30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಾರ್ಮಾಡಿ ಘಾಟಿ ಪರಿಸರದ ಬಾರಿಮಲೆಯಲ್ಲಿ ಬೆಂಕಿ

ಚಾರ್ಮಾಡಿ ಘಾಟಿ ಪರಿಸರದ ಚಿಕ್ಕಮಗಳೂರು ಅರಣ್ಯ ಇಲಾಖೆ ವ್ಯಾಪ್ತಿಯ ಬಾರಿಮಲೆ ಎಸ್ಟೇಟ್ ಪ್ರದೇಶದಲ್ಲಿ ಬೆಂಕಿ ಹೊತ್ತಿ ಉರಿದ ಘಟನೆ ವರದಿಯಾಗಿದೆ.

ಸ್ಥಳೀಯರು ಅರಣ್ಯದ ಕಲ್ಲುಗಳ ಪ್ರದೇಶದಲ್ಲಿ ಒಣಗಿರುವ ಹುಲ್ಲು ಹಾಗೂ ಗಿಡಗಂಟಿಗಳಿಗೆ ಹಚ್ಚಿರುವ ಬೆಂಕಿ ಪರಿಸರವನ್ನು ವ್ಯಾಪಿಸಿರುವ ಶಂಕೆ ವ್ಯಕ್ತವಾಗಿದೆ. ಇಲ್ಲಿ ಬೇಸಿಗೆ ದಿನಗಳಲ್ಲಿ ಬೆಂಕಿ ಹಚ್ಚುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಒಣಗಿರುವ ಹುಲ್ಲನ್ನು ನಾಶ ಮಾಡುವ ಉದ್ದೇಶದಿಂದ ಹಚ್ಚುವ ಬೆಂಕಿ ಮುಂಜಾಗ್ರತೆ ಕೈಗೊಳ್ಳದಿದ್ದರೆ ಕಾಡ್ಗಿಚ್ಚಿಗೂ ಕಾರಣವಾಗುತ್ತದೆ. ಪ್ರಸ್ತುತ ಬೆಂಕಿ ಕಲ್ಲುಗಳ ಪ್ರದೇಶದಲ್ಲಿ ಇದ್ದು ಸದ್ಯ ಹತೋಟಿಗೆ ಬಂದಿದೆ ಎಂದು ಹೇಳಲಾಗಿದೆ.

ಅರಣ್ಯದ ಅಂಚಿನವರೆಗೂ ಪಸರಿಸಿದ ಬೆಂಕಿಯನ್ನು ಆರಿಸಲಾಗಿದ್ದು ಯಾವುದೇ ಅಪಾಯದ ಸ್ಥಿತಿ ಇಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.


ಚಾರ್ಮಾಡಿ ಘಾಟಿಯ ವ್ಯೂ ಪಾಯಿಂಟ್ ನಲ್ಲಿ ನಿಂತು ಗಮನಿಸಿದರೆ ಹಗಲಲ್ಲಿ ದಟ್ಟ ಹೊಗೆ ಆವರಿಸಿರುವುದು ಹಾಗೂ ರಾತ್ರಿ ಸಮಯ ಬೆಂಕಿಯ ಪ್ರಖರತೆ ಕಳೆದ ಎರಡು ದಿನಗಳಿಂದ ಕಂಡು ಬರುತ್ತಿರುವ ಕುರಿತು ವಾಹನ ಸವಾರರು ತಿಳಿಸಿದ್ದಾರೆ.

