September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಧನ್ವಂತರಿ ಪೂಜೆ ಹಾಗೂ ದುರ್ಗಾಪೂಜೆ

ಉಜಿರೆ : ವೈದ್ಯಕೀಯ ಸೇವೆಯಲ್ಲಿ ಜನಮೆಚ್ಚುಗೆ ಪಡೆದ ಉಜಿರೆಯ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯು ಬಡ, ಮಧ್ಯಮ ಹಾಗೂ ಎಲ್ಲಾ ವರ್ಗ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಹರ್ಷೆಂದ್ರ ಕುಮಾರ್ ಅವರ ಸಹಕಾರದಲ್ಲಿ ಲಕ್ಷಾಂತರ ಮಂದಿಗೆ ಅತೀ ಕಡಿಮೆ ದರದಲ್ಲಿ ಚಿಕಿತ್ಸೆ ಹಾಗೂ ಸಾವಿರಾರು ಮಂದಿಗೆ ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ರಿಯಾಯತಿ ದರದಲ್ಲಿ ಮಾಡುವ ಮೂಲಕ ಗ್ರಾಮೀಣ ಜನತೆಯ ಆರೋಗ್ಯ ಕಾಪಾಡುವಲ್ಲಿ ಸದಾ ಶ್ರಮಿಸುತ್ತಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.


ಉಜಿರೆಯ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ. ೧೧ರಂದು ದುರ್ಗಾ ಪೂಜೆ ಹಾಗೂ ಧನ್ವಂತರಿ ಪೂಜೆಯ ಬಳಿಕ ಮಾತನಾಡುತ್ತಾ, ಧನ್ವಂತರಿ ಆರಾಧನೆಯಿಂದ ಆರೋಗ್ಯ ವೃದ್ಧಿಸುತ್ತದೆ. ಊರಿನ ಜನತೆ ಆರೋಗ್ಯವಂತರಾಗಿ ಸುಖ ಶಾಂತಿ ನೆಮ್ಮದಿಯೊಂದಿಗೆ ಜೀವನ ನಡೆಸುವಂತಾಗಲಿ. ನಮ್ಮ ವೈದ್ಯಕೀಯ ಸೇವೆಯಿಂದ ಜನ ತೃಪ್ತರಾಗಿರುವುದು ನಮಗೆ ಖುಷಿ ಕೊಟ್ಟಿದೆ. ಇದೇ ರೀತಿಯ ಉತ್ತಮ ಸೇವೆ ನೀಡಲು ಭಗವಂತನ ಅನುಗ್ರಹ ಸದಾ ಇರಲಿ ಎಂಬ ಸದಾಶಯದೊಂದಿಗೆ ರೋಗಿಗಳ ಹಿತದೃಷ್ಟಿಯಿಂದ ಈ ಪೂಜೆಯನ್ನು ನಡೆಸಲಾಗಿದೆ ಎಂದರು.


ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೇವೇಂದ್ರ ಕುಮಾರ್, ವೈದ್ಯಾಧಿಕಾರಿ ಡಾ. ಸಾತ್ವಿಕ್ ಜೈನ್, ಆಸ್ಪತ್ರೆಯ ವೈದ್ಯರು, ಹಾಗೂ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

ವಿಧಾನ ಪರಿಷತ್ ಕಲಾಪ; ಬಿ-ಖಾತೆಯಿಂದ ಪ್ರಯೋಜನವಾಗುತ್ತಿಲ್ಲ, ಫಾರ್ಮ್-3 ನೀಡಲು ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ಎಸ್.ವೈಎಸ್ ಉರುವಾಲು ಪದವು ಸರ್ಕಲ್ ಮಹಾಸಭೆ, ಸಮಿತಿ ರಚನೆ

Suddi Udaya

ಧರ್ಮಸ್ಥಳ: ಚಾಮುಂಡೇಶ್ವರಿ ಭಜನಾ ಮಂಡಳಿ ಮುಳಿಕ್ಕಾರು ಇದರ 25ನೇ ವರ್ಷದ ವಾರ್ಷಿಕೋತ್ಸವ: ಧಾರ್ಮಿಕ ಸಭೆ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಶಾಸಕ ಹರೀಶ್ ಪೂಂಜರವರ ಹೆಸರಿನಲ್ಲಿ ನಕಲಿ ಸಂದೇಶ ರವಾನೆ: ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಕೋಷ್ಟದಿಂದ ದೂರು

Suddi Udaya

ಧರ್ಮಸ್ಥಳ :ವಿಶೇ‍ಷ ಚೇತನರ ಸಮನ್ವಯ ಗ್ರಾಮ ಸಭೆ: 90 ಫಲಾನುಭವಿಗಳಿಗೆ ರೂ.6.30 ಲಕ್ಷ ಆರ್ಥಿಕ ಪ್ರೋತ್ಸಾಹ ನಿಧಿ ಹಸ್ತಾಂತರ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!