ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಚಾಲನೆ: ಗೊನೆ ಮುಹೂರ್ತ, ತೋರಣ ಮುಹೂರ್ತ, ನವಕಕಲಶ, ಧ್ವಜಾರೋಹಣ

Suddi Udaya

ಬೆಳ್ತಂಗಡಿ: ಇಲ್ಲಿಯ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ.13 ರಿಂದ ಪ್ರಾರಂಭಗೊಂಡು ಫೆ.22 ರವರೆಗೆ ಕ್ಷೇತ್ರದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಇಂದು ಬೆಳಗ್ಗೆ ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಸಮುಚ್ಚಯದ ಭ| ಶ್ರೀ ಶಾಂತಿನಾಥ ಸ್ವಾಮಿ, ಭ| ಶ್ರೀ ಅನಂತನಾಥ ಸ್ವಾಮಿ, ಭ| ಶ್ರೀ ಚಂದ್ರನಾಥ ಸ್ವಾಮಿ, ಭ| ಶ್ರೀಪಾರ್ಶ್ವನಾಥ ಸ್ವಾಮಿ ದೇವರಿಗೆ “ಕ್ಷೀರಾಭೀಷೇಕ”, ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರಿಗೆ ಹಾಗೂ ಬ್ರಹ್ಮದೇವರಿಗೆ “ಮಹಾಪೂಜೆ” ನಡೆಯಿತು.

ನಂತರ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವರ ಸನ್ನಿಧಾನದಲ್ಲಿ ಬೆಳಗ್ಗೆ ಪ್ರಶ್ನಾಚಿಂತನ, ಗೊನೆ ಮುಹೂರ್ತ, ತೋರಣ ಮುಹೂರ್ತ, ನವಕಕಲಶ, ಧ್ವಜಾರೋಹಣ ಬಳಿಕ ಪ್ರಸನ್ನ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರು ಜಯವರ್ಮರಾಜ ಬಳ್ಳಾಲ್ ಕೆಲ್ಲಗುತ್ತು ಸಬ್ರಬೈಲು, ಹಾಗೂ ಕುಟುಂಬಸ್ಥರು, ಅರ್ಚಕ ವೃಂದ, ಊರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

Leave a Comment

error: Content is protected !!