ಪ್ರಸ್ತುತ ಬೆಂಕಿ ಕಲ್ಲುಗಳ ಪ್ರದೇಶದಲ್ಲಿ ಇದ್ದು ಬಾರಿಮಲೆಯ ಒಂದು ಭಾಗದ ಕಡೆ ಹಳ್ಳ ಇನ್ನೊಂದು ಕಡೆ ಹೊಳೆ ಇದೆ ಈ ಕಾರಣದಿಂದ ಚಾರ್ಮಾಡಿ ಅರಣ್ಯ ಹಾಗೂ ಇನ್ನೊಂದು ಬದಿಯಲ್ಲಿರುವ ನೆರಿಯ ಮೀಸಲು ಅರಣ್ಯಕ್ಕೆ ಹರಡುವ ಸಾಧ್ಯತೆ ಇಲ್ಲ ಎಂದು ಬೆಳ್ತಂಗಡಿಯ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಬಿ.ಜಿ. ತಿಳಿಸಿದ್ದಾರೆ.
ಪ್ರಸ್ತುತ ಬೆಳಿಗ್ಗೆ ಸಂಜೆ ಹೊತ್ತಿಗೆ ಬೀಸುವ ಗಾಳಿ ಬೆಂಕಿ ಹರಡಲು ಕಾರಣವಾಗಲೂಬಹುದು.


ಚಾರ್ಮಾಡಿ ಉಪವಲಯ ಅರಣ್ಯಾಧಿಕಾರಿ ರವೀಂದ್ರ ಅಂಕಲಗಿ, ಸಿಬ್ಬಂದಿಗಳಾದ ರವಿ ಹಾಗೂ ಗೋಪಾಲ್ ದಕ ವಿಭಾಗದ ಘಾಟಿ ಹಾಗೂ ಅರಣ್ಯದ ಹಲವು ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದು ಯಾವುದೇ ಅಪಾಯದ ಸನ್ನಿವೇಶ ಇರುವುದಿಲ್ಲ ಎಂದು ಹೇಳಿದ್ದಾರೆ. ಘಾಟಿ ಪ್ರದೇಶದಲ್ಲಿ ಬೆಂಕಿ ರೇಖೆ ನಿರ್ಮಿಸಲಾಗಿದ್ದು ರಸ್ತೆ ಬದಿ ಬೆಂಕಿ ಹರಡುವ ಸಾಧ್ಯತೆ ಇಲ್ಲ ಆದರೆ ಕಾಡಿನ ಒಳಭಾಗದಲ್ಲೂ ಒಣಹುಲ್ಲು ಇದ್ದು ಇಲ್ಲಿ ಶಿಕಾರಿಯವರು, ಕಿಡಿಗೇಡಿಗಳು ಕಾಲಿಟ್ಟರೆ ಅಪಾಯ ತಪ್ಪಿದ್ದಲ್ಲ.

Related posts

ಸೋಣಂದೂರು: ಕೊಲ್ಪದಬೈಲು ಸಮೀಪ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಹಾನಿ: ಮೆಸ್ಕಾಂ ಇಲಾಖೆಯಿಂದ ತೆರವು ಕಾರ್ಯ

Suddi Udaya

ಎನ್. ಆರ್ ಪುರ ಬಳಿ ಬೈಕಿಗೆ ಕಾರು ಡಿಕ್ಕಿ : ಬೈಕ್ ಸವಾರ ಓಡಿಲ್ನಾಳದ ಯುವಕ ಸಾವು

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದಿಂದ ಉಚಿತ ಬಸ್ಸು ಪಾಸು ವಿತರಣೆ

Suddi Udaya

ಕಾನರ್ಪ ಕೋಡಿಯಾಲ್ ಬೈಲ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕಾನರ್ಪ ಪ್ರೀಮಿಯರ್ ಲೀಗ್ – 2024 ಕ್ರಿಕೇಟ್ ಪಂದ್ಯಾಟ

Suddi Udaya

ಪಡಂಗಡಿ ರಸ್ತೆಯ ಗುಂಡಿಗಳನ್ನು ಸಿಮೆಂಟ್ ವೆಟ್ ಮಿಕ್ಸ್ ಹಾಕಿ ದುರಸ್ಥಿ

Suddi Udaya

ಶಿಶಿಲ: ಕೊಳ್ಕೆಬೈಲು ಸ.ಕಿ.ಪ್ರಾ. ಶಾಲೆಯ ಶಿಕ್ಷಕಿ ಸುಗುಣ ಕುಮಾರಿ ಸೇವಾ ನಿವೃತ್ತಿ

Suddi Udaya
error: Content is protected !!