ಟೆಲಿಗ್ರಾಮ್‌ ಆಪ್‌ ಮೂಲಕ ಹಣ ವರ್ಗಾಹಿಸಿ ಮೋಸ: ಕುವೆಟ್ಟು ನಿವಾಸಿ ನುಪೈಲಾ ರಿಗೆ ರೂ. 6.95 ಲಕ್ಷ ವಂಚನೆ

Suddi Udaya

ಬೆಳ್ತಂಗಡಿ: ಟೆಲಿಗ್ರಾಮ್‌ ಆಪ್‌ ಮೂಲಕ ಆನ್ ಲೈನ್ ಪ್ರೊಡಕ್ಟ್ ಗೆ ರೇಟಿಗ್ ಮಾಡುವ ಕೆಲಸ ನಿರ್ವಹಿಸುತ್ತಿದ್ದ ನುಪೈಲಾ ಕೆ ಐ ಎಂಬುವವರಿಗೆ ಸಂಸ್ಥೆಯವರೆಂದು ಪರಿಚಯಿಸಿಕೊಂಡ ಅಪರಿಚಿತ ಆರೋಪಿಯು ವಿವಿಧ ಖಾತೆಗಳಿಗೆ ಒಟ್ಟು ರೂ.6,95,148 /- ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಫೆ.12 ರಂದು ನಡೆದಿದೆ.

ಕುವೆಟ್ಟು ನಿವಾಸಿ ನುಪೈಲಾ ಕೆ ಐ (26) ಎಂಬವರ ದೂರಿನಂತೆ, ಫೆ. 06 ರಂದು ಟೆಲಿಗ್ರಾಮ್‌ ಆಪ್‌ ಮೂಲಕ, ಡಾಟ ರೇಡ್‌ ಎಂಬ ಕಂಪನಿಯಿಂದ ಬಂದ ಲಿಂಕ್‌ ಮೂಲಕ ಆನ್ ಲೈನ್ ಪ್ರೊಡಕ್ಟ್ ಗೆ ರೇಟಿಗ್ ಮಾಡುವ ಕೆಲಸ ನಿರ್ವಹಿಸಿದ್ದು, ಈ ವೇಳೆ ರೂ 900/- ನ್ನು ನುಪೈಲ್ ಕೆ.ಐ ರವರ ಖಾತೆಗೆ ಹಾಕಿರುತ್ತಾರೆ. ಆ ಬಳಿಕ ಸಂಸ್ಥೆಯವರೆಂದು ಪರಿಚಯಿಸಿಕೊಂಡ ಅಪರಿಚಿತ ಆರೋಪಿ, ಫೆ.08 ರಿಂದ ಫೆ.12 ರ ಅವಧಿಯಲ್ಲಿ, ವಿವಿಧ ಖಾತೆಗಳಿಗೆ ಪಿರ್ಯಾದಿದಾರರ ಖಾತೆಯಿಂದ ಆನ್‌ ಲೈನ್‌ ಮೂಲಕ ಒಟ್ಟು ರೂ 6,95,148 /- ಗಳನ್ನು ವರ್ಗಾಯಿಸಿಕೊಂಡಿದ್ದು. ವರ್ಗಾಯಿಸಿಕೊಂಡ ಹಣವನ್ನು ಮರುಪಾವತಿಸದೇ ಆನ್‌ ಲೈನ್‌ ಮೂಲಕ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 20/2024 ಕಲಂ 419,420, IPC , & 66(D) IT Act ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Comment

error: Content is protected !!