24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ತೆಕ್ಕಾರು ಪ್ರಾ.ಕೃ.ಪ. ಸ. ಸಂಘದ ಉಪಾಧ್ಯಕ್ಷ ನಾಭಿರಾಜ್ ಹೆಗ್ಡೆ ನಿಧನ


ತೆಕ್ಕಾರು, ಶ್ರೀ ನಾಭಿರಾಜ್ ಹೆಗ್ಡೆ ಗುರುವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾದರು.
ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಮರಮ ನಿವಾಸಿ ನಾಭಿರಾಜ್ ಹೆಗ್ಡೆ ಸಮಾಜ ಸೇವಾ ಚಟುವಟಿಕೆಗಳ 000pಮೂಲಕ ಜನಾನುರಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿ ಹಲವಾರು ಸಮಾಜಮುಖಿ ಚಟುವಟಿಕೆಗಳಲಿ ಭಾಗವಹಿಸುತಿದ್ದರು ತೆಕ್ಕಾರು ಯುವಕ ಮಂಡಲ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಟ್ಟಿಕಳ ಇದರ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಮಾದರಿರೀತಿಯಲ್ಲಿ ವಾರ್ಷಿಕೋತ್ಸವ ಆಯೋಜಿಸಿ ಶಿಕ್ಷಣ ಸಂಸ್ಥೆಗಳ ಪೋಷಕರಾಗಿದ್ದ ಇವರು ಬಿದ್ದುಕಲ್ಲು ಶ್ರೀ ಅದಿನಾತೇಶ್ವರ ಬಸದಿ, ತೆಕ್ಕಾರು ಇದರ ಅಧ್ಯಕ್ಷರಾಗಿ ಅಭಿವೃದ್ಧಿ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.ಮೂಲತ ನಾರಾವಿಯ .. ತೆಕ್ಕಾರು ಮರಮ ಅನಂತಯ್ಯ ಕೊಂಡೆಯವರ ಪುತ್ರಿಯನ್ನು ವಿವಾಹವಾಗಿ ಮರಮದಲ್ಲೆ ನೆಲೆಸಿ ಪ್ರಗತಿಪರ ಕೃಷಿಕರಾಗಿದ್ದರು. ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ರಾಜವರ್ಮ ಜೈನ್, ಸಹೋದರ ಬೆಳ್ತಂಗಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಶ್ರೀ ವಿನಯ ಹೆಗ್ಡೆ, ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರವೀಣ್ ರೈ, ಉಪ್ಪಿನಂಗಡಿಯ ಸಾಮಾಜಿಕ ಮುಂದಾಳು ಮಹೇಂದ್ರ ವರ್ಮ, ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಪೂಜಾರಿ, ಟ್ರಸ್ಟಿಗಳಾದ ಮಂಜುನಾಥ್ ಸಾಲ್ಯಾನ್, ರವೀಂದ್ರ ಪಿಲಿಬೈಲ್, ಸತೀಶ್ ಹೊಸ ಮುಗ್ರು ಹಾಗೂ ತೆಕ್ಕಾರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್, ನಿರ್ದೇಶಕರು , ಸಿಬ್ಬಂದಿ ವರ್ಗ ಹಾಗೂ ಕುಟುಂಬ ವರ್ಗ ಮತ್ತು ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು.

Related posts

ಉಜಿರೆ: ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಗುಡ್ಡ ಗಾಡು ಓಟ

Suddi Udaya

ತಾಲೂಕು ಮಟ್ಟದ ಖೋ-ಖೋ ಸ್ಪರ್ಧೆ: ನಡ ಸರಕಾರಿ ಪಿ.ಯು. ಕಾಲೇಜು ಬಾಲಕರ ಹಾಗೂ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯಲ್ಲಿ ರೂ. 986 ಕೋಟಿ ಒಟ್ಟು ವ್ಯವಹಾರ, ರೂ.12.01 ಕೋಟಿ ನಿವ್ವಳ ಲಾಭ

Suddi Udaya

ಬೆಳ್ತಂಗಡಿ : ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಮಡಂತ್ಯಾರು ಬಸವನಗುಡಿ ಬಳಿ ಪ್ರತ್ಯಕ್ಷಗೊಂಡ ಬೃಹತ್ ಹೆಬ್ಬಾವು: ಹಾವನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ತಜ್ಞೆ ಆಶಾ ಯಾನೆ ಶೋಭಾ ಕುಪ್ಪೆಟ್ಟಿ

Suddi Udaya

ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ‘ಕೈಗಾರಿಕಾ ಕೇಂದ್ರಗಳ ಭೇಟಿ

Suddi Udaya
error: Content is protected !!