
ಕೊಕ್ಕಡ: ಬಯಲು ಆಲಯ ಖ್ಯಾತಿಯ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಶ್ರೀ ದೇವರ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ 108 ತೆಂಗಿನಕಾಯಿ ಗಣಹೋಮ ನಡೆಯಿತು.


ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಪೃಥ್ವಿ ಸಾನಿಕಂ, ಕಾರ್ಯನಿರ್ವಹಣಾಧಿಕಾರಿ ಕೆ.ವಿ ಶ್ರೀನಿವಾಸ , ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಸಮಿತಿಯ ಮಾಜಿ ಸದಸ್ಯರು, ಅರ್ಚಕ ವೃಂದ ಹಾಗೂ ಸಿಬ್ಬಂದಿ ವರ್ಗದವರು, ಭಕ್ತಾದಿಗಳು ಉಪಸ್ಥಿತರಿದ್ದರು.

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಇಂದು ರಾತ್ರಿ 9 ಕ್ಕೆ ಮೂಡಪ್ಪ ಸೇವೆ ನಡೆಯಲಿದೆ.
ಬೆಳಿಗ್ಗೆನಿಂದ ಸಂಜೆ 5ರ ವರೆಗೆ ವಿವಿಧ ಭಜನಾ ತಂಡಗಳಿಂದ ಉಪ್ಪಿನಂಗಡಿಯ ವಾಮನ ನಾಯಕ್ ನೇತೃತ್ವದಲ್ಲಿ ಭಜನಾ ಸೇವೆ, ಸಂಜೆ 5.30ರಿಂದ ಶ್ರೀ ಕ್ಷೇತ್ರ ಸೌತಡ್ಕದ ಪುಟಾಣಿ ವಿದ್ಯಾರ್ಥಿಗಳಿಂದ “ಚಿಣ್ಣರ ಚಿಲಿಪಿಲಿ”, ಸಂಜೆ 6.30ರಿಂದ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ಕೊಕ್ಕಡ ಶಾಖೆಯ ವಿದ್ಯಾರ್ಥಿಗಳಿಂದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿ ಕಲಾ ಮತ್ತು ವಿದ್ವಾನ್ ಗಿರೀಶ್ ಕುಮಾರ್ ನಿರ್ದೇಶನದಲ್ಲಿ “ನೃತ್ಯಾಂಜಲಿ “, ರಾತ್ರಿ 8ರಿಂದ ಝೀ ಕನ್ನಡ ವಾಹಿನಿಯ ದ.ಕ.ಜಿಲ್ಲೆಯ ಬಿ.ಸಿ ರೋಡಿನ ನೃತ್ಯ ತಂಡದ ತುಳು ಚಲನಚಿತ್ರ ನಿರ್ದೇಶಕ ವಿನೋದ್ ರಾಜ್ ನೇತೃತ್ವದ “ಎಕ್ಸ್ಟೀಮ್ ಡ್ಯಾನ್ಸ್ ಕ್ರೂ” ತಂಡದಿಂದ “ಡಾನ್ಸ್ ಕರ್ನಾಟಕ ಡಾನ್ಸ್ ” ನೃತ್ಯ-ಗಾನ -ಸಂಭ್ರಮ ನಡೆಯಲಿದೆ.