ್ದೇಶವನ್ನು ಇಟ್ಟುಕೊಂಡು ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿದ್ದೇವೆಂದು ಸಂಚಾಲಕ ಹರೀಶ್ ವೈ ಚಂದ್ರಮ ತಿಳಿಸಿದರು.
ಪಂದ್ಯಾವಳಿಯಲ್ಲಿ ವಿಜೇತರಿಗೆ ಪ್ರಥಮ: ರೂ. 8001/,ದ್ವಿತೀಯ: ರೂ. 6001/,ತೃತೀಯ: ರೂ. 3001/,ಚತುರ್ಥ: ರೂ. 3001/- ಹಾಗೂ ಬ್ರಹ್ಮಶ್ರೀ ಟ್ರೋಪಿ ಸಿಗಲಿದೆ.
ಕಾರ್ಯಕ್ರಮದಲ್ಲಿ ಹರೀಶ್ ಶೆಟ್ಟಿ ಕಂರ್ಬಿತ್ತಿಲು ನಾಲ್ಕೂರು, ಕರಿಯಣ್ಣ, ಜ್ಯೋತಿ ಟ್ರಾವೇಲ್ಸ್ ಗುರುವಾಯನಕೆರೆ, ವಿಜಯ ಕುಮಾರ್ ಜೈನ್, ಆಮಂತ್ರಣ ಪರಿವಾರ, ಜಯನ್ ಮೇಸ್ತ್ರಿ, ನೇತಾಜಿನಗರ, ಬಳಂಜ ಇವರಿಗೆ ಸನ್ಮಾನ ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ: ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಪ್ರಗತಿಪರ ಕೃಷಿಕ ತಿಮ್ಮಪ್ಪ ಪೂಜಾರಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಪೂರ್ವಾಧ್ಯಕ್ಷರಾದ ಪ್ರವೀಣ್ ಕುಮಾರ್ ಹೆಚ್.ಎಸ್, ಬಾಲಕೃಷ್ಣ ಪೂಜಾರಿ ಯೈಕುರಿ, ಸುರೇಶ್ ಪೂಜಾರಿ ಜೈಮಾತ,ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್, ನಿರ್ದೆಶಕ ರಂಜಿತ್ ಪೂಜಾರಿ, ಶ್ರೀಮಾತ ತಂಡದ ಸನತ್ ಶೆಟ್ಟಿ, ಸರ್ವೋದಯ ಫ್ರೆಂಡ್ಸ್ ಕ್ಲಬ್ ಅಟ್ಲಾಜೆ ಅಧ್ಯಕ್ಷ ಸುರೇಶ್ ಪೂಜಾರಿ ಹೇವ, ಯುವಶಕ್ತಿ ಫ್ರೆಂಡ್ಸ್ ತಂಡದ ಸದಸ್ಯ ಪ್ರಣಾಮ್ ಶೆಟ್ಟಿ, ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಸಂಚಾಲಕ ಹರೀಶ್ ವೈ ಚಂದ್ರಮ, ಅಧ್ಯಕ್ಷೆ ಜ್ಯೋತಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.