ಉರುವಾಲು : ಈ ಕ್ಷೇತ್ರದಲ್ಲಿ ಶಾಂತಿ ನೆಲೆಸಿದೆ ದೈವಬಲ ಮತ್ತು ಭಕ್ತ ಬಲ ಎರಡು ಇದೆ. ಹಾಗಾಗಿ ಇಷ್ಟು ಅಭಿವೃದ್ಧಿ ಹೊಂದಿದೆ. ಮನೆಯಲ್ಲಿ ಪ್ರೀತಿ ವಿಶ್ವಾಸ ಬತ್ತಿ ಹೋಗಿದೆ. ಬದುಕಿಗೆ ಧಾರ್ಮಿಕ ಶ್ರದ್ಧಾ ಕೇಂದ್ರ ದಿಕ್ಸೂಚಿಯಾಗಿದೆ ಎಂದು ಫೆ16 ರಂದು ನಡೆದ ಕೊರಿಂಜ ಪಂಚಲಿಂಗೇಶ್ವರ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಓಡಿಯೂರು ಗುರುದೇವ ದತ್ತ ಸಂಸ್ಥಾನಮ್ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿ ಮಾತನಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾಂತಾ ಸಹ ಸೇವಾ ಪ್ರಮುಖ್ ನಾ. ಸೀತಾರಾಮ ಧಾರ್ಮಿಕ ಉಪನ್ಯಾಸ ನೀಡುತ್ತಾ ಅಂಧಕಾರದಲ್ಲಿ ಇದ್ದ ಮಾನವ ಅದರಿಂದ ಹೊರಬರಲು ಊರು ನಿರ್ಮಿಸಿದ ಮತ್ತೆ ದೇವಸ್ಥಾನ ಕಟ್ಟಿಸಿದ. ಜಗತ್ತಿನ ಯಾವ ಸಮಾಜದಲ್ಲಿ ಕೂಡ ನಮ್ಮ ಹಿಂದೂ ಸಮಾಜದಷ್ಟು ತಾಳ್ಮೆ ಇರಲಿಕ್ಕಿಲ್ಲ, ಯಾಕೆಂದರೆ ನಾವು ರಾಮ ಮಂದಿರ ನಿರ್ಮಾಣಕ್ಕೆ 500 ವರ್ಷ ಕಾದಿದ್ದೇವೆ. ಮನೆಯಿಂದ ಸಂಸ್ಕಾರ ಬರಬೇಕು. ಹಿಂದೂ ಸಂಸ್ಕೃತಿ ಜಗತ್ತಿಗೆ ಸಂಸ್ಕಾರವನ್ನು ತಿಳಿಸಿಕೊಟ್ಟವರು ಎಂದರು.
ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಕಣಿಯೂರು ಅಧ್ಯಕ್ಷ ಯಶವಂತ ವಹಿಸಿದರು.
ಈ ಸಂದಭ್ದಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿ ವ್ಯವಸ್ಥಾಪನ ಅಧ್ಯಕ್ಷ ಮೋಹನ್ ರಾವ್ ಸುಳ್ಳಿ, ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಸದಾನಂದ ಮೇಲಾಂಟ ಮುಗರೋಡಿ, ಕಲ್ಲೇರಿ ಸಿವಿಲ್ ಇಂಜಿನಿಯರ್ ಸಾಮ್ರಾಟ್ ಕರ್ಕೆರ
ಮಾನ್ಯ ಸತ್ಯ ಚಾವಡಿ ಮನೆ ಅಧ್ಯಕ್ಷ ಜನಾರ್ಧನ ಪೂಜಾರಿ ಕಡ್ತಿಲ, ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರವೀಣ್ ರೈ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖoಡಿಗ, ಜನಜಾಗೃತಿ ವೇದಿಕೆ ಕೇಂದ್ರ ಸಮಿತಿ ಕಾರ್ಯಕಾರಿ ಮಂಡಳಿ ಸದಸ್ಯ ಮೋನಪ್ಪ ಗೌಡ ಮಣಿಲ, ಕುರಾಯ ಸದಾಶಿವ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಾಬು ಗೌಡ, ವಿಷ್ಣುಮೂರ್ತಿ ದೇವಸ್ಥಾನ ಪೆಲಕ್ತಿಮಾರು ಅಧ್ಯಕ್ಷ ಸುಂದರ ಗೌಡ ಉಪಸ್ಥಿತರಿದ್ದರು.
ಆಡಳಿತ ಮೋಕ್ತಸರರಾದ ಯೋಗೀಶ್ ಕಡ್ತಿಲ ಸ್ವಾಗತಿಸಿ, ಮಹಾಗಣಪತಿ ಭಟ್ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ವಿಜಯ ಕಲ್ಲಳಿಕೆ ಧನ್ಯವಾದವಿತ್ತರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಾದ ವಿದುಷಿ ಡಾ| ವಿದ್ಯಾಲಕ್ಷ್ಮಿ ನಾಟ್ಯ ವಿದ್ಯಾ ನಿಲಯ ಕುಂಬಳ ಇವರಿಂದ ನೃತ್ಯ ಸಂಭ್ರಮ ನಡೆಯಿತು.