July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ರೈತರ, ಜನ ಸಾಮಾನ್ಯರ ಬಜೆಟ್: ರಕ್ಷಿತ್ ಶಿವರಾಂ

ಬೆಳ್ತಂಗಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಂಡಿಸಿರುವ ಚೊಚ್ಚಲ 15 ನೇ ಬಜೆಟ್ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ, ಮುಖ್ಯವಾಗಿ ಕೃಷಿ ,ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿ ಜನಸಾಮಾನ್ಯರ ಕಷ್ಟವನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಅತ್ಯುತ್ತಮ ಬಜೆಟ್ ಇದಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಗ್ಯಾರಂಟಿ ಯೋಜನೆಗಳ ಜೊತೆಗೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. 2024-25 ರಲ್ಲಿ ಗ್ಯಾರಂಟಿಗಳಿಗೆ ರೂ 52,000 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದು ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 50 ಸಾವಿರದಿಂದ 55 ಸಾವಿರವನ್ನು ಒದಗಿಸುತ್ತಿದೆ. ಇದು ಒಂದು ಜಾಗತಿಕ ದಾಖಲೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ 9 ತಿಂಗಳ ಅವಧಿಯಲ್ಲಿ ಗ್ಯಾರಂಟಿ ಯೋಜನೆಗಳ ಜೊತೆ ಜೊತೆಗೆ ಸುಮಾರು 21,168 ಕೋಟಿ ರೂ ಕಾಮಗಾರಿಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹಿಂದಿನ ಬಿಜೆಪಿ ಸರ್ಕಾರದಿಂದ ಅನುಮೋದನೆಗೊಂಡ 2230 ಕೋಟಿ ರೂಗಳ ಕಾಮಗಾರಿ ಯೋಜನೆಗೂ ಅನುಮೋದನೆ ನೀಡಿದೆ ಸರ್ಕಾರ. ಅಭಿವೃದ್ಧಿಯಲ್ಲಿ ಯಾವ ರಾಜಕಾರಣ ಇಲ್ಲಾ ಎಂಬುದು ಬಹಳ ಸ್ಪಷ್ಟವಾಗಿದೆ ಸರ್ವರನ್ನೂ ಒಳಗೊಂಡ, ಸರ್ವತೋಮುಖ ಪ್ರಗತಿಯ ಕರ್ನಾಟಕ ನವನಿರ್ಮಾಣದ ಗ್ಯಾರಂಟಿ ಬಜೆಟನ್ನು ರಾಜ್ಯದ ಸಮಸ್ತ ಜನರಿಗೆ ನೀಡಿದೆ ಎಂದು ತಿಳಿಸಿದ್ದಾರೆ.

Related posts

ಉಜಿರೆ: ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ರವರ ಪತ್ನಿ ಶ್ರೀಮತಿ ಬಿ. ಸರೋಜಿನಿ ದೇವಿ ನಿಧನ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ ವಾರೀಸುದಾರರ ಪತ್ತೆಗೆ ಮನವಿ

Suddi Udaya

ಡಿ. 13-14 ಬಳಂಜ ಶಾಲೆಗೆ ಅಮೃತ ಸಂಭ್ರಮ, ವಿಶೇಷ ಕಾರ್ಯಕ್ರಮಗಳ ಆಯೋಜನೆ

Suddi Udaya

ಕಲ್ಲೇರಿಯ ಪವರ್ ಮ್ಯಾನ್ ಸಂದೀಪ್ ಎಂ ರವರು ಮಂಗಳೂರಿನ ಮಲ್ಲಿಕಟ್ಟೆ ಕಾರ್ಯ ಮತ್ತು ಪಾಲನಾ ಶಾಖೆಗೆ ಪದೋನ್ನತಿ

Suddi Udaya

ದ.ಕ.ಜಿಲ್ಲೆಯ ಕಡಲ ತೀರದ ಕೊರೆತವನ್ನು ತಡೆಗಟ್ಟಲು ಶಾಶ್ವತವಾಗಿ ಪರಿಹಾರ ರೂಪಿಸಿ – ವಿಧಾನಪರಿಷತ್ತಿನಲ್ಲಿ ಎಂಎಲ್ಸಿ ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ : ಸಿಬಿಐ ಮೇಲ್ಮನವಿ

Suddi Udaya
error: Content is protected !!