23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದರೂ ಹಲವಾರು ಕುಟುಂಬಗಳಿಗೆ ಇನ್ನೂ ವಿದ್ಯುತ್ ಭಾಗ್ಯವಿಲ್ಲ: ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಅಳದಂಗಡಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಒತ್ತಾಯ

ಅಳದಂಗಡಿ: ಅಳದಂಗಡಿ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಸರಸ್ವತಿ ಇವರ ಅಧ್ಯಕ್ಷತೆಯಲ್ಲಿ ಫೆ.15 ರಂದು ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಂಜಿತ್ ಕುಮಾರ್ ರವರು ಗ್ರಾಮ‌ಸಭೆಯನ್ನು ಮುನ್ನಡೆಸಿದರು.

ಗ್ರಾಮ‌ಸಭೆಗೆ 27 ಇಲಾಖೆಯ ಅಧಿಕಾರಿಗಳು ಬರಬೇಕು. ಆಗಿರುವಾಗ ಗ್ರಾಮ ಸಭೆಗೆ ಬಂದದ್ದು ಮೂರು ಇಲಾಖೆಯವರು. ಈ ರೀತಿಯಾದರೆ ಗ್ರಾಮಸಭೆ ಯಾರಿಗೆ, ಗ್ರಾಮಸ್ಥರಿಗೆ ಕೆಲಸವಿಲ್ಲವೇ, ಗ್ರಾಮ ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯತ್ ನಿಂದ ಅಧಿಕಾರಿಗಳಿಗೆ ಗ್ರಾಮ ಸಭೆಯ ಆಮಂತ್ರಣ ನೀಡಿದ್ದೇವೆ, ಶಿಸ್ತು ಕ್ರಮ ಕೈಗೊಳ್ಳಲು ನಮಗೆ ಬರುವುದಿಲ್ಲ ಎಂದು ನೋಡೇಲ್ ಅಧಿಕಾರಿ ತಿಳಿಸಿದರು.

ಸುಲ್ಕೇರಿಮೊಗ್ರು ಗ್ರಾಮದಲ್ಲಿ ಮೂವತ್ತು ಕುಟುಂಬಗಳು ವಿದ್ಯುತ್ ಸಮಸ್ಯೆಯಿಂದ ಕತ್ತಲೆಯಲ್ಲಿ ಜೀವನ ನಡೆಸುತ್ತಿದ್ದಾರೆ. ವೈಡ್ ಲೈಪ್ ನಿಂದ ವಿದ್ಯುತ್ ಸಮಸ್ಯೆ ಬಗ್ಗೆ ಕ್ಲಿಯರೆನ್ಸ್ ಸಿಕ್ಕಿದೆ. ಆದರೆ ಈ ಕೆಲಸ ರಾಜ್ಯ ಸರಕಾರದಿಂದ ಮಾಡುವಂತದ್ದು.ಸರಿ ಮಾಡುವದಾದರೆ ನಾಲ್ಕು ತಿಂಗಳ ಕೆಲಸ ನಾಲ್ಕೂ ವರ್ಷವಾದರೂ ಇನ್ನೂ ವಿದ್ಯುತ್ ಭಾಗ್ಯ ಇಲ್ಲ. ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾದರೂ ಇಲ್ಲಿಗೆ ಇನ್ನೂ ವಿದ್ಯುತ್ ಸಿಗದಿರುವುದು ವಿಪರ್ಯಾಸ ಎಂದು ಸತೀಶ್ ಸುಲ್ಕೇರಿಮೊಗ್ರು ಹಾಗೂ ದೇವಿ ಪ್ರಸಾದ್ ಗ್ರಾಮ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪಿಲ್ಯ ಗ್ರಾಮದಲ್ಲಿ ಕೆರೆ ಒತ್ತುವರಿ ಮಾಡಿದ್ದಾರೆ. ಅದರ ವಿರುದ್ದ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾವು ಒತ್ತುವರಿ ಮಾಡುತ್ತೇವೆ. ಕುಡಿಯುವ ನೀರು ಸರಿಯಾಗಿ ಸರಬರಾಜು ಆಗದೆ ಗ್ರಾಮಸ್ಥರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.ಕೂಡಲೇ ನೀರಿನ‌ ಸೌಲಭ್ಯ ಒದಗಿಸಬೇಕೆಂದು ಶೀನ ಪಿಲ್ಯ ತಿಳಿಸಿದರು.

ಪಂಚಾಯತ್ ಉಪಾಧ್ಯಕ್ಷೆ ಶಾಲಿನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಹಾಗೂ ಪಂಚಾಯತ್ ಸದಸ್ಯರು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಲೆಕ್ಕ ಸಹಾಯಕ ಪೂವಪ್ಪ ಮಲೆಕುಡಿಯ ಸ್ವಾಗತಿಸಿದರು.

Related posts

ಮಚ್ಚಿನ ಜಲಾಯನ ಸಮಿತಿಯಿಂದ ಅರ್ಹ ಫಲಾನುಭವಿಗಳಿಗೆ ಕೋಳಿಮರಿ ವಿತರಣೆ

Suddi Udaya

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ; ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಧುಮೇಹ ಪರೀಕ್ಷೆಯಲ್ಲಿ ನಿಖರ ವರದಿ ನೀಡಬಲ್ಲ ಮೆಶಿನ್ ಅಳವಡಿಕೆ

Suddi Udaya

ಗುರುವಾಯನಕೆರೆ: ಜ್ಞಾನ ವಿಕಾಸ ಕೇಂದ್ರಗಳ ಸೇವಾ ಪ್ರತಿನಿಧಿಗಳ ಸಭೆ

Suddi Udaya

ಕೊಯ್ಯೂರು ಕಾಂತಜೆ ಸಮೀಪ ತಡೆ ಗೋಡೆಗೆ ಕೆ.ಎಸ್.ಆರ್.ಟಿ.ಸಿ.ಬಸ್ ಡಿಕ್ಕಿ, ತಪ್ಪಿದ ದೊಡ್ಡ ಅನಾಹುತ

Suddi Udaya

ಅಡಿಕೆ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಕೇಂದ್ರ ಕೃಷಿ ಸಚಿವರಿಗೆ ಸಂಸದ ಚೌಟ ಮನವಿ

Suddi Udaya
error: Content is protected !!