30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ ಯೂನಿಯನ್ ಬ್ಯಾಂಕ್ ಎಟಿಎಂ ಬಳಿ, ನಿಲ್ಲಿಸಿದ್ದ ರೂ.1.50 ಲಕ್ಷ ಮೌಲ್ಯದ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ ಸೈಕಲ್‌ ಕಳವು

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಾಹಿತಿ ಕಛೇರಿ ಬಳಿ ಇರುವ ಯೂನಿಯನ್ ಬ್ಯಾಂಕ್ ಎಟಿಎಂ ಬಳಿ, ನಿಲ್ಲಿಸಿದ್ದ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ ಸೈಕಲ್‌ನ್ನು ಯಾರೋ ಕಳ್ಳರು ಕಳವುಗೈದ ಪ್ರಕರಣ ಫೆ.15ರಂದು ವರದಿಯಾಗಿದೆ.

ಹಿಟ್ನಾಳ್ ಗ್ರಾಮ, ಕೊಪ್ಪಳ ನಿವಾಸಿ ಬಸವರಾಜ್,ಎಸ್, ಎಂಬುವರು ನೀಡಿದ ದೂರಿನಂತೆ, ಫೆ.14 ರಂದು ರಾತ್ರಿ ಧರ್ಮಸ್ಥಳ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಾಹಿತಿ ಕಛೇರಿ ಬಳಿ ಇರುವ ಯೂನಿಯನ್ ಬ್ಯಾಂಕ್ ಎಟಿಎಂ ಬಳಿ, ತನ್ನ KA-05-HJ-7954 ನೇ ನೋಂದಣಿ ಸಂಖ್ಯೆಯ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ ಸೈಕಲ್‌ ನಿಲ್ಲಿಸಿದ್ದು, ಮರುದಿನ ಫೆ.15 ರಂದು ಬೆಳಿಗ್ಗೆ ನೋಡಿದಾಗ ಮೋಟಾರ್‌ ಸೈಕಲ್‌ ಕಾಣದಿದ್ದು, ಸದ್ರಿ ಪರಿಸರದಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಅಂದಾಜು ರೂ 150000/-ಮೌಲ್ಯದ ಸದ್ರಿ ಮೋಟರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 08/2024 ಕಲಂ: 379 ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗುರುವಾಯನಕೆರೆ ಶಕ್ತಿ ನಗರದ ಜಂಕ್ಷನ್ ನಲ್ಲಿ ನಾಮಫಲಕ ಅಳವಡಿಕೆ

Suddi Udaya

ಹತ್ಯಡ್ಕ: ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಮಹೋತ್ಸವ: ಮಹಾಪೂಜೆ, ದರ್ಶನ ಬಲಿ ನಂತರ ಬಟ್ಟಲು ಕಾಣಿಕೆ

Suddi Udaya

ಕುದುರೆಮುಖ, ನೇತ್ರಾವತಿ ಪೀಕ್ ಚಾರಣಕ್ಕೆ ಆನ್‌ಲೈನ್ ಮೂಲಕ ಬುಕಿಂಗ್

Suddi Udaya

ಎನ್ನೆಸ್ಸೆಸ್ ವತಿಯಿಂದ ರಾಷ್ಟ್ರೀಯ ಏಕತಾ ದಿನಾಚರಣೆ

Suddi Udaya

ಸುಹಾಸ್ ಶೆಟ್ಟಿ ಮನೆಗೆ ಹೋಗಿ ಪೋಷಕರಿಗೆ ಸಾಂತ್ವನ ಹೇಳಿದ ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ

Suddi Udaya

ಕಲ್ಮಂಜ: ಪುರೋಹಿತ ಶ್ರೀಕಾಂತ ಭಿಡೆ ನಿಧನ

Suddi Udaya
error: Content is protected !!